ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್‌ನಲ್ಲಿ ಶನಿವಾರ ನಡೆದ ಸೇನಾ ಕಾರ್ಯಾಚರಣೆಯಲ್ಲಿ ಐವರು ಉಗ್ರ ರನ್ನು ಹೊಡೆದುರುಳಿಸಲಾಗಿದೆ. ಆದರೆ ಉಗ್ರರ ಪರ ನಿಂತ ಸ್ಥಳೀಯರು ಯೋಧರ ಮೇಲೆ ವಿಪರೀತ ಕಲ್ಲು ತೂರಾಟ ನಡೆಸಿ ದ್ದಾರೆ. ಪ್ರತಿಭಟನಕಾರರನ್ನು ಚದುರಿಸಲು ಸೇನೆ ಗುಂಡಿನ ದಾಳಿ ನಡೆಸಿದ್ದು, ಇದರಿಂ ದಾಗಿ ಓರ್ವ ನಾಗರಿಕ ಸಾವನ್ನಪ್ಪಿದ್ದು, 12ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಉಗ್ರರ ಹತ್ಯೆ: ಶುಕ್ರವಾರ ಸಂಜೆ ಶೋಪಿಯಾನ್‌ನ ಕಿಲೂರ ಗ್ರಾಮದಲ್ಲಿ ಉಗ್ರರು ಅಡಗಿಕೊಂಡಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಸೇನೆ ಗ್ರಾಮವನ್ನು ಸುತ್ತುವರಿದಿತ್ತು. ಕಾರ್ಯಾಚರಣೆ ಆರಂಭಿಸಿದ ಕೆಲವೇ ಗಂಟೆಗಳಲ್ಲಿ ಓರ್ವ ಉಗ್ರನನ್ನು ಎನ್‌ಕೌಂಟರ್‌ನಲ್ಲಿ ಹತ್ಯೆಗೈಯಲಾಗಿತ್ತು. ಆದರೆ ಕತ್ತಲಾಗುತ್ತಿದ್ದಂತೆ ಕಾರ್ಯಾಚರಣೆ ಯನ್ನು ಸ್ಥಗಿತಗೊಳಿಸಿ, ಶನಿವಾರ ಬೆಳಗ್ಗೆ ಪುನಾರಂಭಿಸಲಾಗಿತ್ತು.
Advertisement
ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಇನ್ನೂ ನಾಲ್ವರು ಉಗ್ರರು ಸಾವನ್ನಪ್ಪಿದ್ದಾರೆ. ಉಮರ್ ನಾಜಿರ್ ಮಲಿಕ್, ವಕಾರ್ ಅಹಮದ್ ಶೇಖ್, ಏಜಾಜ್ ಅಹಮದ್ ಪೌಲ್, ಅರ್ಷದ್ ಅಹಮದ್ ಖಾನ್ ಮತ್ತು ಅರಿಫ್ ಅಹಮದ್ ಮೀರ್ ಎಂದು ಇವರನ್ನು ಗುರುತಿಸಲಾಗಿದೆ. ಎಲ್ಲ ಉಗ್ರರೂ ಸ್ಥಳೀಯರು ಎಂದು ಸೇನೆ ಹೇಳಿದೆ.ರಕ್ಷಣಾ ಖಾತೆ ಸಚಿವಾಲಯದ ವಕ್ತಾರ ಕ.ರಾಜೇಶ್ ಕಾಲಿಯ ಮಾತನಾಡಿ ಲಷ್ಕರ್ ಉಗ್ರ ಸಂಘಟನೆಯ ನವೀದ್ ಜಟ್ ಶೇಕ್ ಎಂಬ ಉಗ್ರನ ಅಂತ್ಯಕ್ರಿಯೆ ವೇಳೆ ಪ್ರತ್ಯಕ್ಷನಾಗಿದ್ದ. ಆತ ಪತ್ರಕರ್ತ ಶುಜಾತ್ ಬುಖಾರಿ ಹತ್ಯೆಯಲ್ಲಿ ಪ್ರಮುಖ ಸಂಚುಕೋರನಾಗಿದ್ದ ಎಂದಿದ್ದಾರೆ.
ಆಸ್ಪತ್ರೆಗೆ ಕೊಂಡೊಯ್ಯುತ್ತಿರುವಾಗ ಪರಾರಿಯಾಗಿದ್ದ.
Related Articles
ಸ್ವಾತಂತ್ರ್ಯ ದಿನಾಚರಣೆ ಸಮೀಪಿಸುತ್ತಿದ್ದಂತೆ, ಉಗ್ರರ ದಾಳಿ ಭೀತಿಯಿಂದಾಗಿ ದೆಹಲಿಯಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಇತ್ತೀಚೆಗಷ್ಟೇ ದಿಲ್ಲಿ ಎನ್‌ಸಿಆರ್‌ನಲ್ಲಿ ಬಾಂಗ್ಲಾದೇಶದ ಶಂಕಿತ ಉಗ್ರನನ್ನು ಬಂಧಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಭದ್ರತಾ ಕಾರ್ಯ ಚುರುಕುಗೊಂಡಿದ್ದು, ಕೆಂಪು ಕೋಟೆಯನ್ನು ಜನಸಾಮಾನ್ಯರ ವೀಕ್ಷಣೆಗೆ ಬಂದ್ ಮಾಡಲಾಗಿದೆ. ಕೆಂಪುಕೋಟೆಯ ಸುತ್ತಮುತ್ತಿರುವ 500ಕ್ಕೂ ಹೆಚ್ಚು ಸಿಸಿಟಿವಿಗಳ ನಿರಂತರ ಕಣ್ಗಾವಲು ಇಡಲಾಗುತ್ತಿದೆ. ಇನ್ನೊಂದೆಡೆ ದೇಶದ 15ಕ್ಕೂಹೆಚ್ಚು ಸೇನಾ ನೆಲೆಗಳ ಮೇಲೆ ಉಗ್ರರು ಕಣ್ಣಿಟ್ಟಿದ್ದಾರೆ ಎಂದು ಗೃಹ ಸಚಿವಾಲಯಕ್ಕೆ ಮಲ್ಟಿ ಏಜೆನ್ಸಿ ಕೋಆರ್ಡಿನೇಶನ್ ಸೆಂಟರ್ ವರದಿ ಮಾಡಿದೆ. 20ಕ್ಕೂ ಹೆಚ್ಚು ಉಗ್ರರನ್ನು ಈ ನೆಲೆಗಳ ಮೇಲೆ ದಾಳಿ ನಡೆಸಲು ನಿಯೋಜಿಸಲಾಗಿದೆ. ಇವರು ಗಡಿಯಾಚೆಗೆ ಕಾದು ಕೂತಿದ್ದಾರೆ ಎಂದು ಹೇಳಲಾಗಿದೆ.
Advertisement