Advertisement

ತುಮಕೂರು; CM ನೇತೃತ್ವದಲ್ಲಿ ತುರ್ತು ಸಭೆ, ಪೊಲೀಸ್ ಪಹರೆ, ಹೈಅಲರ್ಟ್

06:06 AM Jan 21, 2019 | Team Udayavani |

ತುಮಕೂರು: ಶತಾಯುಷಿ ತುಮಕೂರು ಸಿದ್ದಗಂಗಾಮಠದ ಡಾ.ಶಿವಕುಮಾರ್ ಸ್ವಾಮೀಜಿ ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೋಮವಾರ ಮಧ್ಯಾಹ್ನ ತುಮಕೂರು ಮಠದಲ್ಲಿ ತುರ್ತು ವಿಶೇಷ ಸಭೆಯನ್ನು ಕರೆದಿದ್ದಾರೆ.

Advertisement

ಮೈಸೂರಿನಿಂದ ತುಮಕೂರಿಗೆ ಆಗಮಿಸಿದ ಕೂಡಲೇ ಸಿಎಂ ಕುಮಾರಸ್ವಾಮಿ ಅವರು ಮಠದಲ್ಲಿ ಆಡಳಿತ ಮಂಡಳಿ, ಹಿರಿಯ ಅಧಿಕಾರಿಗಳು, ಕಿರಿಯ ಸ್ವಾಮೀಜಿ, ಡಿಸಿಎಂ ಪರಮೇಶ್ವರ್, ಗೃಹ ಸಚಿವ ಎಂಬಿ ಪಾಟೀಲ್, ಬಿಎಸ್ ಯಡಿಯೂರಪ್ಪ, ವಿ.ಸೋಮಣ್ಣ ಅವರ ಜತೆ ತುರ್ತು ಸಭೆ ನಡೆಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ವರದಿ ತಿಳಿಸಿದೆ.

ತುಮಕೂರಿನಲ್ಲಿ ಹೈಅಲರ್ಟ್, ಪೊಲೀಸ್ ಸರ್ಪಗಾವಲು:

ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ತುಮಕೂರು ಹೊರ ವಲಯ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಸುಮಾರು 8 ಸಾವಿರಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ.  ಬೆಂಗಳೂರು, ತುಮಕೂರು ರಾಷ್ಟ್ರೀಯ ಹೆದ್ದಾರಿ ಟೋಲ್ ಗೇಟ್ ಗಳಲ್ಲಿಯೂ ಪೊಲೀಸರನ್ನು ನಿಯೋಜಿಸಲಾಗಿದೆ.

ತುಮಕೂರು ಸೇರಿದಂತೆ ಐದು ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳ ಸಭೆಯನ್ನೂ ಕೂಡಾ ಸಿಎಂ ನಡೆಸಲಿದ್ದಾರೆ. ಇದರಲ್ಲಿ ತುಮಕೂರು ಜಿಲ್ಲಾಧಿಕಾರಿ, ಎಸ್ಪಿ ಸೇರಿ ಪೊಲೀಸ್ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ವರದಿ ವಿವರಿಸಿದೆ.

Advertisement

ಮಠಕ್ಕೆ ಎಲ್ ಇಡಿ ವಾಹನ ಆಗಮನ:

ಮಠದ ಸುತ್ತಮುತ್ತ ಎಲ್ ಇಡಿ ಅಳವಡಿಸಲು ಚಿಂತನೆ ನಡೆಸಲಾಗಿದ್ದು, ಈ ನಿಟ್ಟಿನಲ್ಲಿ ಎಲ್ ಇಡಿ ವಾಹನ ಕೂಡಾ ಆಗಮಿಸಿದೆ. ಹೆಲಿಪ್ಯಾಡ್ ಗಳನ್ನು ನಿರ್ಮಿಸಲಾಗುತ್ತಿದೆ. ಪ್ರಮುಖ ಪ್ರವೇಶ ದ್ವಾರಗಳನ್ನು ಬಂದ್ ಮಾಡಲಾಗಿದೆ. ಈ ನಿಟ್ಟಿನಲ್ಲಿ ಪೊಲೀಸರು ಮತ್ತು ಸಾರ್ವಜನಿಕರ ನಡುವೆ ಜಟಾಪಟಿ ನಡೆದಿದೆ.

ಶ್ರೀಗಳ ಆರೋಗ್ಯದಲ್ಲಿ ಕೊಂಚ ಚೇತರಿಕೆ:

ಶ್ರೀಗಳ ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಂಡು ಬಂದಿದೆ. ಬೆಂಗಳೂರಿನಿಂದ ಹಲವು ತಜ್ಞ ವೈದ್ಯರುಗಳನ್ನು ಕರೆಯಿಸಲಾಗುತ್ತಿದೆ. ಶ್ರೀಗಳ ದರ್ಶನಕ್ಕಾಗಿ ಭಕ್ತರು ಮಠಕ್ಕೆ ಆಗಮಿಸಬೇಕಾಗಿಲ್ಲ. ನೀವು ಎಲ್ಲಿದ್ದಿರೋ ಅಲ್ಲಿಂದಲೇ ಶ್ರೀಗಳ ಆರೋಗ್ಯ ಚೇತರಿಕೆ ಬಗ್ಗೆ ಪ್ರಾರ್ಥಿಸಿ. ದಯವಿಟ್ಟು ಶ್ರೀಗಳ ಆರೋಗ್ಯದ ಬಗ್ಗೆ ಅನಾವಶ್ಯಕ ಗೊಂದಲ ಬೇಡ ಎಂದು ವೈದ್ಯಾಧಿಕಾರಿ ಡಾ.ಪರಮೇಶ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next