Advertisement
ರಾಜ್ಯದಲ್ಲಿ 34,458 ದೇವಸ್ಥಾನಗಳಿರುವ ಕುರಿತು ಇಲಾಖೆ ಸರಕಾರಕ್ಕೆ ಈ ಹಿಂದೆ ವರದಿ ಒಪ್ಪಿಸಿದೆ. ನೌಕರರಿಗೆ 6ನೇ ಶ್ರೇಣಿ ವೇತನ ಜಾರಿಗೊಳಿಸಿದಲ್ಲಿ ಮತ್ತು ಸಂಚಿತ ನೌಕರರನ್ನು ಖಾಯಂಗೊಳಿಸಿದರೆ ಸರಕಾರಕ್ಕೆ ಹೊರೆಯಾಗುತ್ತದೆ ಎನ್ನುವುದು ಒಂದು ವಾದ. ಆದರೆ ಇಷ್ಟು ದೇವಸ್ಥಾನಗಳಿಲ್ಲ. ಸರಿಯಾಗಿ ಸರ್ವೆ ನಡೆಸಿಲ್ಲ. ನಾವು ಮೂಲ ನೌಕರರು ಎಲ್ಲ ಸೌಕರ್ಯ ಪಡೆಯಲು ನಾವು ಆರ್ಹರು ಎನ್ನುವುದು ನೌಕರರ ಪ್ರತಿವಾದ.
Related Articles
Advertisement
ವಿಳಂಬಕ್ಕೆ ಕಾರಣಸರಕಾರ ಹೊರಡಿಸಿರುವ ಆದೇಶವೇ ಪಾಲನೆಯಾಗುತ್ತಿಲ್ಲ. ಆಯುಕ್ತರ ಕಚೇರಿಯಲ್ಲಿ ಅಧಿಕಾರಿಗಳ ನಿರಂತರ ವರ್ಗಾವಣೆಯಿಂದ ಪ್ರಕ್ರಿಯೆಗಳಿಗೆ ಜೀವ ಸಿಗುತ್ತಿಲ್ಲ. ಉನ್ನತ ಅಧಿಕಾರಿಗಳು ಪ್ರಕ್ರಿಯೆ ಚುರುಕುಗೊಳಿಸಲು ಹಿಂದೇಟು ಹಾಕುತ್ತಿದ್ದಾರೆ. ನೇಮಕಾತಿ ಅಸಮರ್ಪಕ ಸಹಿತ ಅನೇಕ ತಪ್ಪುಗಳಿವೆ ಎಂಬ ಕಾರಣವನ್ನು ಅಧಿಕಾರಿಗಳು ನೀಡುತ್ತಿದ್ದಾರೆ. ಎಲ್ಲೆಲ್ಲಿ 6ನೇ ಶ್ರೇಣಿ ಜಾರಿ?
ಕೊಲ್ಲೂರು, ತಿರುಮಲ ತಿರುಪತಿ ರಾಜ್ಯ ಛತ್ರ, ಪುತ್ತೂರು ಮಹಾಲಿಂಗೇಶ್ವರ ಹಾಗೂ ಮಲೆ ಮಹದೇಶ್ವರ ಸ್ವಾಮಿ ದೇಗುಲಗಳ ನೌಕರರು ಹೋರಾಟ ನಡೆಸಿ 6ಶ್ರೇಣಿ ವೇತನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ನೌಕರರ ಬೇಡಿಕೆಗಳೇನು?
ಈ ಹಿಂದೆ ಸರಕಾರ ಮಂಜೂರು ಮಾಡಿದ ಸರಕಾರಿ ವೇತನ ಶ್ರೇಣಿಯನ್ನು ಯಥಾವತ್ತಾಗಿ ಮುಂದುವರೆಸಬೇಕು. ವೇತನ ಶ್ರೇಣಿ ವಂಚಿತರಿಗೆ ಸರಕಾರಿ ವೇತನ ಶ್ರೇಣಿ ನೀಡಲು ವೇತನ ಶ್ರೇಣಿ ನಿಧಿ ಸ್ಥಾಪಿಸಬೇಕು. 5ನೇ ವೇತನ ಶ್ರೇಣಿ ಹಾಗೂ 6ನೇ ವೇತನ ಆಯೋಗದ ಶಿಫಾರಸ್ಸಿನಂತೆ ಮಧ್ಯಂತರ ಪರಿಹಾರವನ್ನು ಕೂಡ ಮಂಜೂರು ಮಾಡಲಾಗಿದೆ. ಸರಕಾರದ ಪರಿಸ್ಕೃತ ಆದೇಶದಂತೆ ಷರತ್ತುಗಳನ್ವಯ ಹಾಲಿ ವೇತನ ಪಡೆಯುತ್ತಿರುವ ದೇಗುಲಗಳ ನೌಕರರಿಗೆ ಹೊಸ ವೇತನ ಶ್ರೇಣಿಯನ್ನು ನಿಯಮನುಸಾರ ಪರಿಶೀಲಿಸಿ ಸ್ಥಳಿಯ ಹಂತದಲ್ಲೆ ಮಂಜೂರು ಮಾಡಲು ಇಲಾಖೆ ಅನುಮತಿ ನೀಡಿದೆ. ಅದು ಸ್ಥಳಿಯ ಮಟ್ಟದಲ್ಲೆ ಜಾರಿಯಾಗಬೇಕು. ಅಂಕಿ ಅಂಶ
ಇಲಾಖೆ ವರದಿಯಂತೆ ರಾಜ್ಯದಲ್ಲಿರುವ ದೇವಸ್ಥಾನಗಳು-34,458
ಅವಿಭಜಿತ ಜಿಲ್ಲೆಯಲ್ಲಿ ನೌಕರರು -2,500 ಮಂದಿ.
ದ.ಕ ಜಿಲ್ಲೆಯ 41 ದೇವಸ್ಥಾನಗಳಲ್ಲಿರುವ ನೌಕರರು-1,600 ಮಂದಿ.
ಉಡುಪಿಯ 51 ಜಿಲ್ಲೆಯಲ್ಲಿರುವ ನೌಕರರು-900 ಮಂದಿ.
ಹೊಸ ವೇತನ ಶ್ರೇಣಿ ಪಡೆಯಲು ಆರ್ಹರು-1.111 ಮಂದಿ. ದಾಖಲೆ ಸಲ್ಲಿಸದೆ ಅಡ್ಡಿ
ನೌಕರರ ಆರನೇ ವೇತನ ಪರಿಷ್ಕರಣೆಗೆ ಸಂಬಂಧಿಸಿ ಧಾರ್ಮಿಕ ಪರಿಷತ್ ಸಭೆಯಲ್ಲಿ ಚರ್ಚೆ ನಡೆದಿದೆ. ಕೆಲವು ದೇವಸ್ಥಾನಗಳು ಸೂಕ್ತ ದಾಖಲೆ ಇನ್ನು ನೀಡಿಲ್ಲ. ಇದರಿಂದ ಅಡ್ಡಿಯಾಗಿದೆ. ದಾಖಲೆ ನೀಡಿದ ದೇವಸ್ಥಾನಗಳ ಅರ್ಹ ನೌಕರರಿಗೆ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿರುವೆ.
-ಕೋಟ ಶ್ರೀನಿವಾಸ ಪೂಜಾರಿ. ಮುಜರಾಯಿ ಸಚಿವರು. ಸರಕಾರ ಮಾನ್ಯತೆ ನೀಡುತಿಲ್ಲ
ಸರಕಾರ ನಮ್ಮ ಬೇಡಿಕೆಗಳಿಗೆ ಮಾನ್ಯತೆ ನೀಡುತ್ತಿಲ್ಲ. ದೇವಸ್ಥಾನಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರ ಸಮಸ್ಯೆಗಳಿಗೆ ಸಂಬಂಧಿಸಿ ಸಮ್ಮೇಳನ ಹಾಗೂ ಮನವಿಗಳ ಮೂಲಕ ಸರಕಾರದ ಗಮನಕ್ಕೆ ತರುವ ಪ್ರಯತ್ನವನ್ನು ಅನೇಕ ವರ್ಷಗಳಿಂದ ಮಾಡುತ್ತ ಬಂದಿದ್ದೇವೆ. ನಮ್ಮ ಬೇಡಿಕೆಗಳಿಗೆ ಸಕಾರಾತ್ಮಕ ಸ್ಪಂದನೆಯೇ ಸಿಗುತ್ತಿಲ್ಲ. ಮುಂದೆ ಮತ್ತೂಮ್ಮೆ ಸರಕಾರದ ಗಮನ ಸೆಳೆಯುತ್ತೇವೆ. ಬಳಿಕ ಕಾನೂನು ಹೋರಾಟದ ಕುರಿತು ನಿರ್ಧರಿಸುತ್ತೇವೆ.
-ಬಸವರಾಜಪ್ಪ ಆವಂಟಿ, ಅಧ್ಯಕ್ಷ. ರಾಜ್ಯ ಮುಜರಾಯಿ ದೇಗುಲಗಳ ನೌಕರರ ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರು. ನಮ್ಮ ಬೇಡಿಕೆಗೆ ಸ್ಪಂದಿಸಿ
ಸರಕಾರ ದಿನಕ್ಕೊಂದು ಸುತ್ತೋಲೆ ಹೊರಡಿಸುವ ಮೂಲಕ 1993ಕ್ಕೂ ಹಿಂದಿನಿಂದ ಕೆಲಸ ಮಾಡಿಕೊಂಡಿರುವ ನಮಗೆ ಮೋಸ ಮಾಡುತ್ತಿದೆ. ನ್ಯಾಯಕ್ಕಾಗಿ ಮೊರೆ ಇಡುತ್ತಿದ್ದರೂ ಸರಕಾರ ಸ್ಪಂದಿಸುತಿಲ್ಲ, ಸರಕಾರ ಮತ್ತು ಇಲಾಖೆಯನ್ನು ಎದುರು ಹಾಕಿಕೊಳ್ಳುವುದಕ್ಕೆ ನಾವು ಸಿದ್ಧರಿಲ್ಲ. ಕೋರ್ಟ್‌ಗೆ ಹೋಗಲು ಅವಕಾಶ ಮಾಡಿಕೊಡದ ರೀತಿಯಲ್ಲಿ ಸರಕಾರ ನಮ್ಮ ಬೇಡಿಕೆಗೆ ಸ್ಪಂದಿಸಬೇಕು.
-ಶ್ರೀಕಾಂತ ಹಡಗಲಿ, ನೊಂದ ನೌಕರ ಬಾಲಕೃಷ್ಣ ಭೀಮಗುಳಿ