Advertisement

ಉದ್ಯೋಗ ಖಾತ್ರಿಯಿಂದ ಜೀವನ ಹಸನು

11:56 AM Jan 21, 2021 | Team Udayavani |

ಪಾತಪಾಳ್ಯ: ಬಡವರ ಬದುಕನ್ನು ಹಸನಾಗಿಸುವುದೇ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಉದ್ದೇಶ ಎಂದು ತಾಲೂಕು ಕಾರ್ಯನಿರ್ವಹಣಾಧಿಕಾರಿ ಎಚ್‌.ಎನ್‌. ಮಂಜುನಾಥಸ್ವಾಮಿ ತಿಳಿಸಿದರು.

Advertisement

ದಾಸರಿವಾರಪಲ್ಲಿ ಊರ ಮುಂದಿನ ಕೆರೆಯಲ್ಲಿ ಕೂಲಿ ಕಾರ್ಮಿಕರು ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮಾಡುತ್ತಿದ್ದ ಹೂಳೆತ್ತುವ ಕಾಮಗಾರಿಯನ್ನು ಮಂಗಳವಾರ ವೀಕ್ಷಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶದ ಬಡತನ ನಿರ್ಮೂಲನೆಗಾಗಿ ಈ ಯೋಜನೆ ಅನುಷ್ಠಾನಗೊಳಿಸ ಲಾಗಿದೆ. ಅಕುಶಲ ದೈಹಿಕ ಕೆಲಸ ಮಾಡಲು ಇಚ್ಚಿಸುವ ಗ್ರಾಮೀಣ ಪ್ರದೇಶದ ವಯಸ್ಕರಿಗೆ ಒಂದು ಆರ್ಥಿಕ ವರ್ಷದಲ್ಲಿ ಕನಿಷ್ಠ 100 ದಿನಗಳ ಉದ್ಯೋಗಾವಕಾಶ ನೀಡಿ, ಬಡವರ ಬದುಕನ್ನು ಹಸನಾಗಿಸಲಿದೆ ಎಂದು ತಿಳಿಸಿದರು.

ಇದನ್ನೂ ಓದಿ:ಡ್ರಗ್ಸ್ ಪ್ರಕರಣ: ನಟಿ ರಾಗಿಣಿ ದ್ವಿವೇದಿಗೆ ಜಾಮೀನು ನೀಡಿದ ಸುಪ್ರೀಂ

ಕೃಷಿ ಕಾರ್ಮಿಕರಿಗೆ ಕೂಲಿ ನೀಡುವ ಉದ್ಯೋಗ, ಆಹಾರ ಭದ್ರತೆ, ದೀರ್ಘ‌ಕಾಲ ಬಾಳಿಕೆ ಬರುವಂತಹ ಸ್ವತ್ತುಗಳ ನಿರ್ಮಾಣ ಮುಂತಾದ ಕಾರ್ಯಕ್ರಮಗಳನ್ನು ಮಾಡಿಕೊಳ್ಳಬಹು ದಾಗಿದೆ. ಗ್ರಾಮೀಣ ಜನ ಯೋಜನೆಯನ್ನು ಸದ್ವಿನಿಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.  ಸಹಾಯಕ ನಿರ್ದೇಶಕ ಜಿ.ವಿ.ನಾರಾಯಣ, ಪಿಡಿಒ ಎ.ಅಬೂಬಕರ್‌ ಸಿದ್ದಿಕ್‌, ಕರ ವಸೂಲಿಗಾರ ಕೆ.ವಿ.ಶ್ರೀರಾಮಪ್ಪ, ಡಿಇಒ ಟಿ.ಎನ್‌.ಆದಿರೆಡ್ಡಿ, ಕೂಲಿ ಕಾರ್ಮಿಕರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next