Advertisement

ಅಗತ್ಯವಿದ್ದರೂ ಈಡೇರದ ತುರ್ತು ಆ್ಯಂಬುಲೆನ್ಸ್‌ ಸೇವೆ

02:40 AM Jul 18, 2017 | Team Udayavani |

ಬಜಪೆ: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 108 ಆ್ಯಂಬುಲೆನ್ಸ್‌ ಸೇವೆ ತುರ್ತಾಗಿ ಬೇಕಾಗಿದೆ.ಯಾನಿಗಳ ಆರೋಗ್ಯಸುರಕ್ಷೆಯ ದೃಷ್ಟಿಯಿಂದ ಅಗತ್ಯವಾಗಿ ಬೇಕಾಗಿದೆ. ಬಜಪೆ ಹಳೆ ವಿಮಾನ ನಿಲ್ದಾಣದಲ್ಲಿ 108 ಸೇವೆ ಒದಗಿಸಲಾಗಿತ್ತು. ಆದರೆ ಇಲ್ಲಿಗೆ ಇನ್ನೂ ಬಂದಿಲ್ಲ.ಜು.16 ರಂದು ಬೆಳಗ್ಗೆ  ಗಲ್ಫ್ ನಿಂದ ಬಂದ ಪ್ರಯಾಣಿಕರು ವಿಮಾನ ನಿಲ್ದಾಣದ ಹೊರಗೆ ಬಂದಾಗ ಅಸ್ವಸ್ಥರಾದರು. ಅವರಿಗೆ  ತುರ್ತಾಗಿ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ 

Advertisement

ಕೊಂಡೊಯ್ಯಬೇಕಿತ್ತು. ಆದರೆ ಜೀವರಕ್ಷಕವಾದ ಆ್ಯಂಬುಲೆನ್ಸ್‌ ಇಲ್ಲದ ಕಾರಣ ಅನಿವಾರ್ಯವಾಗಿ ಕಾರಿನಲ್ಲಿ ಕೊಂಡೊಯ್ಯಲಾಯಿತು. ಅವರಿಗೆ ಹೃದಯದ ನೋವನಿಂದ ಬಳಲುತ್ತಿದ್ದರು ಎಂದು ಸ್ಥಳೀಯರು ಹೇಳುತ್ತಾರೆ. ಆದರೆ ಆಗ ನೆನಪಾದದ್ದು 108 ತುರ್ತು ಆ್ಯಂಬುಲೆನ್ಸ್‌ ಸೇವೆ. ಅದು ಇದ್ದರೆ ತುರ್ತು ಚಿಕಿತ್ಸೆ ನೀಡುವ ಮೂಲಕ ಆಸ್ಪತ್ರೆ ಸಾಗಿಸಲು ನೆರವಾಗುತ್ತಿತ್ತು.

ಇಲ್ಲಿ ಯಾಕೆ ಇಲ್ಲ
ಬಜಪೆ ಹಳೆ ವಿಮಾಣ ನಿಲ್ದಾಣದಲ್ಲಿ 108 ಆ್ಯಂಬುಲೆನ್ಸ್‌ ಸೇವೆ ಇತ್ತು. ಸದಾ ಪ್ರಯಾಣಿಕರ ಆರೋಗ್ಯದ ಅಗತ್ಯಗಳಿಗೆ ಸಿದ್ಧವಾಗಿರುತ್ತಿತ್ತು. ಆದರೆ ಹೊಸ ವಿಮಾನ ನಿಲ್ದಾಣದಲ್ಲಿ ಇನ್ನೂ ಏಕೆ ಈ ಸೇವೆ ಕಲ್ಪಿಸಿಲ್ಲ ಎಂಬುದು ನಾಗರಿಕರ ಪ್ರಶ್ನೆ.
ಈ ಸಂಬಂಧ ಆರೋಗ್ಯ ಇಲಾಖೆಯ ವರಲ್ಲಿ ವಿಚಾರಿಸಿದರೆ ಬಜಪೆಯ ಸಮೀಪವೇ ವಿಮಾನ ನಿಲ್ದಾಣ ಇರುವು ದರಿಂದ 108ನ್ನು ವಿಮಾನ ನಿಲ್ದಾಣದಲ್ಲಿ ಇರಿಸಲಾಗಿತ್ತು. ಈಗ ಬಜಪೆ ಹಾಗೂ ಮಂಗಳೂರು ವಿಮಾನ ನಿಲ್ದಾಣ ದೂರ ಇದೆ. ಇದರಿಂದ ಸಾಧ್ಯವಿಲ್ಲ. ಮಂಗಳೂರು ವಿಮಾನ ನಿಲ್ದಾಣದಲ್ಲೇ 108 ಆ್ಯಂಬುಲೆನ್ಸ್‌ ಸೇವೆ ವಾಹನ ಇಡಲು ಸಾಧ್ಯವಿಲ್ಲ. ಒಂದು 108 ಮತ್ತು ಇನ್ನೊಂದು 108 ಆ್ಯಂಬುಲೆನ್ಸ್‌ ಸೇವೆಯ ಅಂತರ ನಿರ್ದಿಷ್ಟವಾಗಿರಬೇಕು ಎನ್ನುತ್ತಾರೆ. ಈಗಾಗಲೇ ಮಂಗಳೂರು ವಿಮಾನ ನಿಲ್ದಾಣದ ಒಳಗೆ ಖಾಸಗಿ ಸಂಸ್ಥೆಯೊಂದು ತುರ್ತು ಸೇವೆ ನೀಡುತ್ತಿದೆ. ವಿಮಾನ ನಿಲ್ದಾಣದ ಪ್ರಯಾಣಿಕರಿಗೆ ಏನಾದರೂ ಆರೋಗ್ಯ ಸಮಸ್ಯೆ ಇದ್ದಲ್ಲಿ ತುರ್ತು ಸೇವೆ ಬೇಕಾಗಿದ್ದಲ್ಲಿ ಮೊದಲಾಗಿ ತಯಾರು ಮಾಡಲಾಗುತ್ತದೆ ಎಂದು ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ.

ಈ ಸೇವೆಯ ಬಗ್ಗೆ ಯಾವಾಗಲೂ ಘಟನೆ ನಡೆದು ಹೋದ ಅನಂತರ ತಿಳಿಯುವುದರಲ್ಲಿ ಪ್ರಯೋಜನವಿಲ್ಲ. 108 ತುರ್ತು ಆ್ಯಂಬುಲೆನ್ಸ್‌ ಸೇವೆ ಇಲ್ಲಿಯೂ ಕಲ್ಪಿಸಿದರೆ ಅನುಕೂಲವಾಗಲಿದೆ ಎನ್ನುತ್ತಾರೆ ಪ್ರಯಾಣಿಕರು. ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಜಿಲ್ಲಾಡಳಿತ ತುರ್ತಾಗಿ ಗಮನಹರಿಸಿ, ಕೂಡಲೇ 108 ತುರ್ತು ಆ್ಯಂಬುಲೆನ್ಸ್‌ ಸೇವೆಯನ್ನು ಒದಗಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ವಿಶೇಷ ವರದಿ
 

Advertisement
Advertisement

Udayavani is now on Telegram. Click here to join our channel and stay updated with the latest news.

Next