Advertisement

ಕಾಮಗಾರಿ ಮುಕ್ತಾಯ; ದಡೇಸೂಗೂರ ಹರ್ಷ

09:01 AM Jul 25, 2020 | Suhan S |

ಕಾರಟಗಿ: ತುಂಗಭದ್ರಾ ಎಡದಂಡೆ ಕಾಲುವೆ ಆಧುನೀಕರಣ ಕಾಮಗಾರಿ ಮುಕ್ತಾಯಗೊಂಡು ಕಾಲುವೆ ಸಿದ್ಧಗೊಂಡಿರುವುದಕ್ಕೆ ಶಾಸಕ ಬಸವರಾಜ ದಡೇಸೂಗೂರ ಸಂತಸ ವ್ಯಕ್ತಪಡಿಸಿ ಅಧಿಕಾರಿಗಳು-ಗುತ್ತಿಗೆದಾರರ ಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Advertisement

ಸೋಮನಾಳ ಬಳಿಯ ಮುಕ್ತಾಯ ಹಂತದ ಎಡದಂಡೆ ಕಾಲುವೆ ಆಧುನೀಕರಣ ಕಾಮಗಾರಿ ಶುಕ್ರವಾರ ವೀಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜು.25ಕ್ಕೆ ತುಂಗಭದ್ರಾ ಜಲಾಶಯದಿಂದ ಮುಖ್ಯ ಕಾಲುವೆಗೆ ನೀರು ಬಿಡುವ ಹಿನ್ನೆಲೆಯಲ್ಲಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿದ್ದಂತೆ ಕಾಲುವೆಗೆ ನೀರು ಬಿಡಲು ನಾನೂ ಸೇರಿದಂತೆ ಅಚ್ಚುಕಟ್ಟು ಪ್ರದೇಶದ ಶಾಸಕರಾದಿಯಾಗಿ ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರುಗಳು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ ಹಿನ್ನೆಲೆಯಲ್ಲಿ ನೀರು ಬಿಡಲು ಒಪ್ಪಿ ಜು.25ಕ್ಕೆ ಬಿಡಲು ನಿರ್ಧರಿಸಿದರು. ಇದಕ್ಕಾಗಿ ನಾವು ಮುಖ್ಯಮಂತ್ರಿಗಳಿಗೆ ಅಭಿನಂದಿಸುತ್ತೇವೆ ಎಂದರು.

ಕಳೆದ 15 ದಿನಗಳಿಂದ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು ಭತ್ತ ಸಸಿ ನಾಟಿ ಕಾರ್ಯಕ್ಕೆ ಅನುಕೂಲವಾಗಿದೆ. ಇದರೊಂದಿಗೆ ಜು.25ರಂದು ತುಂಗಭದ್ರಾ ಜಲಾಶಯದಿಂದ ಜನಪ್ರತಿನಿ ಧಿಗಳು ಪೂಜೆ ಸಲ್ಲಿಸಿ ನೀರು ಬಿಡಲು ಚಾಲನೆ ನೀಡುವರು ಎಂದರು.

ಮೂರು ದಿನಗಳ ಹಿಂದೆ ಕಾಲುವೆ ಕಾಮಗಾರಿ ಸ್ಥಳಕ್ಕೆ ಮಾಜಿ ಸಚಿವ ಶಿವರಾಜ ತಂಗಡಗಿಯವರು ತಮ್ಮ ಬೆಂಬಲಿಗರೊಂದಿಗೆ ಭೇಟಿ ಕನಿಷ್ಠ ಸೌಜನ್ಯ ಇಲ್ಲದವರಂತೆ ಇಲ್ಲಿನ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಮೇಲೆ ಸಿಡಿಮಿಡಿಗೊಂಡಿದ್ದಾರೆ. ಹತ್ತು ವರ್ಷಗಳ ಕಾಲ ಕ್ಷೇತ್ರದ ಪ್ರತಿನಿಧಿಯಾಗಿ, ಸಚಿವರಾಗಿ ಅನುಭವಿ, ಬುದ್ಧಿವಂತರು ನೀರಾವರಿ ಬಗ್ಗೆ ತಿಳಿದಿರುವ ಮೇಧಾವಿಗಳು ಆಗಿರುವ ಮಾಜಿ ಸಚಿವ ತಂಗಡಗಿ ಈ ರೀತಿ ವರ್ತಿಸುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಎಇಇ ಸೂಗಪ್ಪ, ಗುತ್ತಿಗೆದಾರ ಅಮರಗುಂಡಪ್ಪ ಮೇಟಿ, ಪುರಸಭೆ ಸದಸ್ಯ ಪ್ರಮುಖರಾದ ಜಿ. ತಿಮ್ಮನಗೌಡ, ಕಾಶಿವಿಶ್ವನಾಥ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next