ಅಹಮದಾಬಾದ್: ಗುಜರಾತ್‌ನಲ್ಲಿ ವಿವಾದ ಕ್ಕೀಡಾಗಿದ್ದ ಎನ್‌ಕೌಂಟರ್ ಸ್ಪೆಷಲಿಸ್ಟ್‌ಗಳು ಈಗ ಚುನಾವಣೆ ಕಣಕ್ಕಿಳಿಯಲು ಉತ್ಸುಕರಾಗಿದ್ದಾರೆ. ನಕಲಿ ಎನ್‌ಕೌಂಟರ್ ಆರೋಪದಲ್ಲಿ ಖುಲಾಸೆಯಾಗಿರುವ ಪೊಲೀಸ್ ಅಧಿಕಾರಿಗಳಾದ ಎನ್ ಕೆ ಅಮಿನ್, ತರುಣ್ ಬರೋತ್ ಮತ್ತು ಡಿ.ಜಿ. ವಂಜಾರಾ ಈ ಬಾರಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
ವಡೋದರಾದಲ್ಲಿ ಡಿವೈಎಸ್‌ಪಿ ಆಗಿ ನಿವೃತ್ತರಾಗಿರುವ ಬರೋತ್, ಇಶ್ರತ್ ಜಹಾನ್ ಪ್ರಕರಣದಲ್ಲಿ ಆರೋಪಿಯಾಗಿದ್ದರು. ಇವರು ಬಾಪುನಗರದಲ್ಲಿ ಸ್ಪರ್ಧಿಸಲು ಬಯಸಿದ್ದಾರೆ. ಎನ್ ಕೆ ಅಮಿನ್ ಅಹಮ ದಾಬಾದ್‌ನ ಅಸರ್ವಾರಾ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ ಪಕ್ಷ ಇನ್ನೂ ಟಿಕೆಟ್ ಖಚಿತಪಡಿಸಿಲ್ಲ. ಈ ಬಗ್ಗೆ ಬಿಜೆಪಿ ಮುಖಂಡ ಜಿತು ವಘಾನಿ ಮಾತನಾಡಿ ಹಲವು ಮೂಲಗಳಿಂದ ನಾವು ಶಿಫಾರಸು ಪಡೆದಿದ್ದೇವೆ. ಆದರೆ ಈಗಲೇ ಈ ಬಗ್ಗೆ ಏನನ್ನೂ ಹೇಳಲಾಗದು. ಹೈಕಮಾಂಡ್ ಈ ಬಗ್ಗೆ ನಿರ್ಧರಿಸಲಿದೆ ಎಂದಿದ್ದಾರೆ.
ಅವಕಾಶ ನೀಡಿದರೆ ನಾನು ಸ್ಪರ್ಧಿಸಲು ಸಿದ್ಧ ಎಂದು ಅಮಿನ್ ಹಾಗೂ ಬರೋತ್ ಹೇಳಿದ್ದಾರೆ. ನಾನು ಪೊಲೀಸ್ ಅಧಿಕಾರಿ ಹಾಗೂ ವೈದ್ಯನಾಗಿ ಜನರ ಸೇವೆ ಸಲ್ಲಿಸಿದ್ದರಿಂದ ಜನ ನನ್ನನ್ನು ಮೆಚ್ಚಿದ್ದಾರೆ ಎಂದು ಅವರು ಹೇಳಿದ್ದಾರೆ. ಇಶ್ರತ್ ಜಹಾನ್ ಪ್ರಕರಣದಲ್ಲಿ ಇನ್ನೂ ಆರೋಪ ಎದುರಿಸುತ್ತಿರುವ ಅಮಿನ್, ಈಗಾ ಗಲೇ ಸೊಹ್ರಾಬುದ್ದೀನ್ ಎನ್‌ಕೌಂಟರ್ ಪ್ರಕರಣದಲ್ಲಿ ಆರೋಪಮುಕ್ತಗೊಂಡಿದ್ದಾರೆ. ಏಳು ವರ್ಷ ಜೈಲುವಾಸವನ್ನು ಇವರು ಅನುಭವಿಸಿದ್ದು, 2015ರ ಫೆಬ್ರವರಿಯಲ್ಲಿ ಬಿಡುಗಡೆಗೊಂಡಿದ್ದಾರೆ. ಬರೋತ್ ಕೂಡ ಇಶ್ರತ್ ಜಹಾನ್ ಮತ್ತು ಸಾದಿಕ್ ಜಮಾಲ್ ಎನ್‌ಕೌಂಟರ್ ಪ್ರಕರಣದಲ್ಲಿ ಆರೋಪಿಗಳಾಗಿ ದ್ದಾರೆ. ಇವರೂ ಮೂರು ವರ್ಷ ಜೈಲುವಾಸ ಅನುಭವಿಸಿ ಬಿಡುಗಡೆಗೊಂಡಿದ್ದಾರೆ. ಸೇವಾ ವಧಿ ವಿಸ್ತರಣೆ ಬಗ್ಗೆ ಸುಪ್ರೀಂಕೋರ್ಟ್ ಆಕ್ಷೇಪಿ ಸಿದ್ದರಿಂದ ಇವರು ರಾಜೀನಾಮೆ ನೀಡಿದ್ದರು. ಇನ್ನು ವಂಜಾರಾ ಕೂಡ ಚುನಾವಣೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಮೋದಿ 50 ರ್ಯಾಲಿ
ಗುಜರಾತ್ ಬಿಜೆಪಿ ಪ್ರಧಾನಿ ನರೇಂದ್ರ ಮೋದಿ ಅವರ 50 ರ್ಯಾಲಿಗಳನ್ನು ಆಯೋಜಿಸಿದೆ ಎನ್ನಲಾಗಿದೆ. ದಕ್ಷಿಣ ಗುಜರಾತ್, ಸೌರಾಷ್ಟ್ರ, ಕಚ್ ಮತ್ತು ಕೇಂದ್ರೀಯ ಗುಜರಾತ್‌ನಲ್ಲಿ ಸುಮಾರು 50 ರಿಂದ 70 ರ್ಯಾಲಿ ನಡೆಸಲು ನಿರ್ಧರಿಸಲಾಗಿದೆ. ನವೆಂಬರ್ 10ರಿಂದ ಪ್ರಚಾರ ಕಾರ್ಯ ಬಿರುಸಿನಿಂದ ಸಾಗಲಿದೆ. ಮೊದಲು 15 ರಿಂದ 18 ರ್ಯಾಲಿ ನಿಗದಿಸಲಾಗಿತ್ತು.