Advertisement
ಗ್ರಾಮ ಪಂಚಾಯತ್ ಅಧ್ಯಕ್ಷ ಪೃಥ್ವಿರಾಜ್ ಶೆಟ್ಟಿಯವರ ನೇತೃತ್ವದಲ್ಲಿ ಇಲ್ಲಿನ ಬೂದಾಡಿ ಮದಗ, ಅರಾಡಿ ಮದಗ, ಬಿಲ್ಲಾಡಿ ಚಿಟ್ಟಿಕಟ್ಟೆ ಮದಗ, ವಂಡಾರು ಕಟ್ಕೇರಿ, ರಾವುತನಕೆರೆ ಮದಗ, ಹಳ್ಳಿಬೈಲು ಮದಗ, ಮಾರ್ವಿ ಕೇಲ್ಕೇರಿ ಮದಗ, ಕೊಕೈನ್ ಬೈಲು ಮದಗವನ್ನು ಹೂಳೆತ್ತಿ ದುರಸ್ತಿಪಡಿಸಲಾಗಿದೆ ಹಾಗೂ ಬೂದಾಡಿ ಬೈಲು ಕೃಷಿತೋಡು, ಬಿಲ್ಲಾಡಿ ಕೆಂಜಿಕೊಡ್ಲು ತೋಡು ಗಳನ್ನು ದುರಸ್ತಿಪಡಿಸಲಾಗಿದೆ ಮತ್ತು ವೈಯಕ್ತಿಕವಾಗಿ 12 ಬಾವಿ ರಚನೆಗೆ ಅನುದಾನ ನೀಡಲಾಗಿದೆ.
ಇದೀಗ ದುರಸ್ತಿಗೊಳ್ಳುತ್ತಿರುವ ಕೆರೆಗಳು ಅತ್ಯಂತ ಹಳೆಯದಾಗಿದ್ದು, ಈ ಭಾಗದ ಕೃಷಿ ಭೂಮಿಗಳಿಗೆ ನೀರುಣಿಸಲು ಹಾಗೂ ಅಂತರ್ಜಲ ವೃದ್ಧಿಗೆ ಸಹಾಯಕವಾಗಿತ್ತು. ಆದರೆ ಹತ್ತಾರು ವರ್ಷದಿಂದ ಹೂಳುತುಂಬಿ ಮುಚ್ಚಿಹೋಗುವ ಸ್ಥಿತಿ ತಲುಪಿ ನಿರುಪಯುಕ್ತವಾಗಿತ್ತು. ಇದೀಗ ಯೋಜನೆ ಮೂಲಕ ದುರಸ್ತಿಗೊಳ್ಳುತ್ತಿರುವುದರಿಂದ ಗ್ರಾಮಸ್ಥರಿಗೆ ಅನುಕೂಲವಾಗುತ್ತಿದೆ. ಪಿಡಿಒ ಪ್ರಶಾಂತ್, ಕಾರ್ಯದರ್ಶಿ ಸೀತಾರಾಮ್ ಆಚಾರ್ಯ ಕಾಮಗಾರಿಯ ಅನುಷ್ಠಾನಕ್ಕೆ ಸಹಕರಿಸಿದ್ದಾರೆ. ಪರ್ಯಾಯ ಉದ್ಯೋಗ
ಪುರಾತನ ಮದಗ, ಕೃಷಿತೋಡುಗಳನ್ನು ದುರಸ್ತಿಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದು ಇದೀಗ 8 ಮದಗಗಳ ದುರಸ್ತಿ, 2 ಕೃಷಿತೋಡು ಅಭಿವೃದ್ಧಿ ಜತೆಗೆ 12 ಬಾವಿ ತೋಡಲಾಗಿದೆ. 300 ಮಂದಿ ಕಾರ್ಮಿಕರಿಗೆ 15 ದಿನ ಕೆಲಸ ದೊರೆತಿದೆೆ.
-ಪೃಥ್ವಿರಾಜ್ ಶೆಟ್ಟಿ, ಅಧ್ಯಕ್ಷ, ಬಿಲ್ಲಾಡಿ ಗ್ರಾ.ಪಂ.