Advertisement
ನಗರದಲ್ಲಿ ಮೈಸೂರು ಲಿಟರರಿ ಫೋರಂ ಚಾರಿಟೇಬಲ್ ಟ್ರಸ್ಟ್ ಮತ್ತು ಮೈಸೂರು ಬುಕ್ ಕ್ಲಬ್ -2015 ಆಯೋಜಿಸಿದ್ದ ಮೈಸೂರು ಸಾಹಿತ್ಯೋತ್ಸವದಲ್ಲಿ “ಶೋಭಾ ಅಟ್ 70-ಸೆಲೆಕ್ಟಿವ್ ಮೆಮೋರಿ’ ಕುರಿತು ಲೇಖಕ ಮಹೇಶ್ ರಾವ್‌ರೊಂದಿಗೆ ನಡೆದ ಮಾತುಕತೆಯಲ್ಲಿ ಅವರು ಮಾತನಾಡಿದರು.
Related Articles
Advertisement
ವರದಿಗಾರರ ಬಳಿಯಷ್ಟೇ ಸುಂದರ ಕತೆಗಳಿರುವುದರಿಲ್ಲ. ಸಾಮಾನ್ಯ ನಾಗರಿಕನ ಬಳಿಯೂ ಸಾಕಷ್ಟು ಕತೆಗಳಿರುತ್ತವೆ. ಹೀಗಾಗಿ ಈಗ ಪ್ರತಿಯೊಬ್ಬರೂ ಅಂಕಣಕಾರರಾಗಬಹುದು ಮತ್ತು ಆ ಸತ್ಯವನ್ನು ನಾವು ಒಪ್ಪಿಕೊಳ್ಳಬೇಕು. ಅದನ್ನು ಒಪ್ಪಿಸಿಕೊಂಡ ದಿನ ನಾವು (ಅಂಕಣಕಾರರು) ಅಪ್ರಸ್ತುತವಾಗುತ್ತೇವೆ ಎಂದು ತಿಳಿಸಿದರು.
ಮಾಜಿ ರಾಯಭಾರಿ ನಿರುಪಮಾ ಮೆನನ್ ರಾವ್ ಅವರು ಸಂಗೀತವು ಗಡಿಯನ್ನು ಮೀರಿ ಹೇಗೆ ಸಾಮರಸ್ಯವನ್ನು ಸೃಷ್ಟಿಸುತ್ತಿದೆ ಎಂಬುದರ ಕುರಿತು ಮಾತನಾಡಿದರು. ಆರ್ಕೆಸ್ಟ್ರಾ ಶಿಸ್ತು ಮತ್ತು ಆಲಿಸುವಿಕೆಯನ್ನು ಬಯಸುತ್ತದೆ. ಸಂಗೀತ ನಮ್ಮೊಳಗೆ ಸಾಮರಸ್ಯವನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ. ದಕ್ಷಿಣ ಏಷ್ಯಾದ ಸಿಂಫನಿ ಆರ್ಕೆಸ್ಟ್ರಾ ಸಂಗೀತ ಸೂಕ್ಷ್ಮವಾದ ವಿಚಾರಗಳ ಪರ ವ್ಯವಹರಿಸುತ್ತದೆ.
ಈ ಸಾಮರಸ್ಯ ದೇಶಗಳ ನಡುವೆಯೂ ಮೂಡಬೇಕಿದೆ. ಆರ್ಥಿಕ ಲಾಭಕ್ಕಾಗಿ ಫ್ರಾನ್ಸ್ ಮತ್ತು ಜರ್ಮನಿ ದೇಶಗಳು ಹೇಗೆ ಒಂದಾಗಿವೆಯೋ ಹಾಗೆಯೇ ಭಾರತ ಮತ್ತು ಪಾಕಿಸ್ತಾನ ಒಗ್ಗೂಡಬೇಕಿದೆ. ಆದರೆ, ಸದ್ಯ ಕಾಶ್ಮೀರ ಸಮಸ್ಯೆ ಹಾಗೂ ಭಯೋತ್ಪಾದನೆ ನಮ್ಮ ಮುಂದಿದೆ. ಹಾಗಾಗಿ ಪಾಕಿಸ್ತಾನ ಬದಲಾವಣೆಗೆ ಮನಸ್ಸು ಮಾಡಬೇಕಿದೆ ಎಂದು ಹೇಳಿದರು.
ಮಕ್ಕಳಿಗೆ ಇತಿಹಾಸ ತಿಳಿಸಿ: ಬರಹಗಾರ ರಘು ಕಾರ್ನಾಡ್ ಅವರು ತಮ್ಮ ಫಾರ್ಟೆಸ್ಟ್ ಫೀಲ್ಡ…: ಆನ್ ಇಂಡಿಯನ್ ಸ್ಟೋರಿ ಆಫ್ ದಿ ಸೆಕೆಂಡ್ ವರ್ಲ್ಡ್ ವಾರ್’ ಪುಸ್ತಕದ ಕುರಿತು ಏರ್ ಮಾರ್ಷಲ್ ನಂದಾ ಕರಿಯಪ್ಪ ಅವರೊಂದಿಗೆ ಸಂವಾದ ನಡೆಸಿದರು. ಶಾಲೆಗಳಲ್ಲಿ ಇತಿಹಾಸ, ಆಧುನಿಕ ಇತಿಹಾಸವನ್ನು ಕಲಿಸುವ ಅಗತ್ಯವನ್ನು ಒತ್ತಿ ಹೇಳಿದರು.
ಇದರಿಂದ ಮಕ್ಕಳು ನಮ್ಮ ಸುತ್ತ ಇರುವ ಇತಿಹಾಸ ಸೃಷ್ಟಿಸಿದ ನಾಯಕರನ್ನು ಭೇಟಿ ಮಾಡಲು ಮನಸ್ಸು ಮಾಡುತ್ತಾರೆ ಎಂದರು. ವನ್ಯಜೀವಿ ಸಂರಕ್ಷಣಾ ತಜ್ಞ ರೊಮುಲಸ್ ವಿಟ್ಕರ ಅವರು ವೈಲ್ಡ್-ಕನ್ಸರ್ವೇಶನ್ ಮತ್ತು ಮೊಸಳೆಗಳ ಪ್ರಪಂಚದ ಕುರಿತು ಮಾತನಾಡಿದರು.
“ಮಿ ಟೂ’ಗೆ ಬೆಂಬಲ: ಕಾರ್ಯಕ್ರಮದಲ್ಲಿ “ಮಿ ಟೂ’ ಅಭಿಯಾನದ ಬಗ್ಗೆ ಮಾತನಾಡಿದ ಶೋಭಾ ಡೇ, ಕಿರುಕುಳ ಮತ್ತು ದೌರ್ಜನ್ಯಕ್ಕೆ ಒಳಗಾಗುವ ಪುರುಷರಾಗಲಿ ಅಥವಾ ಮಹಿಳೆಯರೇ ಆಗಲಿ ಅವರಿಗೆ ನನ್ನ ಬೆಂಬಲವನ್ನು ವ್ಯಕ್ತಪಡಿಸುತ್ತೇನೆ. ತಮಗಾದ ದೌರ್ಜನ್ಯದ ವಿರುದ್ಧ ಪ್ರತಿಭಟಿಸುವವರಿಗೆ ಪ್ರೋತ್ಸಾಹ ಬೇಕಿದೆ. ತನುಶ್ರೀ ದತ್ತಾ ಈಗ ದೊಡ್ಡ ತಾರೆಯಾಗಿರದೆ ಇರಬಹುದು. ಹಾಗಂತ ಆಕೆ ಸೋತಿಲ್ಲ. ಕೈ ಕಟ್ಟಿ ಕುಳಿತಿಲ್ಲ.
ನಿಜಕ್ಕೂ ಆಕೆ ನಮ್ಮೆಲ್ಲರ ಬೆಂಬಲಕ್ಕೆ ಅರ್ಹಳು. ಜತೆಗೆ ನ್ಯಾಯಯುತ ವಿಚಾರಣೆಗೂ ಅರ್ಹಳು. ಭಾರತದಲ್ಲಿ ಶತಮಾನಗಳಿಂದ ಮಹಿಳೆಯರು ದಬ್ಟಾಳಿಕೆಗೆ ಒಳಗಾಗುತ್ತಿ¨ªಾರೆ. ಅಲ್ಲದೆ, ಇಡೀ ಪ್ರಪಂಚ ಅದನ್ನೆಲ್ಲಾ ಮುಚ್ಚಿಡಲು ಸಂಚು ರೂಪಿಸುತ್ತಿದೆ. ಆದರೆ, ಇಂದಿನ ಪೀಳಿಗೆಯಲ್ಲಿ ಮಹಿಳೆಯರಿಗೆ ಆಗುತ್ತಿರುವ ಕಿರುಕುಳವನ್ನು ಸುಲಭವಾಗಿ ಮುಚ್ಚಲು ಸಾಧ್ಯವಿಲ್ಲ ಎಂದು ಹೇಳಿದರು.