Advertisement

ಚುಕುಬುಕು ಖಾಕಿ 

01:13 PM May 29, 2018 | Team Udayavani |

– ರೈಲು ಕರೆಯಿತು, ಪೊಲೀಸ್‌ ಹುದ್ದೆಗೆ
– 9739 ರೈಲ್ವೆ ಪೊಲೀಸ್‌ ಹುದ್ದೆಗಳು

Advertisement

ರೈಲು ಪ್ರಯಾಣದ ಸಂದರ್ಭದಲ್ಲಿ ಹಾಗೂ ರೈಲು ನಿಲ್ದಾಣಗಳಲ್ಲಿ ಯಾವುದೇ ದುರ್ಘ‌ಟನೆಗಳು ನಡೆಯದಂತೆ ನೋಡಿಕೊಳ್ಳುವವರು ರೈಲ್ವೇ ಪೊಲೀಸರು. ಪ್ರಯಾಣದ ಸಂದರ್ಭದಲ್ಲಿ ಹೆಚ್ಚಾಗಿ ಕಾನ್‌ಸ್ಟೆàಬಲ್‌ಗ‌ಳೂ, ಪ್ರಕರಣದ ತನಿಖೆಯ ವೇಲೆ ಇನ್‌ಸ್ಪೆಕ್ಟರ್‌ಗಳೂ ಪ್ರಮುಖ ಪಾತ್ರ ವಹಿಸುವುದುಂಟು. ಭಾರತೀಯ ರೈಲ್ವೇ, ಖಾಲಿ ಉಳಿದಿರುವ 9739 ಕಾನ್‌ಸ್ಟೆàಬಲ್‌ ಇನ್‌ಸ್ಪೆಕ್ಟರ್‌ ಹುದ್ದೆಗಳಿಗೆ ಅರ್ಜಿ ಕರೆದಿದೆ…

ದೇಶದ ಉದ್ದಗಲಕ್ಕೂ ವ್ಯಾಪಿಸಿರುವ ಭಾರತೀಯ ರೈಲ್ವೇ, ಪ್ರಪಂಚದಲ್ಲಿಯೇ ಅತಿದೊಡ್ಡ ಹಾಗೂ ಅತಿ ಚಟುವಟಿಕೆಯ ಸಂಪರ್ಕ ಜಾಲ ಹೊಂದಿದೆ. ರಾಲ್ವೇ ಇಲಾಖೆಯಲ್ಲಿ 15 ಸಾವಿರದಷ್ಟು ರೈಲುಗಳಿದ್ದು, 16 ಲಕ್ಷದಷ್ಟು ಉದ್ಯೋಗಿಗಳಿದ್ದಾರೆ. ಇದರಲ್ಲಿ ರೈಲ್ವೆ ಆರಕ್ಷಕರದ್ದೂ ಒಂದು ಪಾಲು.

  ರೈಲ್ವೆ ನಿಲ್ದಾಣಗಳಲ್ಲಿ ಆಗುವ ಅಪರಾಧ, ಅಪಘಾತ, ಆತ್ಮಹತ್ಯೆ ಪ್ರಕರಣಗಳು ನಡೆಯದಂತೆ ನೋಡಿಕೊಳ್ಳಲು ಹಾಗೂ ಅಕಸ್ಮಾತ್‌ ಅಂಥ ದುರ್ಘ‌ಟನೆಗಳು ನಡೆದರೆ, ತನಿಖೆ ನಡೆಸುವ ಅಥವಾ ಪ್ರತಿಭಟನೆ, ಮುಷ್ಕರದ ಸಂದರ್ಭಗಳಲ್ಲಿ ಅಗತ್ಯ ಭದ್ರತೆ ಒದಗಿಸಿ ಸಾರ್ವಜನಿಕರಿಗೆ ಅನುಕೂಲ ಮಾಡುವ ಜವಾಬ್ದಾರಿ ರೈಲ್ವೆ ಆರಕ್ಷಕ ಸಿಬ್ಬಂದಿಯದ್ದಾಗಿರುತ್ತದೆ. ರೈಲ್ವೆ ವಲಯದಲ್ಲಿ ಎದುರಾಗುವ ಭಯೋತ್ಪಾದಕ ಚುಟುವಟಿಕೆಯನ್ನು ನಿಗ್ರಹಿಸುವಲ್ಲಿಯೂ ಇವರ ಶ್ರಮ ಪ್ರಮುಖಪಾತ್ರ ವಹಿಸುತ್ತದೆ. 

  ಇಂತಹ ರೈಲ್ವೆ ಇಲಾಖೆಯ ರೈಲ್ವೆ ರಕ್ಷಣಾದಳ ಮತ್ತು ರೈಲ್ವೆ ರಕ್ಷಣಾ ವಿಶೇಷ ದಳದಲ್ಲಿ ಪುರುಷ ಮತ್ತು ಮಹಿಳೆಯರು ಸೇರಿ ಒಟ್ಟು 9739 ಕಾನ್‌ಸ್ಟೆàಬಲ್‌ ಮತ್ತು ಸಬ್‌ ಇನ್‌ಸ್ಪೆಕ್ಟರ್‌ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಈ ಹುದ್ದೆಗೆ ಆಯ್ಕೆಯಾಗಲು ಬಯಸುವವರು ಈ ಕೆಳಗಿನ ಮಾಹಿತಿಯನ್ನು ತಿಳಿದುಕೊಳ್ಳಬೇಕು.

Advertisement

ವಯೋಮಿತಿ, ವಿದ್ಯಾರ್ಹತೆ
– ಕಾನ್‌ಸ್ಟೆàಬಲ್‌ ಹುದ್ದೆಗೆ ಎಸ್ಸೆಸ್ಸೆಲ್ಸಿ ಉತ್ತೀರ್ಣರಾಗಿರಬೇಕು. 18ರಿಂದ 25 ವಯೋಮಿತಿ ಹೊಂದಿರಬೇಕು. ಎಸ್ಸಿಎಸ್ಟಿ ಅಭ್ಯರ್ಥಿಗಳಿಗೆ ಐದು ವರ್ಷ, ಒ.ಬಿ.ಸಿ ಅಭ್ಯರ್ಥಿಗಳಿಗೆ ಮೂರು ವರ್ಷ ವಯೋಮಿತಿಯಲ್ಲಿ ಸಡಿಲಿಕೆಯಿದೆ.

– ಸಬ್‌ಇನ್‌ಸ್ಪೆಕ್ಟರ್‌ ಹುದ್ದೆಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿರಬೇಕು. 20ರಿಂದ 25 ವಯೋಮಿತಿ ಹೊಂದಿರಬೇಕು. ಎಸ್ಸಿಎಸ್ಟಿ, ಒಬಿಸಿ ವರ್ಗಕ್ಕೆ ವಯೋಮಿತಿಯಲ್ಲಿ ಸಡಿಲಿಕೆಯಿದೆ. 

– ಪೇದೆ ಮತ್ತು ಸಬ್‌ಇನ್‌ಸ್ಪೆಕ್ಟರ್‌ ಹುದ್ದೆಗೆ ಪುರುಷ ಅಭ್ಯರ್ಥಿಗಳು 165 ಸೆಂ.ಮೀ, ಮಹಿಳಾ ಅಭ್ಯರ್ಥಿಗಳು 157 ಸೆಂ.ಮೀ ಎತ್ತರ ಹೊಂದಿರಬೇಕು. ಪುರುಷ ಅಭ್ಯರ್ಥಿಗೆ ದೇಹದ ಸುತ್ತಳತೆ ಕುಗ್ಗಿದಾಗ 80 ಮತ್ತು ಉಬ್ಬಿದಾಗ 85 ಇರಬೇಕು. ಇದರಲ್ಲಿಯೂ ಎಸ್ಸಿಎಸ್ಸಿ, ಒಬಿಸಿ ಅಭ್ಯರ್ಥಿಗಳಿಗೆ ಸಡಿಲಿಕೆಯಿದೆ.

– ಕಾನ್‌ಸ್ಟೆàಬಲ್‌ ಹುದ್ದೆಗೆ 21,700 ರೂ. ವೇತನ ಮತ್ತು ಇತರ ಭತ್ಯೆಗಳು ಮತ್ತು ಸಬ್‌ಇನ್‌ಸ್ಪೆಕ್ಟರ್‌ಹುದ್ದೆಗೆ 35,400 ರೂ. ವೇತನ ಮತ್ತು ಇತರ ಅಲೋಯೆನ್ಸ್‌ಗಳನ್ನು ಒದಗಿಸಲಾಗುತ್ತದೆ.

ಆಯ್ಕೆ ಹೇಗೆ?
ಕಾನ್‌ಸ್ಟೆàಬಲ್‌ ಮತ್ತು ಸಬ್‌ಇನ್‌ಸ್ಪೆಕ್ಟರ್‌ ಹುದ್ದೆಗೆ ಆನ್‌ಲೈನಿನಲ್ಲಿ ಅರ್ಜಿ ಸಲ್ಲಿಕೆ ಬಳಿಕ ಕಂಪ್ಯೂಟರ್‌ ಬೇಸ್ಡ್ ಟೆಸ್ಟ್‌ ಮತ್ತು ಫಿಜಿಕಲ್‌ ಎಲಿಜಬಿಲಿಟಿ ಮತ್ತು ಫಿಜಿಕಲ್‌ ಮೆಜರ್ಮೆಂಟ್‌ ಪರೀಕ್ಷೆಗಳು ಮತ್ತು ದಾಖಲೆಗಳ ಪರಿಶೀಲನೆ ಮುಖಾಂತರ ಆಯ್ಕೆ ಮಾಡಲಾಗುತ್ತದೆ. ಕಂಪ್ಯೂಟರ್‌ ಪರೀಕ್ಷೆಯಲ್ಲಿ 90 ನಿಮಿಷದಲ್ಲಿ 120 ಅಂಕಗಳಿಗೆ 120 ಪ್ರಶ್ನೆಗಳಿಗೆ ಉತ್ತರಿಸಬೇಕು. ಇದರಲ್ಲಿ ನಕಾರಾತ್ಮಕ ಅಂಕಗಳನ್ನು ಪರಿಗಣಿಸಲಾಗುತ್ತದೆ. ಫಿಜಿಕಲ್‌ ಎಲಿಜಬಲಿಟಿ ಪರೀಕ್ಷೆಯಲ್ಲಿ 1600 ಮೀ. ಓಟ, 800 ಮೀ. ಓಟ ಮತ್ತು ಹೈ ಜಂಪ್‌, ಲಾಂಗ್‌ ಜಂಪ್‌ ದೇಹದಾಡ್ಯì  ಪರೀಕ್ಷೆಯಲ್ಲಿ ಪಡೆಯುವ ಅಂಕಗಳನ್ನೂ ಪರಿಗಣಿಸಿ ಆಯ್ಕೆ ನಡೆಯುತ್ತದೆ. 

ಅರ್ಜಿ ಸಲ್ಲಿಕೆ ಹೇಗೆ?
ಅಭ್ಯರ್ಥಿಗಳು ಕಾನ್‌ಸ್ಟೆàಬಲ್‌, ಸಬ್‌ಇನ್‌ಸ್ಪೆಕ್ಟರ್‌ ಹುದ್ದೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. (ಇದಕ್ಕೆ ಅಗತ್ಯವಾದ ದಾಖಲೆ, ಸಾಫ್ಟ್ಕಾಪಿಗಳನ್ನು ಮುಂಚಿತವಾಗಿ ಒಂದು ಫೋಲ್ಡರ್‌ನಲ್ಲಿ ಸಂಗ್ರಹಿಸಿಟ್ಟುಕೊಳ್ಳುವುದು ಒಳಿತು) goo.gl/54JUXj

ಜಾಲತಾಣದ ಮೂಲಕ ಒಳಪ್ರವೇಶಿಸಿ ನೀವು ಯಾವ ಹುದ್ದೆಗೆ ಅರ್ಜಿ ಸಲ್ಲಿಸಬೇಕೆಂದು ಆಯ್ಕೆ ಮಾಡಿಕೊಂಡು ಬಳಿಕ ತಮ್ಮ ಜನ್ಮದಿನಾಂಕ, ತಂದೆ, ತಾಯಿ ಹೆಸರು ಇತ್ಯಾದಿ ಅಗತ್ಯ ಮಾಹಿತಿಗಳನ್ನು ತುಂಬಿ ರಿಜಿಸ್ಟರ್‌ ಆಗಬೇಕು. ರಿಜಿಸ್ಟರ್‌ ಒ.ಟಿ.ಪಿ ಪಡೆದು ಪಾಸ್‌ವರ್ಡ್‌ ಬಳಸಿ, ಅಗತ್ಯ ದಾಖಲೆ, ಭಾವಚಿತ್ರ ಇತ್ಯಾದಿ ಮಾಹಿತಿ ತುಂಬಿ ಚಲನ್‌ ಪಡೆಯಬೇಕು. ನಂತರ 48 ಗಂಟೆಗಳಲ್ಲಿ ಅಂಚೆ ಕಚೇರಿಯಲ್ಲಿ ಶುಲ್ಕ ಪಾವತಿ ಮಾಡಿ, ಅಲ್ಲಿ ನೀಡುವ ಪಾವತಿ ನಂಬರನ್ನು ಜಾಲತಾಣದಲ್ಲಿ ನಮೂದಿಸಬೇಕು. ಬಳಿಕ ಪರೀಕ್ಷೆಗೆ ಸಿದ್ಧರಾಗಬೇಕು.

ಅರ್ಜಿ ಸಲ್ಲಿಕೆಗೆ ಜೂ.1ರಿಂದ 30ರವರೆಗೆ ಅವಕಾಶವಿದೆ. ಸಾಮಾನ್ಯ ವರ್ಗಕ್ಕೆ 500 ರೂ. ಮತ್ತು ಪರಿಶಿಷ್ಟರಿಗೆ 250 ರೂ. ಅರ್ಜಿ ಶುಲ್ಕವನ್ನು ನಿಗದಿ ಮಾಡಲಾಗಿದೆ.
– – –
ಹುದ್ದೆಯ ವಿಂಗಡನೆ
ರೈಲ್ವೆ ರಕ್ಷಣಾದಳದ ಪೇದೆ ಮತ್ತು ಸಬ್‌ಇನ್ಸ್‌ಪೆಕ್ಟರ್‌ ಹುದ್ದೆಗೆ ಎಸ್‌.ಆರ್‌, ಸಿ.ಆರ್‌, ಇ.ಆರ್‌, ಎನ್‌.ಆರ್‌, ಎನ್‌.ಎಫ್.ಆರ್‌, ಆರ್‌.ಪಿ.ಎಸ್‌.ಎಫ್ ಹೀಗೆ ಹುದ್ದೆಗಳನ್ನು ವಿಂಗಡನೆ ಮಾಡಲಾಗಿದೆ. ಇದರ ಜತೆಗೆ ಹುದ್ದೆಗಳನ್ನು ಯು.ಆರ್‌, ಎಸ್ಸಿ, ಎಸ್ಟಿ, ಒ.ಬಿ.ಸಿ ಎಂದು ವಿಭಜಿಸಿ ಮಹಿಳೆ ಮತ್ತು ಪುರುಷ ಅಭ್ಯರ್ಥಿಗಳಿಗೆ ವಿಂಗಡಿಸಿ ನೀಡಲಾಗಿದೆ. ಒಟ್ಟು 9739 ಹುದ್ದೆಗಳು ಖಾಲಿ ಇವೆ.

1. ಕಾನ್‌ಸ್ಟೆàಬಲ್‌ ಹುದ್ದೆ 
– ಪುರುಷ ಅಭ್ಯರ್ಥಿ: 4403
– ಮಹಿಳಾ ಅಭ್ಯರ್ಥಿ: 4216

2. ಸಬ್‌ಇನ್‌ಸ್ಪೆಕ್ಟರ್‌
– ಪುರುಷ ಅಭ್ಯರ್ಥಿ: 819
– ಮಹಿಳಾ ಅಭ್ಯರ್ಥಿ: 301 ಒಟ್ಟು 9739 ಹುದ್ದೆಗಳಿವೆ
– – –
ಸಬ್‌ಇನ್‌ಸ್ಪೆಕ್ಟರ್‌ ಹುದ್ದೆ ಮಾಹಿತಿಗೆ : goo.gl/vYbVg9

ಕಾನ್‌ಸ್ಟೆàಬಲ್‌ ಹುದ್ದೆ ಮಾಹಿತಿಗೆ:  goo.gl/zEFtCH

– ಅನಂತನಾಗ್‌ ಎನ್‌.

Advertisement

Udayavani is now on Telegram. Click here to join our channel and stay updated with the latest news.

Next