Advertisement

ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ

12:16 PM Nov 08, 2017 | Team Udayavani |

ಹುಣಸೂರು: ಶಿಕ್ಷಣ ಕ್ಷೇತ್ರದಲ್ಲಿ ಈ ಹಿಂದೆ ಪಠ್ಯೇತರ ಚಟುವಟಿಕೆಗೆ ಅವಕಾಶ ಕಡಿಮೆ ಇರುವುದನ್ನು ಗಂಭೀರವಾಗಿ ಪರಿಗಣಿಸಿದ ಶಿಕ್ಷಣ ಇಲಾಖೆ ಸಾಕಷ್ಟು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರೇವಣ್ಣ ಅಭಿಪ್ರಾಯಪಟ್ಟರು.

Advertisement

ನಗರದ ಶಿಕ್ಷಕರ ಭವನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಬಾಲಭವನ ಅಕಾಡೆಮಿ ಸಹಯೋಗದಲ್ಲಿ ಕಲಾ ಉತ್ಸವ ಮತ್ತು ಕಲಾಶ್ರೀ ಪ್ರಶಸ್ತಿಗಾಗಿ ಆಯೋಜಿಸಿದ್ದ ಸ್ಪರ್ಧೆಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

2-3 ದಶಕಗಳ ಹಿಂದೆ ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಯಲ್ಲಿನ ಪ್ರತಿಭೆಯನ್ನು ಗುರುತಿಸುವ ಅವಕಾಶ ಕಡಿಮೆಯಿತ್ತು. ಆದರೆ ಇಂದು ಪ್ರತಿಭಾ ಕಾರಂಜಿ, ಇನ್ಸ್‌ಸ್ಪೈರ್‌x ಅವಾರ್ಡ್‌, ಕಲಾಶ್ರೀ ಪ್ರಶಸ್ತಿಯಂತಹ ಸಾಕಷ್ಟು ದೊಡ್ಡದಾದ ವೇದಿಕೆಗಳು ಅವರಿಗಾಗಿಯೇ ರೂಪುಗೊಂಡಿವೆ. ಇಂತಹ ಚಟುವಟಿಕೆಗಳು ಮಕ್ಕಳ ಬುದ್ಧಿಮತ್ತೆಯನ್ನು ಮತ್ತಷ್ಟು ಹೆಚ್ಚಿಸುವುದರಲ್ಲಿ ಅನುಮಾನವಿಲ್ಲ ಎಂದರು.

ಸಿಡಿಪಿಒ ಯು.ನವೀನ್‌ಕುಮಾರ್‌, ಆಯ್ಕೆಯಾದ ವಿದ್ಯಾರ್ಥಿಗಳು ಬುಧವಾರ ಮೈಸೂರಿನಲ್ಲಿ ನಡೆಯಲಿರುವ ಜಿಲ್ಲಾಮಟ್ಟದ ಸ್ಪರ್ಧೆಗೆ ತೆರಳಲು ಉಚಿತವಾಗಿ ಅವಕಾಶ ಕಲ್ಪಿಸಲಾಗಿದೆ. ಚಿತ್ರಕಲೆ, ಕರಕುಶಲೆ, ಜೇಡಿಮಣ್ಣಿನ ಕಲೆ, ಕಥೆ, ಕವನ, ಪ್ರಬಂಧ, ಶಾಸ್ತ್ರೀಯ, ಜಾನಪದ ನೃತ್ಯ, ಸಂಗೀತ, ಏಕಪಾತ್ರಾಭಿನಯ, ವಿಜ್ಞಾನಕ್ಕೆ ಸಂಬಂಧಿಸಿದ ಮಾದರಿ ಪ್ರದರ್ಶನದ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಇಸಿಒ ಹೊನ್ನಾಚಾರ್‌, ಶಿಕ್ಷಣ ಸಂಯೋಜಕ ಮಹದೇವ್‌, ಸಿಆರ್‌ಪಿ ಕುಮಾರ್‌, ಬಿಆರ್‌ಟಿಗಳಾದ ಚಿಲ್ಕುಂದ ಮಹೇಶ್‌, ಸೋಮಶೇಖರ್‌, ನಿರ್ಮಲಾ, ತಾಲೂಕಿನ 20ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Advertisement

ಕಲಾಉತ್ಸವ ವಿಜೇತರಿವರು 
ಸತನಾತ್ಮಕ ಕಲೆ:
ಸಾಹಿತ್ಯ ಎಂ(ರೋಟರಿ ಶಾಲೆ),ಮೇಘನಾ ಬಿ.ಪಿ( ಮೊರಾರ್ಜಿ ವಸತಿ ಶಾಲೆ ಧರ್ಮಾಪುರ).

ಸ್ಥಜನಾತ್ಮಕ ಭರವಣಿಗೆ: ವೆ.ಎಸ್‌.ಮೇಘನಾ(ಟ್ಯಾಲೆಂಟ್‌ ಪಬ್ಲಿಕ್‌ ಶಾಲೆ), ಅಪರಾತನ್ಮನ್‌ (ರೋಟರಿ ಶಾಲೆ).

ಸೃಜನಾತ್ಮಕ ಪ್ರದರ್ಶನ ಕಲೆ: ವಿಷ್ಣು(ಸರ್ಕಾರಿ ಪ್ರೌಢಶಾಲೆ ಕಡೇಮನುಗನಹಳ್ಳಿ), ಚಂದ್ರು(ಸರ್ಕಾರಿ ಪ್ರೌಢಶಾಲೆ(ಹರವೆ).

ವಿಜ್ಞಾನದಲ್ಲಿ ನೂತನ ಆವಿಷ್ಕಾರ: ಎಂ.ಎನ್‌.ನಂದೀಶ(ಆದರ್ಶ ವಿದ್ಯಾಲಯ ಹುಣಸೂರು), ದಾದ್ವಿಕ್‌(ರೋಟರಿ ಪ್ರೌಢಶಾಲೆ).

Advertisement

Udayavani is now on Telegram. Click here to join our channel and stay updated with the latest news.

Next