ದೇವನಹಳ್ಳಿ: ರೈತರು ಮತ್ತು ಕಾರ್ಮಿಕರು ದೇಶದ ಬೆನ್ನೆಲುಬು. ರೈತರು ನಾಡಿಗೆ ಅನ್ನ ನೀಡುವ ಅನ್ನದಾತರು. ಕಾರ್ಮಿಕರು ಒಂದು ದಿವಸ ಕೆಲಸ ಬಿಟ್ಟರೆ ಪ್ರಪಂಚವೇ ಇಲ್ಲದಂತಾಗುತ್ತದೆ. ರೈತರ, ಕಾರ್ಮಿಕರ ಸಮಸ್ಯೆ ಪರಿಹಾರಕ್ಕೆ ನಮ್ಮ ವೇದಿಕೆ ಹೆಚ್ಚಿನ ಒತ್ತನ್ನು ನೀಡಲಾಗುವುದು ಎಂದು ಅಖೀಲ ಕರ್ನಾಟಕ ರೈತರು ಮತ್ತು ಕಾರ್ಮಿಕ ಹಿತರಕ್ಷಣೆ ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಎಚ್.ಡಿ. ವೆಂಕಟೇಶ್ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಅಖೀಲ ಕರ್ನಾಟಕ ರೈತರು ಮತ್ತು ಕಾರ್ಮಿಕ ಹಿತರಕ್ಷಣೆ ವೇದಿಕೆ ವತಿಯಿಂದ ಏರ್ಪಡಿಸಿದ್ದ ರಾಜ್ಯಮಟ್ಟದ ಪದಾಧಿಕಾರಿಗಳ ನೇಮಕ ಸಭೆಯಲ್ಲಿ ಮಾತನಾಡಿದ ಅವರು, ದೂರು ಮತ್ತು ಹಣ ಮಾಡುವ ಉದ್ದೇಶ ಹೊಂದಿದವರನ್ನು ಸಂಘದಿಂದ ನೇರವಾಗಿ ಕೈಬಿಡಲಾಗುತ್ತದೆ. ಪ್ರಾಮಾಣಿಕವಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಸದಾ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಯಾವುದೇ ಆಸೆ, ಆಮಿಷಗಳು ಸಂಘಕ್ಕೆ ಅವಕಾಶವಿಲ್ಲ. ಎಲ್ಲರೂ ಒಗ್ಗೂಡಿ ಕೆಲಸ ಮಾಡಿದರೆ ಯಶಸ್ಸು ಕಾಣಲು ಸಾಧ್ಯ ಎಂದರು.
ಸಂಘಟನೆಯಲ್ಲಿರುವ ಪ್ರತಿಯೊಬ್ಬರಿಗೂ ಗ್ರೂಪ್ ಮಾಡಿಕೊಳ್ಳಲಾಗುತ್ತದೆ. ಸ್ಕ್ಯಾನಿಂಗ್ ಸೌಲಭ್ಯದ ಮೂಲಕ ಸಂಘಕ್ಕೆ ಇಂತಿಷ್ಟು ಹಣವನ್ನು ಕ್ರೂಢೀಕರಿಸಿ, ಸಂಘದ ದೇಯೋದ್ದೇಶಗಳಿಗೆ ಖರ್ಚು ವೆಚ್ಚ ಭರಿಸಲು ಸಹಕಾರಿಯಾಗುತ್ತದೆ. ಯಾವುದೇ ಸಂಘಟನೆ ಬಲಿಷ್ಠವಾಗಿ ಬೆಳೆಯಬೇಕಾದರೆ ಸಮಯ ಪಾಲನೆ ಅತೀ ಮು ಖ್ಯವಾಗಿರುತ್ತದೆ. ಸಂಘಟನೆಯನ್ನು ವಿಸ್ತರಿಸಿಕೊಂಡು ಹೋಗುವ ಜವಾಬ್ದಾರಿಯನ್ನು ನಮ್ಮ ಸಂಘಟನೆಯಿಂದ 6 ಸ್ಥಂಭಗಳ ಆಧಾರದಲ್ಲಿ ಮಾಡಲಾಗಿದೆ. ಸಂಖ್ಯೆ 6 ಎಂಬುವುದು ಲಕ್ಷ್ಮೀಯ ಸಂಕೇತವಾಗಿದೆ ಎಂದರು.
ಸಂಘಟನೆಗೆ ಪ್ರತಿಯೊಬ್ಬರೂ ಕೈಜೋಡಿಸಿ: ಸಂಘಟನೆಯಲ್ಲಿ 6 ಪ್ರಮುಖ ರೈತರ, ಕಾರ್ಮಿಕರ, ಕಲಾವಿದರ, ಯೋಗ, ಕ್ರೀಡೆ ಮತ್ತು ಮಹಿಳಾ ಸಬಲೀಕರಣ ಸೇರಿದಂತೆ ಪರಿಣಿತರಾಗಿರುವ ಮುಖಂಡರನ್ನು ರಾಜ್ಯಮಟ್ಟದಲ್ಲಿ ವಿವಿಧ ಜವಾಬ್ದಾರಿಗಳನ್ನು ಕೊಟ್ಟು ಸಂಘಟಿತರನ್ನಾಗಿಸಲಾಗಿದೆ. ಮುಂದಿನ ದಿನಗಳಲ್ಲಿ ಸಂಘವನ್ನು ಉತ್ತಮ ರೀತಿಯಲ್ಲಿ ಬೆಳೆಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.
ನೂತನ ರಾಜ್ಯಾಧ್ಯಕ್ಷ ಟಿ.ಎಂ. ಸಹದೇಶ್ ಮಾತನಾಡಿ, ಕಷ್ಟದಲ್ಲಿ ಇರುವವರಿಗೆ ಸಹಯವನ್ನು ಮಾಡಬೇಕು. ರೈತರಿಗೆ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ರೇಷ್ಮೆ ಇಲಾಖೆ, ಇತರೆ ಇಲಾಖೆಗಳಿಂದ ಬರುವ ಸೌಲಭ್ಯ ತಲುಪಿಸಬೇಕು. ಕಾರ್ಮಿಕ ಇಲಾಖೆಯಿಂದ ಕಾರ್ಮಿಕರಿಗೆ ಸಾಕಷ್ಟು. ಯೋಜನೆಗಳಿದ್ದು, ಕಾರ್ಮಿಕರು ಸದುಪ ಯೋಗಪಡಿಸಿಕೊಳ್ಳಬೇಕು ಎಂದರು.
ನೇಮಕಾತಿ ಪತ್ರ ವಿತರಣೆ: ಅಖಿಲ ಕರ್ನಾಟಕ ರೈತರು ಮತ್ತು ಕಾರ್ಮಿಕ ಹಿತರಕ್ಷಣೆ ವೇದಿಕೆ ಸಂಘಟನೆಯ ನೂತನ ಪದಾಧಿಕಾರಿಗಳಿಗೆ ಸಂಸ್ಥಾಪಕ ಅಧ್ಯಕ್ಷ ಎಚ್. ಡಿ. ವೆಂಕಟೇಶ್ ನೇತೃತ್ವದಲ್ಲಿ ನೇಮಕಾತಿ ಪತ್ರ ವಿತರಿ ಸಲಾಯಿತು. ರಾಜ್ಯ ಗೌರವಾಧ್ಯಕ್ಷ ಟಿ. ಎಂ.ಸಹದೇಶ್, ಪ್ರಧಾನ ಕಾರ್ಯದರ್ಶಿ ಡಿ. ಅನಿಲ್ ಕುಮಾರ್, ಕಾರ್ಮಿಕ ಮತ್ತು ಕೂಲಿಕಾರ್ಮಿಕರ ಅಧ್ಯಕ್ಷ ಅನಿಲ್ ಕುಮಾರ್, ರೈತ ಸಂಘಟನೆ ಅಧ್ಯಕ್ಷ ಶಿವಕುಮಾರ್, ಆಟೋ ಚಾಲಕರ ಘಟಕದ ಅಧ್ಯಕ್ಷ ಎಂ. ನಾರಾಯಣ ಸ್ವಾಮಿ, ವಿದ್ಯಾರ್ಥಿ ಮತ್ತು ಕ್ರೀಡಾ ಘಟಕದ ಅಧ್ಯಕ್ಷ ಹರಿನಾರಾಯಣ, ಮಹಿಳಾ ಅಧ್ಯಕ್ಷೆ ಎಸ್.ಜಯಂತಿ, ಕಲಾವಿದರ ಘಟಕದ ಅಧ್ಯಕ್ಷ ಎಲ್. ಮಂಜುನಾಥ್, ಪದಾಧಿಕಾರಿ ಶ್ರೀಕಾಂತ್, ಮಂಜುನಾಥ್, ಮೇಘನಾ ಹಾಗೂ ಮತ್ತಿತರರು ಇದ್ದರು.