Advertisement

ರಸ್ತೆ ಅತಿಕ್ರಮಣ : ವರದಿ ನೀಡಲು ಜಿ.ಪಂ. ಸೂಚನೆ

05:09 PM Feb 27, 2017 | Team Udayavani |

ಕಬಕ : ಇಡ್ಕಿದು ಗ್ರಾಮದ ಸೂರ್ಯ ಜಂಕ್ಷನ್‌ನಿಂದ ಬಂಗೇರಕೋಡಿಗೆ ಹೋಗುವ ರಸ್ತೆಯನ್ನು ಖಾಸಗಿ ವ್ಯಕ್ತಿ ಅತಿಕ್ರಮಿಸಿ ಪರವಾನಿಗೆ ಪಡೆಯದೆ ವ್ಯಾಪಾರೀಕರಣದ ಕಟ್ಟಡವನ್ನು ವಿಸ್ತರಿಸಿಯೂ ಕಟ್ಟುತ್ತಿರುವ ಕುರಿತು ನ್ಯಾಯವಾದಿ ಬೆಟ್ಟ ಈಶ್ವರ ಭಟ್‌ ನೀಡಿದ ದೂರನ್ನು ಪರಿಶೀಲಿಸಿ ವರದಿ ನೀಡುವಂತೆ ಜಿ.ಪಂ.ಮುಖ್ಯಕಾರ್ಯನಿರ್ವಹಣಾಧಿಕಾರಿಯವರು ಇಡ್ಕಿದು ಗ್ರಾ.ಪಂ. ಪಿಡಿಒಗೆ ಸೂಚಿಸಿದ್ದಾರೆ.

Advertisement

ಗ್ರಾಮದ ಗೋಪಾಲ ಸಪಲ್ಯ ಎಂಬವರು ಕಾನೂನು ನಿಯಮಗಳನ್ನು ಗಾಳಿಗೆ ತೂರಿ ಕಟ್ಟಡ ಕೆಲಸ ಮಾಡಿಸುತ್ತಿದ್ದಾರೆ. ಗ್ರಾ.ಪಂ. ಗೆ ಆಕ್ಷೇಪ ಸಲ್ಲಿಸಿದಾಗ ಒಮ್ಮೆ ಕಟ್ಟಡ ಕೆಲಸ ನಿಲ್ಲಿಸಿ ಎಂದು ಆದೇಶ ನೀಡಿದರೂ ಅದನ್ನು ಗಣನೆಗೆ ತೆಗೆದುಕೊಳ್ಳದೆ ಕಟ್ಟಡ ಕಾಮಗಾರಿ ಮುಂದುವರಿಸಿದ್ದಾರೆ.

ಈ ಅಂಗಡಿಗೆ ವ್ಯಾಪಾರಕ್ಕಾಗಿ ಬರುವವರು ವಾಹನಗಳನ್ನು ರಸ್ತೆಯಲ್ಲೇ ನಿಲ್ಲಿಸುವುದರಿಂದ ಸಾರ್ವಜನಿಕ ವಾಹನಗಳ ಸಂಚಾರಕ್ಕೆ ಅನನುಕೂಲವಾಗುತ್ತಿದೆ. ಗ್ರಾ.ಪಂ. ಕೂಡ ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಕಾಮಗಾರಿಯನ್ನು ಸ್ಥಗಿತಗೊಳಿಸಿ ರಸ್ತೆಗೆ ಆಗಿರುವ ಅತಿಕ್ರಮಣವನ್ನು ತೆರವುಗೊಳಿಸಬೇಕು ಎಂದು ಬೆಟ್ಟ ಈಶ್ವರ ಭಟ್‌ ದೂರು ನೀಡಿದ್ದರು.

ದೂರಿಗೆ ಪ್ರತ್ಯುತ್ತರವಾಗಿ ಪರಿಶೀಲನೆ ನಡೆಸಿ ವರದಿಯನ್ನು ಕಚೇರಿಗೆ ಸಲ್ಲಿಸುವಂತೆ ಜಿ.ಪಂ. ಸಿಇಒ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗೆ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next