Advertisement

ಜಿಲ್ಲೆಯ ಪ್ರತಿಭಾನ್ವಿತ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಿ

07:25 AM Feb 17, 2019 | Team Udayavani |

ದಾವಣಗೆರೆ: ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ತರುವ ನಿಟ್ಟಿನಲ್ಲಿ ಜಿಲ್ಲೆಯ ಕ್ರೀಡಾಪಟುಗಳನ್ನು ಬೆಳೆಸಲು ದೊಡ್ಡ ದೊಡ್ಡ ಉದ್ಯಮಗಳು, ದಾನಿಗಳು ಮುಂದೆ ಬರಬೇಕು ಎಂದು ಪಾಲಿಕೆ ಸದಸ್ಯ ದಿನೇಶ್‌ ಕೆ. ಶೆಟ್ಟಿ ಹೇಳಿದರು.

Advertisement

ನಗರದ ಪಿ.ಬಿ. ರಸ್ತೆಯ ಶ್ರೀ ಬೀರಲಿಂಗೇಶ್ವರ ಮೈದಾನದಲ್ಲಿ ಶನಿವಾರ ದಾವಣಗೆರೆ ಕ್ರೀಡಾ ಸಂಸ್ಥೆ ವತಿಯಿಂದ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ರಾಜ್ಯಮಟ್ಟದ ಹೊನಲು ಬೆಳಕಿನ ಪುರುಷರ ಆಹ್ವಾನಿತ ಖೋ-ಖೋ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಸಾಕಷ್ಟು ಪ್ರತಿಭಾನ್ವಿತ ಕ್ರೀಡಾಪಟುಗಳಿದ್ದಾರೆ. ಆದರೆ, ಅವರಿಗೆ ಅಗತ್ಯ ಆರ್ಥಿಕ ನೆರವು, ಮನೆಯಲ್ಲಿ ಪ್ರೋತ್ಸಾಹ ಸಿಗದೇ ಹಿಂದೆ ಬೀಳುತ್ತಿದ್ದಾರೆ. ಹಾಗಾಗಿ ಅಂತಹ ಕ್ರೀಡಾಪಟುಗಳ ನೆರವಿಗೆ ದೊಡ್ಡ ದೊಡ್ಡ ಉದ್ಯಮಗಳು, ದಾನಿಗಳು ಧಾವಿಸಬೇಕು. ಆಗ ಜಿಲ್ಲೆಯ ಕ್ರೀಡಾಪಟುಗಳು
ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ತರಲು ಸಾಧ್ಯವಾಗುತ್ತದೆ ಎಂದರು. ಕಳೆದ ಏಳೆಂಟು ವರ್ಷಗಳಿಂದ ದಾವಣಗೆರೆ ನಗರದಲ್ಲಿ ಖೋ-ಖೋ ಕ್ರೀಡಾಕೂಟಗಳು ನಡೆಯುವುದೇ ಕಡಿಮೆ ಆಗಿತ್ತು. ಇಂತಹ ಸಂದರ್ಭದಲ್ಲಿ ದೇಶಿಯ ಕ್ರೀಡೆಗಳನ್ನು ಉತ್ತೇಜಿಸುವ ಸಲುವಾಗಿ ದಾವಣಗೆರೆ ಕ್ರೀಡಾಸಂಸ್ಥೆ ಮುಂದಾಗಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು.

ಕ್ರೀಡಾಪಟುಗಳು ಕೇವಲ ಕ್ರೀಡೆಗೆ ಸೀಮಿತವಾಗದೇ ವಿದ್ಯಾಭ್ಯಾಸದಲ್ಲೂ ಆಸಕ್ತಿ ವಹಿಸಬೇಕು. ಆಗ ಕ್ರೀಡೆಯಲ್ಲಿನ ಸಾಧನೆ ಮುಂದಿನ ಭವಿಷ್ಯಕ್ಕೆ ದಾರಿದೀಪವಾಗುತ್ತದೆ ಎಂದರು. ಪಂದ್ಯಾವಳಿಯಲ್ಲಿ ಮೂಡಬಿದರೆ ಆಳ್ವಾಸ್‌, ಕೋಲಾರ ಕೆ.ಕೆ.ಸಿ, ಬೆಂಗಳೂರಿನ ಪಯನಿಯರಸ್‌, ಯಂಗ್‌
ಪಯನಿಯರಸ್‌, ಬಿ.ಸಿ.ಕೆ.ಎಚ್‌, ಭಜರಂಗ್‌ಬಲಿ, ಹಾಸನದ ಹಾಸನಾಂಬ, ಮೆಸೂರು ಜಿಲ್ಲಾ ತಂಡ, ಭದ್ರಾವತಿಯ ಸರ್‌. ಎಂ.ವಿ, ದಾವಣಗೆರೆಯ ನ್ಪೋಟ್ಸ್‌ ಕ್ಲಬ್‌, ನವ ಭಾರತ್‌ ನ್ಪೋಟ್ಸ್‌ ಕ್ಲಬ್‌ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ 12 ತಂಡಗಳು ಭಾಗವಹಿಸಿದ್ದವು.

ಸಂಸ್ಥೆ ಅಧ್ಯಕ್ಷ ಎ.ಜಿ. ಮಂಜುನಾಥ್‌ ಅಧ್ಯಕ್ಷತೆ ವಹಿಸಿದ್ದರು. ಪಾಲಿಕೆ ಸದಸ್ಯೆ ರೇಖಾ ನಾಗರಾಜ್‌, ಪಾಲಿಕೆ ಸದಸ್ಯ ಜೆ.ಎನ್‌. ಶ್ರೀನಿವಾಸ್‌, ಎ.ಎಸ್‌. ಮೃತ್ಯುಂಜಯ, ಉಪಾಧ್ಯಕ್ಷ ಎಸ್‌. ಪ್ರದೀಪ್‌ಕುಮಾರ್‌, ಎಸ್‌.ಎನ್‌. ಚಿದಂಬರ್‌, ಮುಕುಂದ್‌, ಸುರೇಶ್‌, ಧರ್ಮರಾಜ್‌, ಟಾರ್ಗೆಟ್‌ ಅಸ್ಲಾಂ, ವಾಟಾಳ್‌
ನಾಗರಾಜ್‌, ಜೆ.ಜಿ. ಶಿವಪ್ರಕಾಶ್‌, ಇ.ಎಂ. ಮಂಜುನಾಥ್‌, ಮೂರ್ತಿ, ಜೆ.ಕೆ. ಕೊಟ್ರಬಸಪ್ಪ ಸೇರಿದಂತೆ ಹಿರಿಯ ಕ್ರೀಡಾಪಟುಗಳು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next