Advertisement

ಯಂಗ್‌ ಇಂಡಿಯಾದಲ್ಲಿ ಉದ್ಯೋಗ ಸೃಷ್ಟಿಗೆ ಒತ್ತು : ದೇಶಪಾಂಡೆ

03:45 AM Apr 20, 2017 | Team Udayavani |

ಬೆಂಗಳೂರು: 2025ರ ವೇಳೆ ಭಾರತ ತನ್ನ ಜನಸಂಖ್ಯೆಯಲ್ಲಿ ಅತಿಹೆಚ್ಚು ಯುವಜನರನ್ನು ಒಳಗೊಂಡ ರಾಷ್ಟ್ರವಾಗಲಿದ್ದು, ಆ ಹೊತ್ತಿಗೆ ಯುವಜನರಿಗೆ ಸೂಕ್ತ ಉದ್ಯೋಗಾವಕಾಶ ಕಲ್ಪಿಸಲು ಪೂರಕವಾದ ಭೂಮಿಕೆ ಸಿದ್ಧಪಡಿಸುವ ಕಾರ್ಯಕ್ಕೆ ರಾಜ್ಯದಲ್ಲಿ ಈಗಾಗಲೇ ಚಾಲನೆ ನೀಡಲಾಗಿದೆ ಎಂದು ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಆರ್‌.ವಿ.ದೇಶಪಾಂಡೆ ತಿಳಿಸಿದರು.

Advertisement

“ಉದಯವಾಣಿ’ ಯೊಂದಿಗೆ ಮಾತನಾಡಿದ ಅವರು, ಕೈಗಾರಿಕೆಗಳ ಸ್ಥಾಪನೆಯಿಂದ ಆರ್ಥಿಕ ಪ್ರಗತಿ ಜತೆಗೆ ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ. ಹಾಗಾಗಿ ಕೈಗಾರಿಕೆಗಳ ಸ್ಥಾಪನೆಗೆ ಪೂರಕವಾದ ಮೂಲ ಸೌಕರ್ಯ ಕಲ್ಪಿಸುವ ಜತೆಗೆ ಅಗತ್ಯವಾದ ಮಾನವ ಸಂಪನ್ಮೂಲ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ಈ ಹಿಂದೆ ಐಟಿಬಿಟಿ ಕ್ಷೇತ್ರದ ಸ್ಟಾರ್ಟ್‌ಅಪ್‌ಗಳಿಗಷ್ಟೇ ಸಿಗುತ್ತಿದ್ದ ಉತ್ತೇಜನ ಇತರೆ ಕ್ಷೇತ್ರದ ಸ್ಟಾರ್ಟ್‌ ಅಪ್‌ಗ್ಳಿಗೂ ಸಿಗುವ ವ್ಯವಸ್ಥೆ ಕಲ್ಪಿಸಲಾಗಿದೆ. ಮೇಕ್‌ ಇನ್‌ ಇಂಡಿಯಾ ಹಾಗೂ ಮೇಕ್‌ ಇನ್‌ ಕರ್ನಾಟಕ ಪರಿಕಲ್ಪನೆ ಜಾರಿಗೂ ಒತ್ತು ನೀಡಲಾಗಿದೆ ಎಂದು ವಿವರಿಸಿದರು.

ಬಜೆಟ್‌ನಲ್ಲಿ ಒತ್ತು: ಕೈಗಾರಿಕೆ ಮತ್ತು ವಾಣಿಜ್ಯ ಕ್ಷೇತ್ರಕ್ಕೆ ಪ್ರಸಕ್ತ ಬಜೆಟ್‌ನಲ್ಲೂ ಆದ್ಯತೆ ನೀಡಲಾಗಿದ್ದು, ರೋಬೊ
ತಂತ್ರಜ್ಞಾದ ಜತೆಗೆ ಭವಿಷ್ಯದ ಉದ್ಯಮವೆನಿಸಿದ ವೈಮಾನಿಕ ಕ್ಷೇತ್ರದ ಅಭಿವೃದ್ಧಿಗೂ ಗಮನ ನೀಡಲಾಗಿದೆ.
ಆಟೋಮೇಷನ್‌ ಮತ್ತು ರೋಬೊ ತಂತ್ರಜ್ಞಾನಗಳಿಂದ ಉದ್ಯೋಗಗಳ ಸಂಖ್ಯೆ ಕ್ಷೀಣಿಸುವ ಸಾಧ್ಯತೆಯಿಂದಾಗಿ ಮಾನವ ಸಂಪನ್ಮೂಲವನ್ನೇ ಹೆಚ್ಚಾಗಿ ಅವಲಂಬಿಸಿರುವ ಕೈಗಾರಿಕೆಗಳ ಸ್ಥಾಪನೆಗೆ ಪ್ರೋತ್ಸಾಹ ನೀಡುವ ಅಂಶಗಳನ್ನು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ ಎಂದು ಆರ್‌.ವಿ.ದೇಶಪಾಂಡೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next