ಒಂದು ದಿನ ಕೈಗೆ ಸಿಕ್ಕ ನನ್ನ ಒಂದನೇ ಹುಟ್ಟು ಹಬ್ಬದ ಆಲ್ಬಂ ಅನ್ನು ಸುಮ್ಮನೆ ತಿರುವಿದಾಗ ಅಂದಿನ ಸಂಭ್ರಮ, ಆಚರಣೆಯನ್ನು ಫೋಟೋದÇÉೇ ನೋಡಿ ಕಣ್ತುಂಬಿಕೊಂಡಾಗ “ಜನ ಬಾರಿ ಪೋಷ್ ಮಾರ್ರೆ’ ಎಂಬ ಬಿಗುಮಾನವೊಂದು ನನ್ನಲ್ಲಿ ನನಗೇ ಮೂಡಿಬಂತು!
ಅಜ್ಜ – ಅಜ್ಜಿ, ಅತ್ತೆ – ಮಾವ ಹೀಗೆ ಸಂಬಂಧಿಕರು ನೀಡಿದ ಚಿನ್ನ, ಬೆಳ್ಳಿಯ ಉಡುಗೊರೆಯ ಫೋಟೋಗಳನ್ನು ನೋಡಿದಾಗಲಂತೂ ಪೀಪಲ್ ವೇರ್ ಆರ್ ಯು ನವ್ ಎಂಬ ಮಾತೊಂದು ಮನದಾಳದಲ್ಲಿ ರಪ್ ಅಂತ ಪಾಸಾಗಿ, ಮನಸ್ಸು ಮತ್ತೆ ಉತ್ತರವಾಗಿ ಕಾಲವೇ ಮೋಸಗಾರ ಎಂಬ ರಕ್ಷಿತ್ ಶೆಟ್ಟಿಯವರ ಸಿನಿಮಾದ ಹಾಡಿನ ಸಾಲೊಂದನ್ನು ಉತ್ತರವಾಗಿ ನೆನೆದು ಮನಸ್ಸು ಅದೇ ಹಳೇ ಜನ್ಮದಿನಗಳ ನೆನಪುಗಳತ್ತ ಜಾರಿತು.
ಪ್ರೈಮರಿಯಲ್ಲಿ ಸಿಂಡ್ರೆಲಾನಂತೆ ಉದ್ದದ ಫ್ರಾಕ್ ಧರಿಸಿ ಬರ್ತ್‌ಡೇಯಂದು ಶಾಲಾ ವರಾಂಡವಿಡೀ ಗೆಳತಿಯ ಕೈ ಹಿಡಿದು, ಕೈಯಲ್ಲಿ ಚಾಕಲೇಟ್ ಡಬ್ಬ ಹಿಡಿದು ನಡೆದದ್ದು ಸಾಮಾನ್ಯ ಸಂಗತಿಯೇ?! ಅದೇ ಬರ್ತ್ ಡೇ. ಇನ್ನೂ ಆ ದಿನ ಶಾಲಾ ಅಸ್ಲೆಂಬಿಯಲ್ಲಿ ಕೇಳಿ ಬರುವ ಹ್ಯಾಪಿ ಬರ್ತ್ ಡೇ ಹಾಡುಗಳು, ಉಡುಗೊರೆಯಾಗಿ ಕೈ ಸೇರುವ ಶಾಲಾ ಕೈ ತೋಟದ ಹೂಗಳು ಇವೆಲ್ಲ ಕೋಟಿ ಕೊಟ್ಟರೂ ಮತ್ತೆ ಬಾರದ ಕ್ಷಣಗಳು. ಆದರೆ ಹೈಸ್ಕೂಲ್, ಕಾಲೇಜಿನ ಮೆಟ್ಟಿಲೇರುತ್ತಿದಂತೆ ಶಾಲಾ ಸಂಚಾಲಕರು ಈ ಎಲ್ಲ ಖುಷಿಗಳಿಗೂ ತಡೆಯನ್ನೊಡ್ಡಿರುತ್ತಾರೆ. ಅನಿರಿಕ್ಷೀತವಾಗಿ ಜತೆಯಾದ ಕೆಲವು ಹಾರ್ಲಿಕ್ಸ್ ಗೆಳೆಯರು ನಮ್ಮ ಜನ್ಮ ದಿನವನ್ನು ನೆನಪಿನಲ್ಲಿಟ್ಟಿರುವುದರಿಂದ ನಮ್ಮ ಆಪ್ತರಿಗೆ ಮಾತ್ರ ಸಿಹಿಯನ್ನು ನೀಡಿ ಸಂತೋಷಪಡುವ ದಿನಗಳು ನಮ್ಮದಾಗಿ ಉಳಿಯುತ್ತದೆ.
ಇನ್ನೂ ಡಿಗ್ರಿ ಮೆಟ್ಟಿಲೇರಿದಂತೆ, ಮೊಬೈಲ್ ಕೈ ಸೇರಿದಂತೆ, ಸೋಷಿಯಲ್ ಮೀಡಿಯಾಗಳಲ್ಲಿ ಸಂಪರ್ಕಜಾಲ ಹೆಚ್ಚಿದಂತೆಲ್ಲ ಒಮ್ಮೆಗೆ ಈ ಬರ್ತ್ ಡೇ ವಿಶಸ್ ಗಳು ಸೆಲೆಬ್ರಿಟಿ ಅನುಭವವನ್ನು ನೀಡಿದರೂ ಅನಂತರದಲ್ಲಿ ಕಿರಿ-ಕಿರಿಯ ಭಾವವನ್ನುಂಟು ಮಾಡುತ್ತವೆ.
ಇನ್ನೂ ಮೊಬೈಲ್ ನಿಮ್ಮ ಹಿತಶತ್ರುವಾಗಿದ್ದಲ್ಲಂತೂ ಈ ವಿಶ್‌ಗಳಿಗೆ ನೀಡಬೇಕಾದ ರೀಪ್ಲೇಗಳನ್ನು ನೆನೆದು ಯಾಕಾದರೂ ಹುಟ್ಟಿದೆನೋ ಎಂಬ ಜುಗುಪ್ಸಾ ಭಾವ ಹುಟ್ಟಿ ಬರುತ್ತದೆ. ಕದಡಿದ ಸಲಿಲ ತಿಳಿಯಾಗುವಂತೆ ಕಾಲಕ್ರಮೇಣ ಪರಿಸ್ಥಿತಿ, ಮನಸ್ಥಿತಿಗಳೆಲ್ಲವೂ ಸುಧಾರಿಸುತ್ತದೆ.
ಪ್ರತೀ ವರ್ಷದ ಕೇಕ್ ಕಟ್ಟಿಂಗ್ ನಲ್ಲಿ ಕೂಡ ನಿರಾಸಕ್ತಿ ಮೂಡಲಾರಂಭಿಸುತ್ತದೆ. ವಯಸ್ಸು ಜಾಸ್ತಿಯಾದಂತೆ ಆಯಸ್ಸು ಕಡಿಮೆಯಾದಂತೆ ನಮ್ಮ ಬರ್ತ್‌ಡೇ ನಮಗೆ ನೆನಪಿಲ್ಲದಷ್ಟೂ ಅಪರಿಚಿತವಾಗಿ ಬಿಡುತ್ತದೆ. ಆಗೆಲ್ಲಾ ಜನ್ಮದಿನವನ್ನು ನೆನಪಿಸುವುದು ಏರ್ಟೆಲ್, ಜೀಯೋ, ಬ್ಯಾಂಕ್ ನವರ ಇನ್ ಬಾಕ್ಸ್ ಸಂದೇಶಗಳ ಜತೆಗೆ ದೇವಸ್ಥಾನಗೊರೊ ಪೋದು ಬರ್ಕ ಎಂಬ ಹೆತ್ತಮ್ಮನ ಮಾತುಗಳೇ.
ವಿಧಿಶ್ರೀ,
ಬಂಟ್ವಾಳ