Advertisement

ಕುಪ್ವಾರದಲ್ಲಿ ಎನ್‌ಕೌಂಟರ್‌: ಇಬ್ಬರು ಕಟ್ಟರ್‌ ಉಗ್ರರ ಹತ್ಯೆ

05:21 PM Aug 02, 2018 | udayavani editorial |

ಶ್ರೀನಗರ : ಜಮ್ಮು ಕಾಶ್ಮೀರದ ಕುಪ್ವಾರಾದಲ್ಲಿ ಈಗ ನಡೆಯುತ್ತಿರುವ ಭೀಕರ ಗುಂಡಿನ ಕಾಳಗದಲ್ಲಿ ಭದ್ರತಾ ಪಡೆಗಳು ಇಬ್ಬರು ಕಟ್ಟರ್‌ ಉಗ್ರರನ್ನು ಹೊಡೆದುರುಳಿಸಿರುವುದಾಗಿ ವರದಿಯಾಗಿದೆ.

Advertisement

ಉತ್ತರ ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಲೊಲಾಬ್‌ ಎಂಬಲ್ಲಿನ ಖುಮ್ರಿಯಾಲ್‌ ನಲ್ಲಿ ಈ ಎನ್‌ಕೌಂಟರ್‌ ಸಾಗುತ್ತಿದೆ ಎಂದು ಭದ್ರತಾ ಪಡೆ ಮೂಲಗಳು ತಿಳಿಸಿವೆ.

ಖುಮ್ರಿಯಾಲ್‌ನಲ್ಲಿ ಕೆಲವು ಉಗ್ರರು ಅವಿತುಕೊಂಡಿದ್ದಾರೆ ಎಂಬ ಖಚಿತ ಮಾಹಿತಿ ದೊರಕಿದ ಹಿನ್ನೆಲೆಯಲ್ಲಿ ಈ ಎನ್‌ಕೌಂಟರ್‌ ಕಾರ್ಯಾಚರಣೆ ನಡೆಯುತ್ತಿದೆ ಎಂದು ಕುಪ್ವಾರಾ ಎಸ್‌ಎಸ್‌ಪಿ ಅಂಬರ್ಕರ್‌ ಶ್ರೀರಾಮ್‌ ದಿನಕರ್‌ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next