Advertisement

ಅಲ್ಪ ಸಂಖ್ಯಾತರ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರದ ಒತ್ತು

12:44 PM Jan 30, 2018 | Team Udayavani |

ತಿ.ನರಸೀಪುರ: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್‌ ಸರ್ಕಾರ ಅಲ್ಪ ಸಂಖ್ಯಾತರ ಕಲ್ಯಾಣಕ್ಕಾಗಿ ಆಯವ್ಯಯದಲ್ಲಿ 750 ಕೋಟಿ ರೂ.ಗಳ ವಿಶೇಷ ಅನುದಾನವನ್ನು ಮೀಸಲಿಟ್ಟಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ(ಕೆಪಿಸಿಸಿ)ಯ ಅಲ್ಪ ಸಂಖ್ಯಾತ ಘಟಕದ ವಿಭಾಗೀಯ ಅಧ್ಯಕ್ಷ ರಫಿಕ್‌ ಅಹಮ್ಮದ್‌ ಹೇಳಿದರು.

Advertisement

ಪಟ್ಟಣದ ಲೋಕೋಪಯೋಗಿ ಅತಿಥಿ ಗೃಹದಲ್ಲಿ ಸೋಮವಾರ ನಡೆದ ಕಾಂಗ್ರೆಸ್‌ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿರುವ ಅಲ್ಪ ಸಂಖ್ಯಾತರಲ್ಲಿ ಮುಸ್ಲಿಂಮರಲ್ಲದೆ ಕ್ರೆ„ಸ್ತರು, ಜೈನರು ಹಾಗೂ ಬೌದ್ಧರ ಸಮಗ್ರ ಅಭಿವೃದ್ಧಿಗೆ ಆದ್ಯತೆಯನ್ನು ನೀಡಿರುವ ರಾಜ್ಯ ಸರ್ಕಾರ ಇಷ್ಟೊಂದು ಅನುದಾನವನ್ನು ಮೀಸಲಿಟ್ಟಿದೆ. ಸರ್ಕಾರದ ಅಲ್ಪಸಂಖ್ಯಾತ ಪರವಾದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಕೆಲಸವಾಗಬೇಕು ಎಂದರು.

ಸಿಎಂ ನೇತೃತ್ವದಲ್ಲೇ ಅಧಿಕಾರಕ್ಕೆ: ಮುಂಬರುವ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ರಾಜ್ಯ ಸರ್ಕಾರ ಸಾಧನೆಗಳನ್ನು ಹಾಗೂ ಅಲ್ಪ ಸಂಖ್ಯಾತರ ಸೌಲತ್ತುಗಳನ್ನು ಮನೆ ಮನೆಗೆ ತಲುಪಿಸಲು ಮೈಸೂರು ವಿಭಾಗೀಯ ಮಟ್ಟದ 6 ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಪ್ರತಿಯೊಂದು ಹಳ್ಳಿಯಲ್ಲೂ ವಾಸ್ತವ್ಯವಿದ್ದು, ಜನರೊಂದಿಗೆ ಸಂವಾದ ನಡೆಸಲಾಗುವುದು. ಮತ್ತೆ ಕಾಂಗ್ರೆಸ್‌ ಪಕ್ಷವನ್ನು ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿಯೇ ಅಧಿಕಾರಕ್ಕೆ ತರಲಾಗುವುದು ಎಂದು ರಫಿಕ್‌ ಅಹಮ್ಮದ್‌ ತಿಳಿಸಿದರು.

ಸಮಾವೇಶಕ್ಕೆ ಬೆಂಬಲ: ಮೈಸೂರು ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್‌ ಸಮಿತಿಯ ಅಲ್ಪ$ಸಂಖ್ಯಾತ ಅಧ್ಯಕ್ಷ ಅನ್ಸರ್‌ ಅಹಮ್ಮದ್‌ ಮಾತನಾಡಿ, ಕಳೆದೊಂದು ತಿಂಗಳ ಹಿಂದೆಷ್ಟೇ ಮೈಸೂರಿನಲ್ಲಿ ನಡೆದ ಸರ್ಕಾರದ ಸಾಧನೆಗಳನ್ನು ಬಿಂಬಿಸುವ ಅಲ್ಪ ಸಂಖ್ಯಾತರ ಐಕ್ಯತಾ ಸಮಾವೇಶ ಯಶಸ್ವಿಯಾಗಿ ನಡೆದಿದ್ದು, ಅಜೀಜ್‌ ಸೇs… ಅವರ ನಂತರ ನಾವೆಲ್ಲರೂ ಸೇರಿ ಮಾಡಿದ ಸಮಾವೇಶಕ್ಕೆ ವ್ಯಾಪಕ ಜನ ಬೆಂಬಲ ವ್ಯಕ್ತವಾಗಿದ್ದು, ಮುಂದಿನ ಚುನಾವಣೆಗೆ ಶಕ್ತಿಯನ್ನು ನೀಡಲಿದೆ ಎಂದು ತಿಳಿಸಿದರು.

ಸಭೆಯ ನಂತರ ಜಿಲ್ಲಾ ವಕ್ಫ್ ಬೋರ್ಡ್‌ನ ನೂತನ ಉಪಾಧ್ಯಕ್ಷ ಕೆಪಿಸಿಸಿ ಸದಸ್ಯ ಕೆ.ಮೊಹಮ್ಮದ್‌ ಅಕºರ್‌ ಅಲೀಂ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಜಿಲ್ಲಾ ಕಾಂಗ್ರೆಸ್‌ ಅಲ್ಪಸಂಖ್ಯಾತ ಘಟಕಕ್ಕೆ ನೂತನ ಕಾರ್ಯದರ್ಶಿಯಾಗಿ ನೇಮಕಗೊಂಡ ಕೌಷರ್‌ ಪಾಷ ಅವರಿಗೆ ನೇಮಕಾತಿ ಪತ್ರವನ್ನು ವಿತರಿಸಲಾಯಿತು.

Advertisement

ಬನ್ನೂರು ಪುರಸಭೆ ಮಾಜಿ ಅಧ್ಯಕ್ಷ ಮುನಾವರ್‌ ಪಾಷ, ಗುತ್ತಿಗೆದಾರ ಹೆಚ್‌.ಆರೀಫ್, ಕಾಂಗ್ರೆಸ್‌ ಅಲ್ಪಸಂಖ್ಯಾತರ ಜಿಲ್ಲಾ ಉಪಾಧ್ಯಕ್ಷ ನಾಸೀರ್‌ ಖಾನ್‌, ನಂಜನಗೂಡು ಬ್ಲಾಕ್‌ ಅಧ್ಯಕ್ಷ ಫ‌ರ್ವೀಜ್‌, ಕಾರ್ಮಿಕ ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷ ಕೆ.ಎಂ.ಮಂಜುನಾಥ್‌, ಯುವ ಕಾಂಗ್ರೆಸ್‌ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರುಣ್‌ಕುಮಾರ್‌, ವರುಣ ಸೋಷಿಯಲ್‌ ಮೀಡಿಯಾ ಅಧ್ಯಕ್ಷ ಸ್ವಾಮಿ,

ಗ್ರಾ.ಪಂ ಸದಸ್ಯ ಎಂ.ಬಿ.ಸಾಗರ್‌, ಮೂಗೂರು ಹರೀಶ, ಮುಖಂಡರಾದ ಷಬೀಲ್‌ ಅಹಮ್ಮದ್‌, ಮಹಮ್ಮದ್‌ ಇಬ್ರಾಹಿಂ, ಅಬ್ದುಲ್‌ ವಾಜೀದ್‌, ಜಭಿವುಲ್ಲಾ, ಐಷರ್‌ ಪಾಷ, ಎಂ.ವೆಂಕಟೇಶ್‌, ಆರ್‌.ಕಿಶೋರ್‌ಕುಮಾರ್‌, ಹಾಲಿನ ಸತ್ಯ, ಚಿಳ್ಳು ಮಹದೇವ, ಕೌಷರ್‌, ಆದಿಲ್‌ ಪಾಷ, ಜಫ್ರು, ಅಸರ್‌ ಪಾಷ, ಸುಲೇಮಾನ್‌ ಹಾಗೂ ಇನ್ನಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next