Advertisement
ಸಂಜೆವರೆಗೂ ಜನರ ಹರಿವು ಕಡಿಮೆ ಆಗಿರಲಿಲ್ಲ. ಬರೀ ಬೆಂಗಳೂರು ಮತ್ತು ಸುತ್ತಲಿನ ಪ್ರದೇಶಗಳಿಂದ ಮಾತ್ರವಲ್ಲ; ಹೊರರಾಜ್ಯಗಳಿಂದಲೂ ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಕೋವಿಡ್ ಹಾವಳಿ ನಡುವೆಯೂ ಈ ಸ್ಪಂದನೆಯು ಮೇಳದ ಯಶಸ್ಸನ್ನು ಸಾಕ್ಷೀಕರಿಸುವಂತಿತ್ತು. “ಕಳೆದ ಐದು ದಿನಗಳಲ್ಲಿ 16.3 ಲಕ್ಷ ಜನ ಮೇಳವನ್ನು ಕಣ್ತುಂಬಿಕೊಂಡಿದ್ದಾರೆ. ನೋಂದಣಿ ಕಡ್ಡಾಯ ಸಡಿಲಿಕೆ ಮಾಡಿದ್ದರೆ ಹಾಗೂ ಕೋವಿಡ್ ಹಾವಳಿ ಇಲ್ಲದಿದ್ದರೆ ಇನ್ನೂ ಹತ್ತು ಲಕ್ಷ ಜನ ಹರಿದುಬರುತ್ತಿದ್ದರು. ಮೇಳದಲ್ಲಿ ಏಳು ಹೊಸ ಉದ್ಯಮಿಗಳು ಐಐಎಚ್‌ಆರ್‌ನ 15 ತಂತ್ರಜ್ಞಾನಗಳಿಗೆ ಪರವಾನಗಿ ಪಡೆದು, ರೈತರಿಗೆ ಅನುಕೂಲ ಆಗುವಂತೆ ವಾಣಿಜ್ಯೀಕರಣಗೊಳಿಸಲಿದ್ದಾರೆ. ಇನ್ನು ರೋಗನಿರೋಧಕ ಶಕ್ತಿ ಹೊಂದಿರುವ ಮೆಣಸಿನಕಾಯಿ, ಜರ್ಬೆರಾ, ಕಲ್ಲಂಗಡಿ ಮತ್ತಿತರ ತಳಿಗಳಿಗೆ ರೈತರು ಹೆಚ್ಚು ಆಸಕ್ತಿ ತೋರಿಸಿದ್ದು ಕಂಡುಬಂದಿದೆ.ಒಟ್ಟಾರೆ 720 ಕೆವಿಕೆಗಳು, 900 ಎಫ್ ಪಿಒಗಳು ಇದರಲ್ಲಿ ಭಾಗವಹಿಸಿದ್ದವು’ ಎಂದು ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ (ಐಐಎಚ್‌ಆರ್) ನಿರ್ದೇಶಕ ಡಾ.ದಿನೇಶ್ ತಿಳಿಸಿದರು.
Related Articles
Advertisement
5 ದಿನಗಳ ಈ ಮೇಳದಲ್ಲಿ ಎಂದೂ ಕೂಡ ಊಟೋಪಚಾರಕ್ಕೆ ಜನರು ನೂಕುನುಗ್ಗಲು ಕಂಡುಬರಲಿಲ್ಲ. ಊಟ, ತಿಂಡಿ ವ್ಯವಸ್ಥೆ ಯನ್ನು ತುಂಬಾ ಚೆನ್ನಾಗಿ ಐಐಎಚ್‌ಆರ್ ಮಾಡಿತ್ತು. ಕಡಿಮೆ ಬೆಲೆಗೆ ನಿತ್ಯ ರುಚಿಕರ ತಿಂಡಿ ಮತ್ತು ಊಟ ನೀಡಲಾಯಿತು.
ರೈತರ ಬೆಳೆಗೆ ಬೆಲೆ ನಿಗದಿ ಅಗತ್ಯ :
ರೈತನಿಗೆ ನ್ಯಾಯವಾದ ಬೆಲೆ ಸಿಗದೆ ಮದ್ಯವರ್ತಿಗಳ ಪಾಲುಗುತ್ತಿದೆ. ರೈತರಿಗೆ ತಾವು ಬೆಳೆದ ಬೆಳೆಗಳಿಗೆ ನಿಗದಿತ ಬೆಲೆ ಸಿಗುವಂತಾಗಬೇಕು ಎಂದು ಬಿಡಿಎ ಅಧ್ಯಕ ಎಸ್.ಆರ್. ವಿಶ್ವನಾಥ್ ತಿಳಿಸಿದರು. ಮೇಳದ ಸಮಾರೋಪದಲ್ಲಿ ಮಾತನಾಡಿದ ಅವರು, ಪ್ರಧಾನಮಂತ್ರಿಗಳು 2022ರ ವೇಳೆಗೆ ರೈತರ ಆದಾಯ ದುಪ್ಪಟ್ಟು ಗೊಳಿಸುವ ಸಂಕಲ್ಪ ಮಾಡಿದ್ದಾರೆ. ಇದಕ್ಕೆ ಪೂರಕವಾಗಿ ಎಲ್ಲ ಕ್ರಮ ಕೈಗೊಳ್ಳಲಾಗುತ್ತಿದೆ. ಇದು ಸಾಧ್ಯವಾಗಬೇಕಾದರೆ, ಎಲ್ಲ ಬೆಳೆಗಳಿಗೆ ಅಗತ್ಯ ಬೆಂಬಲ ಬೆಲೆ ಅಗತ್ಯ ನಿಗದಿ ಮಾಡಬೇಕು ಎಂದು ವಿಶ್ವನಾಥ ಅಭಿಪ್ರಾಯಪಟ್ಟರು. ಬೆಂ ಕೃಷಿ ವಿವಿ ಉಪಕುಲಪತಿ ಆರ್. ರಾಜೇಂದ್ರ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.
14-15 ಲಕ್ಷ ಮೊತ್ತದ ಉತ್ಪನ್ನಗಳ ಮಾರಾಟ :
ಐದು ದಿನಗಳ ರಾಷ್ಟ್ರೀಯ ತೋಟಗಾರಿಕಾ ಮೇಳದಲ್ಲಿ ಬೀಜೋತ್ಪಾದನೆ ಸೇರಿದಂತೆ ಐಐಎಚ್‌ಆರ್‌ನ 14ರಿಂದ 15 ಲಕ್ಷ ಮೊತ್ತದ ವಿವಿಧ ಮೌಲ್ಯಾಧಾರಿತ ಉತ್ಪನ್ನಗಳು ಮಾರಾಟವಾಗಿವೆ. ಹೊಸ ರೀತಿಯ ವಿಧಾನಗಳನ್ನು ಸಾವಯವ ಕೃಷಿಗೆ ಒತ್ತು ಕೊಡುವ ಉತ್ಪನ್ನಗಳನ್ನು ಮತ್ತು ಹೊಸ ತಳಿಗಳನ್ನು ಅದರಲ್ಲೂ ರೋಗನಿರೋಧಕ ತಳಿಗಳನ್ನು ಪ್ರದರ್ಶನ ಮಾಡಿದ್ದು, ರೈತರ ಮೆಚ್ಚುಗೆಗೆ ಪಾತ್ರವಾದವು. ಬೀಜ, ಗೊಬ್ಬರ, ಮೌಲ್ಯಾಧಾರಿತ ಉತ್ಪನ್ನಗಳು ಸೇರಿ ಒಟ್ಟಾರೆ 12-15 ಲಕ್ಷ ಮೊತ್ತದಷ್ಟು ಮಾರಾಟ ಆಗಿವೆ ಎಂದು ಡಾ. ದಿನೇಶ್ ಹೇಳಿದರು.
ಇಪ್ಪತ್ತು ಲಕ್ಷ ರೂ. ವಹಿವಾಟು :
ತಳಿ, ತಂತ್ರಜ್ಞಾನಗಳ ತಾಕುಗಳ ಪೈಕಿ ಮೇಳದಲ್ಲಿ ಸುಮಾರು 250ಕ್ಕೂ ಹೆಚ್ಚು ತಾಕುಗಳಿದ್ದು, ಹೂವು-ಹಣ್ಣು-ತರಕಾರಿಗಳ ತಳಿಗಳು, ಯಂತ್ರೋಪಕರಣಗಳು ಮೆಚ್ಚುಗೆಗೆ ವ್ಯಕ್ತವಾಯಿತು. ಸುಮಾರು ನೂರರಷ್ಟು ಮಳಿಗೆಗಳಿದ್ದು, ಅಂದಾಜು 20 ಲಕ್ಷ ವಹಿವಾಟು ಆಗಿರಬಹುದು ಎಂದು ಅಂದಾಜಿಸಲಾಗಿದೆ.