Advertisement
ನಾರಾಯಣಪುರ ಬಲದಂಡೆ ಕಾಲುವೆಯ ಶಾಖಾ ಕಾಲುವೆ 5ಎ ಅನುಷ್ಠಾನಕ್ಕೆಒತ್ತಾಯಿಸಿ ಕಳೆದ 18 ದಿನಗಳಿಂದ ರೈತರಹೋರಾಟ ಚುರುಕಾಗಿದೆ. ದಿನಗಳುಉರುಳಿದಂತೆ ಚಳವಳಿಯ ಕಾವು ತೀವ್ರ ಸ್ವರೂಪ ಪಡೆಯುತ್ತಿದೆ. ಈ ಯೋಜನೆ ಲಾಭ ಪಡೆಯುವ 30ಕ್ಕೂ ಹೆಚ್ಚು ಹಳ್ಳಿಗರುಈಗಾಗಲೇ ಗ್ರಾಪಂ ಚುನಾವಣೆ ಬಹಿಷ್ಕಾರಕ್ಕೂನಿರ್ಧಾರ ಕೈಗೊಂಡಿದ್ದಾರೆ. ಇದಕ್ಕಾಗಿ ರಾಯಚೂರು-ಕೊಪ್ಪಳ ಹಾಗೂ ಮಸ್ಕಿಯ ಹಾಲಿ-ಮಾಜಿ ಚುನಾಯಿತ ಪ್ರತಿನಿಧಿ ಗಳು ಬೆಂಗಳೂರಿಗೆ ನಿಯೋಗ ತೆರಳಿದ್ದಾರೆ. ಕಳೆದೆರಡು ದಿನಗಳಿಂದ ರಾಜಧಾನಿಯಲ್ಲಿ ಠಿಕಾಣಿ ಹೂಡಿ ಇಲ್ಲಿನ ರೈತರ ಬೇಡಿಕೆಯನ್ನು ಸರ್ಕಾರದ ಗಮನ ಸೆಳೆಯುವ ಪ್ರಯತ್ನ ನಡೆಸಿದ್ದಾರೆ.
Related Articles
Advertisement
ಚುನಾವಣೆ ಬಹಿಷ್ಕಾರದ ಅಸ್ತ್ರ ಕೇವಲ ಇಲ್ಲಿನ ಚುನಾಯಿತರು, ಜಿಲ್ಲಾಡಳಿತಕ್ಕೆ ಮಾತ್ರವಲ್ಲದೇ ಸರ್ಕಾರಕ್ಕೂ ಸವಾಲಾಗಿದೆ. 5ಎ ಕಾಲುವೆ ಇಲ್ಲವೇ ಪರ್ಯಾಯ ಮಾರ್ಗದ ಮೂಲಕ ನೀರಾವರಿ ಸೌಲಭ್ಯ ಕಲ್ಪಿಸುವ ಪ್ರಯತ್ನ ನಡೆದಿದೆ. ಈ ಭಾಗದಲ್ಲಿ ಡಿ.11ರಿಂದ ಗ್ರಾಪಂ ಚುನಾವಣೆಗೆನಾಮಪತ್ರ ಸಲ್ಲಿಕೆ ಆರಂಭವಾಗುವುದರಿಂದ ಎರಡು ದಿನದಲ್ಲೇ ಈ ನಿರ್ಧಾರ ಬೀಳುವ ಸಾಧ್ಯತೆ ಇದೆ.
1200 ಕೋಟಿ ಹಸ್ತಾಂತರಕ್ಕೆ ಮನವಿ :
ಮಸ್ಕಿ ಹಾಗೂ ಲಿಂಗಸುಗೂರು ಕ್ಷೇತ್ರಕ್ಕೆ ಈಗಾಗಲೇ ನಂದವಾಡಗಿ ಏತ ನೀರಾವರಿ ಮೂಲಕ ಸೂಕ್ಷ್ಮ ಹನಿ (ಡ್ರಿಪ್ ಇರಿಗೇಶನ್) ನೀರಾವರಿಗೆ ಪ್ರತ್ಯೇಕ 3 ಸಾವಿರ ಕೋಟಿ ರೂ. ನೀಡಿದೆ. 1800ಕೋಟಿ ರೂ. ಮೊತ್ತದ ಕಾಮಗಾರಿಗೆಈಗಾಗಲೇ ಚಾಲನೆ ನೀಡಲಾಗಿದೆ (ಬಹುಭಾಗ ಲಿಂಗಸುಗೂರು, ಭಾಗಶಃ ಮಸ್ಕಿ). ಆದರೆ ಎರಡನೇ ಹಂತ 1200 ಕೋಟಿ ರೂ. ಮೊತ್ತದ ಕಾಮಗಾರಿಗೆ ಟೆಂಡರ್‌ಪ್ರಕ್ರಿಯೆ ನಡೆಯಬೇಕಿದೆ. ಈ ಯೋಜನೆಯಲ್ಲಿ ಮಸ್ಕಿಯ ಬಹುಭಾಗಹಳ್ಳಿಗಳು ನೀರಾವರಿಗೆ ಒಳಪಡಲಿವೆ. ಆದರೆ ಇಲ್ಲಿನ ರೈತರು ಹನಿ ನೀರಾವರಿ ವ್ಯವಸ್ಥೆಯನ್ನೇ ವಿರೋಧಿ ಸುತ್ತಿದ್ದಾರೆ.ಹನಿ ನೀರಾವರಿ ಬದಲು ಹರಿ ನೀರಾವರಿ(ಕಾಲುವೆ ಮೂಲಕ) ವ್ಯವಸ್ಥೆ ಕಲ್ಪಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಇಲ್ಲಿನ ರೈತರ ಬೇಡಿಕೆಯನ್ನು ಮನವಿಸರ್ಕಾರದ ಮುಂದಿಟ್ಟಿದ್ದೇವೆ. ಕಳೆದ ಒಂದು ವಾರದಿಂದ ಇದೇ ಪ್ರಯತ್ನದಲ್ಲಿದ್ದೇವೆ. ರೈತರ ನೀರಾವರಿ ಬೇಡಿಕೆ ಈಡೇರಿಸಲು ಸರ್ಕಾರವೂಬದ್ಧವಾಗಿದೆ. ಎರಡು ದಿನದಲ್ಲಿ ನಿರ್ಧಾರ ಪ್ರಕಟವಾಗಲಿದೆ. –ಪ್ರತಾಪಗೌಡ ಪಾಟೀಲ್, ಮಾಜಿ ಶಾಸಕ, ಮಸ್ಕಿ
-ಮಲ್ಲಿಕಾರ್ಜುನ ಚಿಲ್ಕರಾಗಿ