ಲೋಕಾಪುರ: ಗ್ರಾಮೀಣ ಭಾಗದ ಜಾನಪದ ಕಲೆ ಉಳಿಸಿ ಬೆಳೆಸಿದ ಕಲಾವಿದರ ಮಕ್ಕಳನ್ನು ನಾವೆಲ್ಲರೂ ಪ್ರೋತ್ಸಾಹಿಸಬೇಕು ಎಂದು ಹಂಪಿ ವಾಲ್ಮೀಕಿ ಅಧ್ಯಯನ ಪೀಠ ಕನ್ನಡ ವಿಶ್ವವಿದ್ಯಾಲಯ ಮುಖ್ಯಸ್ಥ ಡಾ| ವೀರೇಶ ಬಡಿಗೇರ ಹೇಳಿದರು.
ಸ್ಥಳೀಯ ವಿದ್ಯಾಚೇತನ ಪ್ರಾಥಮಿಕ ಶಾಲೆ ಆವರಣದಲ್ಲಿ ಕರ್ನಾಟಕ ಜಾನಪದ ಪರಿಷತ್ ಹಾಗೂ ಜಿಲ್ಲಾ, ತಾಲೂಕು ಇವರ ಆಶ್ರಯದಲ್ಲಿ ಕರ್ನಾಟಕ ಜಾನಪದ ಪರಿಷತ್ ಲೋಕಾಪುರ ವಲಯ ಘಟಕ ಉದ್ಘಾಟನಾ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಲ್ಲ ಕಲಾವಿದರು ಮಕ್ಕಳು ಹೆಚ್ಚಿನ ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸಿ ಸಮಾಜದಲ್ಲಿ ಒಳ್ಳೆಯ ಪ್ರತಿಭಾವಂತರಾಬೇಕು. ಈ ಸಂದರ್ಭದಲ್ಲಿ ಕಜಾಪ ವತಿಯಿಂದ ಕಲಾವಿದರ ಮಕ್ಕಳನ್ನು ಸನ್ಮಾನಿಸಿರುವುದು ವಿಶೇಷ ಎಂದರು.
ಜಿಲ್ಲಾ ಕಜಾಪ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಮಾತನಾಡಿ, ಜಾನಪದ ಕಲೆ ಉಳಿವಿಗಾಗಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಜಿಲ್ಲೆಯ ಕಲಾವಿದರು ಮತ್ತು ಸಾಹಿತಿಗಳನ್ನು ಗುರುತಿಸಿ ಸೂಕ್ತ ವೇದಿಕೆಗೆ ತಂದು ಗೌರವಿಸಲಾಗುವುದು. ಪ್ರತಿ ವರ್ಷ ಜಿಲ್ಲೆಯಲ್ಲಿ ತರಬೇತಿ, ಕುಮ್ಮಟಗಳನ್ನು ನಡೆಸಿ ಮಾರ್ಗದರ್ಶನ ನೀಡುವುದು. ಜಿಲ್ಲೆಯಲ್ಲಿ ಕಲಾವಿದ ಮತ್ತು ಸಾಹಿತಿಗಳ ಮಾಹಿತಿ ಕೋಶವನ್ನು ಶೀಘ್ರದಲ್ಲಿ ಬಿಡುಗಡೆಗೊಳಿಸುವಂತಹ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ತಾಲೂಕು ಕಸಾಪ ಅಧ್ಯಕ್ಷ ಸಂಗಮೇಶ ನೀಲಗುಂದ ಅಭಿನಂದನ ನುಡಿ ಹೇಳಿದರು. ತಾಲೂಕು ಕಸಾಪ ಗೌರವ ಕಾರ್ಯದರ್ಶಿ ವೆಂಕಟೇಶ ಗುಡ್ಡೆಪ್ಪನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ಡಾ| ಅಶೋಕ ನರೋಡೆ ಅವರ ಜಾನಪದ ಜಗತ್ತು ಪುಸ್ತಕ ಲೋಕಾರ್ಪಣೆಗೊಳಿಸಲಾಯಿತು. ಎಸ್ ಎಸ್‌ಎಲ್‌ಸಿಯಲ್ಲಿ ಅತಿ ಉತ್ತಮ ಅಂಕ ಪಡೆದು ಪಾಸಾದ ಒಟ್ಟು 48 ಕಲಾವಿದರ ಮಕ್ಕಳನ್ನು ಹಾಗೂ ಸಾಹಿತಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಜ್ಞಾನೇಶ್ವರ ಮಠದ ಬ್ರಹ್ಮಾನಂದ ಸ್ವಾಮೀಜಿ ಸಾನ್ನಿದ್ಯ ವಹಿಸಿದ್ದರು. ಹಿರಿಯ ಸಾಹಿತಿ ಡಾ| ಅಶೋಕ ನರೋಡೆ, ಜಿಲ್ಲಾ ಕಜಾಪ ಉಪಾಧ್ಯಕ್ಷ ಕಿರಣ ಬಾಳಾಗೋಳ, ಕಜಾಪ ತಾಲೂಕಾಧ್ಯಕ್ಷ ಆನಂದ ಪೂಜಾರಿ, ರಾಜ್ಯ ಸರ್ಕಾರಿ ನೌಕರ ಸಂಘದ ತಾಲೂಕಾಧ್ಯಕ್ಷ ರಮೇಶ ನಿಡೋಣಿ, ತಾಲೂಕು ಕಸಾಪ ಅಧ್ಯಕ್ಷ ಸಂಗಮೇಶ ನೀಲಗುಂದ, ತಾಲೂಕು ಕಸಾಪ ಗೌರವ ಕಾರ್ಯದರ್ಶಿ ವೆಂಕಟೇಶ ಗುಡ್ಡೆಪ್ಪನವರ, ಕಸಾಪ ವಲಯ ಘಟಕ ಅದ್ಯಕ್ಷ ವಿ.ಬಿ. ಮಾಳಿ, ಕಜಾಪ ವಲಯ ಘಟಕ ಅಧ್ಯಕ್ಷ ಎಸ್.ಎಂ. ರಾಮದುರ್ಗ, ಭಾರತಿ ಗೌಡನಹಳ್ಳಿ, ಕೃಷ್ಣಾ ಭಜಂತ್ರಿ, ಆರ್.ಆರ್.ಕೋಲ್ಹಾರ, ಕೆ.ಪಿ. ಯಾದವಾಡ, ಸುಜಾತಾ ಜೋಶಿ, ಸಿದ್ದು ಹೂಗಾರ, ಮುತ್ತು ತಂಗಳ, ಮಲ್ಲಿಕಾರ್ಜುನ ಹುಲಸೂರ, ಲೋಕಾಪುರ ಹಾಗೂ ಗ್ರಾಮದ ಸುತ್ತಮುತ್ತಲಿನ ಕಲಾವಿದರು, ಶಿಕ್ಷಕವೃಂದ ಇತರರು ಇದ್ದರು.