Advertisement
– ಇಲ್ಲಿನ ಸೀರಮ್ ಇನ್‌ಸ್ಟಿಟ್ಯೂಟ್‌ಗೆ ಪ್ರಧಾನಿ ಭೇಟಿ ಕೊಟ್ಟ ಬೆನ್ನಲ್ಲೇ, ಕೋವಿಶೀಲ್ಡ್ ಲಸಿಕೆ ಪ್ರಗತಿ ಬಗ್ಗೆ ಅಧಿಕೃತ ಸಿಹಿಸುದ್ದಿಯನ್ನು ಸಂಸ್ಥೆಯ ಸಿಇಒ ಅಡಾರ್ ಪೂನಾವಾಲಾ ಸುದ್ದಿಗೋಷ್ಠಿಯಲ್ಲಿ ನೀಡಿದ್ದಾರೆ. ಆಕ್ಸ್‌ಫರ್ಡ್ ವಿವಿ ಮತ್ತು ಅಸ್ಟ್ರಾಜೆನೆಕಾ ಲಸಿಕೆಯನ್ನು ಭಾರತದಲ್ಲಿ ಸೀರಮ್ ಸಂಸ್ಥೆ ದೇಶೀಯವಾಗಿ ಉತ್ಪಾದಿಸುತ್ತಿದೆ.
Related Articles
Advertisement
ಒಣಗಿದ ಶ್ಲೇಷ್ಮದಿಂದಲೂ ಟೆಸ್ಟ್ಇಷ್ಟು ದಿನ ಕೊರೊನಾದ ಆರ್‌ಟಿ- ಪಿಸಿಆರ್ ಟೆಸ್ಟ್‌ನಲ್ಲಿ ಮೂಗಿನ ದ್ರವವನ್ನು ಪರೀಕ್ಷೆಗೆ ತೆಗೆದುಕೊಳ್ಳಲಾಗುತ್ತಿತ್ತು. ಪ್ರಸ್ತುತ ಭಾರತೀಯ ಔಷಧೀಯ ಸಂಶೋಧನ ಮಂಡಳಿಯು “ಒಣಗಿದ ಶ್ಲೇಷ್ಮ’ ಪರೀಕ್ಷೆ ಮೂಲಕ ಡ್ರೈ ಸ್ವಾéಬ್ ಟೆಸ್ಟ್‌ಗೆ ಅನುಮೋದನೆ ಸೂಚಿಸಿದೆ. ಒಣಗಿದ ಶ್ಲೇಷ್ಮ ಕೂಡ ಕೊರೊನಾ ಪ್ರಸರಣದ ಪ್ರಮುಖ ಮಾಧ್ಯಮವಾಗಿರುವುದರಿಂದ, ಇದು ಆರ್‌ಟಿ-ಪಿಸಿಆರ್ ಟೆಸ್ಟ್‌ನ ವೆಚ್ಚ ಮತ್ತು ಕಾಲಮಿತಿಯನ್ನು ತಗ್ಗಿಸಲಿದೆ. ಕೈಗಾರಿಕ ಸಂಶೋಧನೆ ಮತ್ತು ವಿಜ್ಞಾನ ಮಂಡಳಿ (ಸಿಎಸ್‌ಐಆರ್) ತಜ್ಞರು ಈ ಕಾರ್ಯವಿಧಾನ ಪರಿಚಯಿಸಿದ್ದಾರೆ. ಟಾಪ್ 8ರಲ್ಲಿಲ್ಲ ಕರ್ನಾಟಕ
ದೇಶದ ಒಟ್ಟು ಸೋಂಕಿನ ಕೊಡುಗೆಗೆ 8 ರಾಜ್ಯಗಳ ಪಾಲು ಶೇ.69ರಷ್ಟಿದೆ ಎಂದು ಆರೋಗ್ಯ ಇಲಾಖೆ ಆತಂಕ ಸೂಚಿಸಿದೆ. ಟಾಪ್ 8 ರಾಜ್ಯಗಳಲ್ಲಿ ಮಹಾರಾಷ್ಟ್ರ, ದಿಲ್ಲಿ ಮುಂಚೂಣಿಯಲ್ಲಿದ್ದು, ಕರ್ನಾಟಕ ಸ್ಥಾನ ಪಡೆಯ ದಿರುವುದು ಸಮಾಧಾನಕರ ಸಂಗತಿ. ಲಕ್ಸೆಂಬರ್ಗ್ ಸಂಸ್ಥೆಗೆ ಬಾಕ್ಸ್ ನಿರ್ಮಾಣ ಹೊಣೆ
ಶೈತ್ಯೀಕರಿಸಿದ ಲಸಿಕೆ ಸಾಗಾಟ ಬಾಕ್ಸ್‌ಗಳನ್ನು ಸಿದ್ಧಪಡಿಸಲು ಮೋದಿ, ಲಕ್ಸೆಂಬರ್ಗ್‌ನ ಹೆಸರಾಂತ ಸಂಸ್ಥೆಗೆ ಹೊಣೆ ವಹಿಸಿದ್ದಾರೆ. ಜಗತ್ತಿನ ಅತ್ಯುತ್ತಮ ದರ್ಜೆಯ ಲಸಿಕೆ ಸಂಗ್ರಾಹಕಗಳನ್ನು ನಿರ್ಮಿಸುವ ಲಕ್ಸೆಂಬರ್ಗ್‌ನ “ಬಿ ಮೆಡಿಕಲ್ ಸಿಸ್ಟಮ್ಸ್’ ಸಂಸ್ಥೆಯ ತಜ್ಞರ ತಂಡ ಮುಂದಿನ ವಾರದಲ್ಲಿ ಗುಜರಾತ್‌ಗೆ ಆಗಮಿಸಲಿದೆ. ಇಲ್ಲಿಂದ ದೇಶದ ಮೂಲೆ ಮೂಲೆಗಳಿಗೆ ಲಸಿಕೆ ಸರಬರಾಜು ಮಾಡಲು ಅಗತ್ಯವಿರುವ ಶೈತ್ಯೀಕರಣ ವ್ಯವಸ್ಥೆಯುಳ್ಳ ಸಾಗಾಟ ಬಾಕ್ಸ್‌ಗಳನ್ನು ಬಿ ಮೆಡಿಕಲ್ ಸಿಸ್ಟಮ್ಸ್ ನಿರ್ಮಿಸಲಿದೆ. ಇವು ಸಂಪೂರ್ಣ ಸೋಲಾರ್ ಆಧಾರಿತ ಶೈತ್ಯೀಕರಣ ವ್ಯವಸ್ಥೆಯಾಗಿದ್ದು, ಪ್ರತಿ ಬಾಕ್ಸ್‌ಗಳು 4 ಡಿಗ್ರಿಯಿಂದ -20 ಡಿಗ್ರಿ ಸೆಲ್ಸಿಯಸ್‌ವರೆಗೆ ಲಸಿಕೆ ಶೈತ್ಯೀಕರಿಸಿ, ಸಂರಕ್ಷಿಸುವ ಸಾಮರ್ಥ್ಯ ಹೊಂದಿರಲಿವೆ.