ದೊಡ್ಡಬಳ್ಳಾಪುರ : ಯಾವುದೇ ಸಮುದಾಯ ಅಭಿವೃದ್ಧಿಯಾಗಬೇಕಾದರೆ ಶೈಕ್ಷಣಿಕ ಸಾಧನೆ ಅಗತ್ಯವಾಗಿದ್ದು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಒತ್ತು ನೀಡಬೇಕೆಂದುತಾಲೂಕು ಯಾದವ ಸಂಘದ ಅಧ್ಯಕ್ಷ ಪದ್ಮರಾಜ್ ಯಾದವ್ ತಿಳಿಸಿದರು.
ತಾಲೂಕು ಯಾದವ(ಗೊಲ್ಲ) ಸಂಘದ ವತಿಯಿಂದ ನಡೆದ ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿಯಲ್ಲ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಪ್ರೋತ್ಸಾಹ ಧನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯಾದವ ಸಮುದಾಯದಲ್ಲಿ ಇತ್ತೀಚೆಗೆ ಶೈಕ್ಷಣಿಕವಾಗಿ ಹಲವಾರು ಸಾಧನೆ ಮಾಡಿರುವ ಮಹನೀಯರಿರುವುದು ಹೆಮ್ಮೆಯ ಸಂಗತಿ. ಇಂತಹ ಪ್ರತಿಭೆಗಳು ವಿದ್ಯಾರ್ಥಿಗಳಿಗೆ ಮಾದರಿಯಾಬೇಕು. ಸಾಧನೆ ಮಾಡುವ ಮೂಲಕ ಸಮುದಾಯಕ್ಕೆ ಹಾಗೂ ದೇಶಕ್ಕೆ ಕೀರ್ತಿ ತರಬೇಕೆಂದರು. ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ ಬೆಳಗಾವಿ ಅವರಿಂದ ಗೌರವ ಡಾಕ್ಟರೆಟ್ ಪಡೆದ ಸುನೀಲ್ ಯಾದವ್, ರಾಷ್ಟ್ರೀಯ ಚಲನಚಿತ್ರ ಬಾಲ ನಟ ಪ್ರಶಸ್ತಿ ಪಡೆದ ಮನೋಹರ್ ಯಾದವ್ ಅವರನ್ನು ಸನ್ಮಾನಿಸಲಾಯಿತು.
ಅಂಜನಾದ್ರಿ ಚಾರಿಟಬಲ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಪಿ.ಮುನಿರಾಜು ಹಾಗೂ ರಾಜ್ಯ ಯಾದವ ಯುವಕರ ಸಂಘದ ಅಧ್ಯಕ್ಷರಾದ ಧೀರಜ್ ಮುನಿರಾಜು, ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ನಿರ್ದೇಶಕ ಎನ್.ಕೆ.ರಮೇಶ್, ತಾಲೂಕು ಸಂಘದ ಪದಾಧಿಕಾರಿಗಳಾದ ಕೃಷ್ಣಪ್ಪ, ಡಿ.ನಾಗರಾಜು, ಗುಮ್ಮನಹಳ್ಳಿ ಶ್ರೀನಿವಾಸ್, ವೇಣು ಯಾದವ್, ಯರ ತಿಪ್ಪಯ್ಯ , ಲಕ್ಷ್ಮೀ ನಾರಾ ಯಣ, ಚಿನ್ನಣ್ಣ, ಸುರೇಶ್ ಬಾಬು, ಕೃಷ್ಣ ಮೂರ್ತಿ, ವಿನೋದ್ ಕುಮಾರ್, ಯುವಕರ ಸಂಘದ ಶ್ರೀನಿವಾಸ್ ಮತ್ತಿತರರಿದ್ದರು.