ರಾಯಚೂರು: ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ ಸೇರಿದಂತೆ ಕೃಷ್ಣಾ ನ್ಯಾಯಾದೀಕರಣ ತೀರ್ಪಿನನ್ವಯ ರಾಜ್ಯಕ್ಕೆ ಸೇರಬೇಕಾದ ನೀರಿನ ಸದ್ಬಳಕೆಗೆ ಶ್ರಮಿಸುವುದಾಗಿ ನೂತನ ರಾಜ್ಯಸಭೆ ಸದಸ್ಯ ಅಶೋಕ ಗಸ್ತಿ ತಿಳಿಸಿದರು. ನಗರದಲ್ಲಿ ರವಿವಾರ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೃಷ್ಣಾ ಮತ್ತು ತುಂಗಭದ್ರಾ ನದಿಗಳ ನೀರಿನ ಸದ್ಬಳಕೆ ಮಾಡಿಕೊಳ್ಳುವ ಮಹೋನ್ನತ ಗುರಿ ನಮ್ಮದೆರು ಇದೆ. ಇಲ್ಲಿನ ಸಮಸ್ಯೆಗಳನ್ನು ಕೇಂದ್ರ ಸರ್ಕಾರದ ಗಮನಕ್ಕೆ ತಂದು ಈ ಭಾಗದ ಜನರಿಗೆ ಅನುಕೂಲ ಮಾಡುವುದಾಗಿ ತಿಳಿಸಿದರು.
ಈ ಭಾಗದ ಶ್ರೇಯೋಭಿವೃದ್ಧಿಗಾಗಿ ಜಾರಿಗೊಳಿಸಿದ 371ನೇ(ಜೆ) ಕಲಂ ವಿಶೇಷ ಸ್ಥಾನಮಾನದ ಸಮರ್ಪನ ಅನುಷ್ಠಾನಕ್ಕೂ ಆದ್ಯತೆ ನೀಡಲಾಗುವುದು. ಕೇಂದ್ರ ಸರ್ಕಾರದ ಹೆಚ್ಚಿನ ಅನುದಾನ ತಂದು ಅಭಿವೃದ್ಧಿಗೆ ಒತ್ತು ನೀಡಲಾಗುವುದು. ರಾಜ್ಯದ ಪ್ರತಿನಿ ಯಾಗಿರುವ ಕಾರಣ ಎಲ್ಲ ಭಾಗದ ಸಮಸ್ಯೆಗಳಅವಲೋಕನ ಮಾಡಿ ಸದನದಲ್ಲಿ ಮಾತನಾಡುವೆ ಎಂದು ತಿಳಿಸಿದರು.
ರಾಜ್ಯದಲ್ಲಿ ಅಧ್ಯಯನ ಪ್ರವಾಸ ನಡೆಸಲಾಗುವುದು. ತಜ್ಞರ ಸಲಹೆ ಸೂಚನೆ ಪಡೆಯಲಾಗುವುದು. ಈ ಭಾಗ ಹಿಂದುಳಿದಿದ್ದು, ಶೈಕ್ಷಣಿಕ, ಔದ್ಯೋಗಿಕ ಪ್ರಗತಿ ಆಗಬೇಕಿದೆ. ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಬೇಕು. ಆ ನಿಟ್ಟಿನಲ್ಲಿ ಕೆಲಸ ಮಾಡುವೆ ಎಂದು ತಿಳಿಸಿದರು.
ಪಕ್ಷದಲ್ಲಿ ನಿಷ್ಠೆ, ಪ್ರಮಾಣಿಕತೆ, ಶಿಸ್ತು ಇದ್ದಲ್ಲಿ ತಕ್ಕ ಫಲ ಸಿಗುತ್ತದೆ ಎನ್ನಲಿಕ್ಕೆ ನಾನೇ ನಿದರ್ಶನ. ನನ್ನ ಆಯ್ಕೆ ನಿಷ್ಠಾವಂತ ಕಾರ್ಯಕರ್ತರಿಗೆ ನೀಡಿದ ಸಂದೇಶ. ಮೂರು ದಶಕದಿಂದ ಪಕ್ಷಕ್ಕಾಗಿ ಕೆಲಸ ಮಾಡಿದ್ದರಿಂದಲೇ ವರಿಷ್ಠರು ನನ್ನನ್ನು ಗುರುತಿಸಿದ್ದಾರೆ ಎಂದರು.