Advertisement

ಖಾಲಿ ನಿವೇಶನ ಕುಡುಕರ ತಾಣ

05:24 PM Jun 20, 2018 | |

ಹಾವೇರಿ: ಊರ ಹೊರಗಿನ, ಜನಸಂಪರ್ಕ ಕಡಿಮೆ ಇರುವ ಖಾಲಿ ನಿವೇಶನಗಳು ಕುಡುಕರ ಪಾಲಿಗೆ ಓಪನ್‌ ಬಾರ್‌ ಗಳಾಗಿದ್ದು, ಎಲ್ಲೆಂದರಲ್ಲಿ ಎಸೆಯುವ ಮದ್ಯದ ಬಾಟಲಿ, ಪ್ಯಾಕೆಟ್‌ಗಳು ನಿವೇಶನ ಮಾಲೀಕರಿಗೆ ತಲೆನೋವಾಗಿ
ಪರಿಣಮಿಸಿದೆ.

Advertisement

ನಗರದ ನಂದಿನಿ ಲೇಔಟ್‌, ಮಿಡ್‌ಮ್ಯಾಕ್‌ ಲೇಔಟ್‌, ಜಿ.ಎಚ್‌. ಕಾಲೇಜು ಹಿಂಭಾಗ, ಶ್ರೀಕಂಠಪ್ಪ ಬಡಾವಣೆ, ಜಿಲ್ಲಾಧಿಕಾರಿ ಕಚೇರಿ ರಸ್ತೆಯಲ್ಲಿರುವ ಬಡಾವಣೆಗಳು ಕುಡುಕರ ಪಾಲಿಗೆ ಓಪನ್‌ ಬಾರ್‌ಗಳಾಗಿ ಪರಿವರ್ತನೆಗೊಂಡಿವೆ. ಸಂಜೆಯಾಗುತ್ತಿದ್ದಂತೆ ಈ ಬಡಾವಣೆಗಳಲ್ಲಿ ಕುಡುಕರು ಖಾಲಿ ನಿವೇಶನಗಳಲ್ಲಿ ಸೇರಿ ಕಂಠಪೂರ್ತಿ ಕುಡಿದು ಎಲ್ಲೆಂದಲ್ಲಿ ಬಾಟಲ್‌ ಬಿಸಾಕಿ ಹೋಗುತ್ತಾರೆ.

ನಗರದ ನಂದಿನಿ ಲೇಔಟ್‌, ಮಿಡ್‌ಮ್ಯಾಕ್‌ ಲೇಔಟ್‌ಗಳಲ್ಲಿ ಕುಡುಕರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇಲ್ಲಿನ
ಮಹಿಳೆಯರು ಹಾಗೂ ನಿವಾಸಿಗಳಿಗೆ ತೊಂದರೆಯಾಗುತ್ತಿದೆ. ಸಂಜೆಯಾಗುತ್ತಿದ್ದಂತೆ ಲೇಔಟ್‌ಗಳಿಗೆ ಬರುವ ಯುವಕರು ಮದ್ಯ ಸೇವಿಸಿ ಬಾಟಲ್‌ಗ‌ಳನ್ನು ಮನಸ್ಸಿಗೆ ಬಂದಂತೆ ಒಡೆದು ಹಾಕಿ ಎಲ್ಲೆಂದಲ್ಲಿ ಎಸೆದು ಹೋಗುವುದು ಸಾಮಾನ್ಯವಾಗಿದೆ. ಒಡೆದ ಬಾಟಲಿ: ಖಾಲಿ ನಿವೇಶನ ಇರುವಲ್ಲಿ ಹೆಜ್ಜೆ ಹೆಜ್ಜೆಗೂ ಮದ್ಯದ ಬಾಟಲ್‌ಗ‌ಳ ರಾಶಿ ಕಣ್ಣಿಗೆ ರಾಚುತ್ತದೆ. ಎಲ್ಲೆಂದರಲ್ಲಿ ಕುಡಿದು ಬಿಸಾಡಿರುವ ಬಿಯರ್‌ ಬಾಟಲ್‌, ವಿವಿಧ ಸ್ನಾಕ್ಸ್‌ ಪಾಕೆಟ್‌ಗಳು, ಕುಡಿದ ಮತ್ತಿನಲ್ಲಿ ರಸ್ತೆಯ ಪಕ್ಕದಲ್ಲಿಯೇ ಒಡೆದು ಹಾಕಿರುವ ಗಾಜಿನ ಬಾಟಲ್‌ಗ‌ಳು ನಿವೇಶನ ಮಾಲೀಕರಿಗೆ, ಪಾದಚಾರಿಗಳಿಗೆ ದೊಡ್ಡ ತಲೆನೋವಾಗಿದೆ.

ನೂತನ ಲೇಔಟ್‌ಗಳಲ್ಲಿ ಕುಡುಕರ ಕಾಟದಿಂದ ರಾತ್ರಿ ಭಯದ ವಾತಾವರಣ ನಿರ್ಮಾಣವಾಗುತ್ತದೆ. ಮಹಿಳೆಯರು, ಮಕ್ಕಳು ಇಲ್ಲಿ ಓಡಾಡಲು ಆತಂಕ ಪಡುವಂತಾಗಿದೆ. ನಗರದ ನೂತನ ಬಡಾವಣೆಗಳು, ಖಾಲಿ ನಿವೇಶನಗಳು ಸಂಜೆಯಾಗುತ್ತಲೇ ಕುಡುಕರ ತಾಣವಾಗುತ್ತಿದ್ದರೂ ಪೊಲೀಸ್‌ ಇಲಾಖೆ ನಿರ್ಲಕ್ಷ್ಯ  ವಹಿಸಿದೆ. ಪೊಲೀಸ್‌ ಬೀಟ್‌ ಇಲ್ಲದಿರುವುದರಿಂದ ಕುಡುಕರ ಹಾವಳಿ ಹೆಚ್ಚಾಗಿದೆ ಎಂದು ದೂರುತ್ತಿದ್ದಾರೆ .

ಕುಡಕರ ಹಾವಳಿಯಿಂದಾಗಿ ನಿವೇಶನದಲ್ಲಿ ಒಡೆದ ಬಾಟಲಿಗಳು, ಪ್ಲಾಸ್ಟಿಕ್‌ ಕಸ ಹೆಚ್ಚಾಗುತ್ತಿದೆ. ಸಂಚಾರಿಗರಿಗೂ
ತೊಂದರೆಯಾಗುತ್ತಿದೆ. ನೂತನ ಬಡಾವಣೆಗಳಿಗೆ ಪೊಲೀಸ್‌ ಬೀಟ್‌ ವ್ಯವಸ್ಥೆ ಕಲ್ಪಿಸಲಿ. 
ವೆಂಕಟೇಶ, ಹೊಸ ಬಡಾವಣೆ ನಿವಾಸಿ.

Advertisement

ಎಚ್‌.ಕೆ. ನಟರಾಜ 

Advertisement

Udayavani is now on Telegram. Click here to join our channel and stay updated with the latest news.

Next