ರಬಕವಿ-ಬನಹಟ್ಟಿ: ಸಾರ್ವಜನಿಕ ಚುನಾವಣೆಯ ಸಂದರ್ಭದಲ್ಲಿ ದೇಶದ ಮತದಾರರನ್ನು ಸಕ್ರಿಯವಾಗಿ ಭಾಗವಹಿಸುವುದು, ಉತ್ತೇಜಿಸುವುದು ರಾಷ್ಟ್ರೀಯ ಮತದಾರರ ದಿನಾಚರಣೆಯ ಮುಖ್ಯ ಉದ್ಧೇಶವಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಸರ್ಕಾರ ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆ ಹಮ್ಮಿಕೊಳ್ಳುತ್ತಿದ್ದು, ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸುವುದರ ಮೂಲಕ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳಬೇಕು ಎಂದು
ರಬಕವಿ ಬನಹಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಪ್ರೊ| ಶಂಕರ ಅರಬಳ್ಳಿ ಹೇಳಿದರು.
ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ಜಾಗೃತಿ ಕಾರ್ಯಕ್ರಮ ನಿಮಿತ್ತವಾಗಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ವಿವಿಧ ಸ್ಪರ್ಧೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.ವಿದ್ಯಾರ್ಥಿಗಳಿಗಾಗಿ ಪ್ರಬಂಧ, ಭಿತ್ತಿಚಿತ್ರ, ರಸ ಪ್ರಶ್ನೆ ಹಾಗೂ ಇಂಗ್ಲಿಷ್ ಪ್ರಬಂಧ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ಪ್ರಾಚಾರ್ಯ ಅರಬಳ್ಳಿ ತಿಳಿಸಿದರು.
ಪ್ರಬಂಧ ಸ್ಪರ್ಧೆ: ಮಲ್ಲಪ್ಪ ಚಿಮ್ಮಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಬಕವಿ ಬನಹಟ್ಟಿ (ಪ್ರಥಮ), ರೂಪಾ ಕರಿಗಾರ ದಾನಿಗೊಂಡ ವಾಣಿಜ್ಯ ಕಾಲೇಜು ತೇರದಾಳ (ದ್ವಿತೀಯ); ಭಿತ್ತಿ ಚಿತ್ರ ಸ್ಪರ್ಧೆ: ಸಹನಾ ಚಿಂಚಖಂಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಬಕವಿ ಬನಹಟ್ಟಿ(ಪ್ರಥಮ), ಅಕ್ಷತಾ ಕಾಂಬಳೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತೇರದಾಳ (ದ್ವಿತೀಯ); ರಸ ಪ್ರಶ್ನೆ: ಪ್ರವೀಣ ತುಂಗಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಬಕವಿ ಬನಹಟ್ಟಿ ( ಪ್ರಥಮ), ವರುಣಾ ಕುಚನೂರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತೇರದಾಳ (ದ್ವಿತೀಯ);
ಇಂಗ್ಲಿಷ್ ಪ್ರಬಂಧ ಸ್ಪರ್ಧೆ: ಕಿರಣ ಗೇಣಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಬಕವಿ ಬನಹಟ್ಟಿ (ಪ್ರಥಮ),ಆನಂದ ರಾಯನಗೌಡರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಬಕವಿ ಬನಹಟ್ಟಿ (ದ್ವಿತೀಯ)ಬಹುಮಾನ ಪಡೆದಿದ್ದಾರೆ. ಪ್ರೊ| ಶಂಕರ ಅರಬಳ್ಳಿ, ಡಾ| ಎಂ.ಎಚ್.ತಹಶೀಲ್ದಾರ್, ಮಹಾಂತೇಶ ರಡ್ಡೆರಟ್ಟಿ, ವಿವಿಧ ಪದವಿ ಕಾಲೇಜುಗಳ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಇದ್ದರು.