Advertisement

ನೌಕರರ ಬೇಡಿಕೆ ಈಡೇರಿಕೆಗೆ ಒತ್ತಾಯ

06:44 AM Jun 06, 2020 | Suhan S |

ಬಳ್ಳಾರಿ: ತುಟ್ಟಿ ಭತ್ಯೆ ಹೆಚ್ಚಳ ಹಿಂಪಡೆಯುವ ಆದೇಶ ರದ್ದುಮಾಡಬೇಕು ಎಂಬ ಪ್ರಮುಖ ಬೇಡಿಕೆ ಸೇರಿದಂತೆ ರಾಜ್ಯ ಸರ್ಕಾರಿ ನೌಕರರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗುರುವಾರ ಅಖೀಲ ಕರ್ನಾಟಕ ನೌಕರರ ಒಕ್ಕೂಟದಿಂದ ಅಪರ ಜಿಲ್ಲಾಧಿಕಾರಿ ಮಂಜುನಾಥ್‌ ಅವರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.

Advertisement

ರಾಜ್ಯ ಸರ್ಕಾರಿ ನೌಕರರು, ಪಿಂಚಣಿದಾರರಿಗೆ ಸಂಬಂಧಿಸಿದಂತೆ ಸರ್ಕಾರ ಆದೇಶವೊಂದನ್ನು ಹೊರಡಿಸಿ, 2020ರ ಜನವರಿಯಿಂದ 2021ರ ಜೂನ್‌ವರೆಗೆ ತುಟ್ಟಿ ಭತ್ಯೆ ಹೆಚ್ಚಳ ದರ ಸ್ಥಗಿತಗೊಳಿಸಿದೆ. ಜೊತೆಗೆ ಗಳಿಕೆ ರಜೆ ನಗದೀಕರಣ ಪದ್ಧತಿ ರದ್ದುಮಾಡಿದೆ. ಇವೆಲ್ಲ ಹಿಂಪಡೆಯಬೇಕು. ಜೊತೆಗೆ ನೌಕರರ ವಿರೋಧಿ ಅಂಶಗಳನ್ನು ಒಳಗೊಂಡಿರುವ ಸಿಸಿಎ ತಿದ್ದುಪಡಿ, ಇಲಾಖಾ ಹುದ್ದೆಗಳ ರದ್ದತಿ ಪ್ರಸ್ತಾವನೆ ಕೈಬಿಡಬೇಕು ಎಂದು ಸಂಘದ ಅಧ್ಯಕ್ಷ ಗುರುಸಿದ್ಧ ಮೂರ್ತಿ, ಕಾರ್ಯದರ್ಶಿ ಆಲಂ ಭಾಷ ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಕೋವಿಡ್ ಹೆಚ್ಚಳ ತಡೆಯುವಲ್ಲಿ ನೌಕರರು ಮುಂಚೂಣಿಯಲ್ಲಿ ಕೆಲಸಮಾಡಿದ್ದಾರೆ. ಸರ್ಕಾರಿ, ಹೊರಗುತ್ತಿಗೆ, ಗುತ್ತಿಗೆ, ದಿನಗೂಲಿ ನೌಕರರಿಗೆ ಸೂಕ್ತ ರಕ್ಷಣೆ ಇಲ್ಲವಾಗಿದೆ. ಅನೇಕ ಕಡೆಗಳಲ್ಲಿ ಅವರ ಮೇಲೆ ಹಲ್ಲೆ ನಡೆದಿದೆ. ಇದರ ಜೊತೆಗೆ ಸರ್ಕಾರ 8ರಿಂದ 10 ಗಂಟೆಗೆ ಕೆಲಸದ ಅವಧಿ ಹೆಚ್ಚಿಸಿದೆ. ಇವೆಲ್ಲ ನೌಕರರ ಆಶಯಕ್ಕೆ ವಿರುದ್ಧ ಎಂದು ಅವರು ಕಿಡಿಕಾರಿದರು. ಸಂಘಟನೆಯ ತಾಲೂಕು ಪದಾಧಿಕಾರಿಗಳು, ಮುಖಂಡರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next