Advertisement

Emerging Asia Cup;ಸೆಮಿಫೈನಲ್‌ ನಲ್ಲಿ ಭಾರತಕ್ಕೆ ಅಫ್ಘಾನ್‌ ಆಘಾತ

12:04 AM Oct 26, 2024 | Team Udayavani |

ಅಲ್‌ ಅಮಿರಾತ್‌: ಟಿ20 ಎಮರ್ಜಿಂಗ್‌ ಏಷ್ಯಾ ಕಪ್‌ ಸೆಮಿಫೈನಲ್‌ನಲ್ಲಿ ಭಾರತ “ಎ’ ತಂಡ ಅಫ್ಘಾನಿಸ್ಥಾನ “ಎ’ ವಿರುದ್ಧ 20 ರನ್ನುಗಳ ಸೋಲನುಭವಿಸಿತು.

Advertisement

ಅಫ್ಘಾನ್‌ 4 ವಿಕೆಟಿಗೆ 206 ರನ್‌ ಪೇರಿಸಿತು. ಭಾರತ 7 ವಿಕೆಟಿಗೆ 186 ರನ್‌ ಮಾಡಿತು. ರಮಣ್‌ದೀಪ್‌ (64) ಸಿಡಿದು ನಿಲ್ಲುವಾಗ ಪಂದ್ಯ ಆಗಲೇ ಕೈಜಾರಿತ್ತು. ಅಫ್ಘಾನ್‌ ಪರ ಜುಬೇದ್‌ ಅಕºರಿ (64)-ಸಿದ್ದಿಕುಲ್ಲ ಅಟಲ್‌ (83) ಮೊದಲ ವಿಕೆಟಿಗೆ 14.1 ಓವರ್‌ಗಳಿಂದ 137 ರನ್‌ ರಾಶಿ ಹಾಕಿದರು.

ಲಂಕೆಗೆ 7 ವಿಕೆಟ್‌ ಜಯ
ಮೊದಲ ಸೆಮಿಫೈನಲ್‌ನಲ್ಲಿ ಶ್ರೀಲಂಕಾ ಎ ತಂಡ ಪಾಕಿಸ್ಥಾನ ಎ ವಿರುದ್ಧ 7 ವಿಕೆಟ್‌ಗಳ ಜಯ ಸಾಧಿಸಿತು. ಪಾಕ್‌ 9ಕ್ಕೆ 135 ರನ್‌ ಗಳಿಸಿದರೆ, ಲಂಕಾ 16.3 ಓವರ್‌ಗಳಲ್ಲಿ 3 ವಿಕೆಟಿಗೆ 137 ರನ್‌ ಬಾರಿಸಿತು.

Advertisement

Udayavani is now on Telegram. Click here to join our channel and stay updated with the latest news.

Next