Advertisement

ವೇತನ ಪಾವತಿಗೆ ಪೌರ ಸೇವಾ ನೌಕರರ ಆಗ್ರಹ

07:03 AM May 16, 2020 | Suhan S |

ರಾಯಚೂರು: ನಗರಸಭೆ ವಾಹನ ಚಾಲಕರು, ನೀರಿನ ವಿಭಾಗದ ಗುತ್ತಿಗೆ ಕಾರ್ಮಿಕರಿಗೆ 10 ತಿಂಗಳ ವೇತನ ಪಾವತಿಸಬೇಕು ಮತ್ತು ಗುತ್ತಿಗೆದಾರ ನರಸಪ್ಪ ಅವರನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ದಿನಗೂಲಿ ಮತ್ತು ಗುತ್ತಿಗೆ ಪೌರ ಸೇವಾ ನೌಕರರ ಸಂಘದ ಸದಸ್ಯರು ಒತ್ತಾಯಿಸಿದರು.

Advertisement

ಈ ಕುರಿತು ಡಿಸಿ ಕಚೇರಿ ಕಚೇರಿ ಅಧಿಕಾರಿಗೆ ಶುಕ್ರವಾರ ಮನವಿ ಸಲ್ಲಿಸಿ, ಗುತ್ತಿಗೆ ಕಾರ್ಮಿಕರಿಗೆ ಹಲವು ತಿಂಗಳಿಂದ ವೇತನ ನೀಡಿಲ್ಲ. ವಾಹನ ಚಾಲಕರಿಗೆ ಕಳೆದ ಡಿಸೆಂಬರ್‌ನಿಂದ ಈವರೆಗೂ ವೇತನ ಪಾವತಿಸಿಲ್ಲ. ಗುತ್ತಿಗೆದಾರ ನರಸಪ್ಪ 2019ರಲ್ಲಿ ಏಳು ತಿಂಗಳ ಪಿಎಫ್‌, ಇಎಸ್‌ಐ ಹಣ ಪಾವತಿಸದ ಕಾರಣ ವೇತನ ನೀಡಲು ಬರುವುದಿಲ್ಲ ಎಂದನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ. ಇದರಿಂದ ಕಾರ್ಮಿಕರು ಸಂಕಷ್ಟ ಎದುರಿಸುವಂತಾಗಿದೆ ಎಂದು ದೂರಿದರು.

ದೇವಸೂಗುರು, ಯರಮರಸ್‌ ನೀರಿನ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಹತ್ತು ತಿಂಗಳ ವೇತನ ಪಾವತಿಸಿಲ್ಲ. ವೇತನ ಪಾವತಿಸಲು ವಿಳಂಬಕ್ಕೆ ನಗರಸಭೆ ನಿರ್ಲಕ್ಷ್ಯವೇ ಕಾರಣ. ಕೂಡಲೇ ಬಾಕಿ ವೇತನ ಪಾವತಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸಂಘದ ರಾಜ್ಯಾಧ್ಯಕ್ಷ ಎಸ್‌. ಮಾರೆಪ್ಪ ವಕೀಲರು, ಉರುಕುಂದಪ್ಪ, ಹಸನ್‌, ಯಲ್ಲಪ್ಪ, ಶಿವಾನಂದ, ನರೇಶ್‌ ಸೇರಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next