Advertisement

ಟ್ವಿಟರ್ ಉದ್ಯಮಿ ಎಲಾನ್ ಮಸ್ಕ್ ಸುಪರ್ದಿಗೆ : ಸಿಇಒ ಪರಾಗ್ ಅಗರ್​ವಾಲ್ ಸೇರಿ ಹಲವರು ವಜಾ

08:35 AM Oct 28, 2022 | Team Udayavani |

ವಾಷಿಂಗ್ಟನ್ : 44 ಶತಕೋಟಿ ಡಾಲರ್ ಗೆ ಟ್ವಿಟರ್ ಅನ್ನು ಖರೀದಿಸುವ ಪ್ರಕ್ರಿಯೆ ಪೂರ್ಣಗೊಳಿಸುವ ಮೂಲಕ ಉದ್ಯಮಿ ಎಲಾನ್ ಮಸ್ಕ್ ಟ್ವಿಟರ್ ಅನ್ನು ತನ್ನ ಸುಪರ್ತಿಗೆ ತೆಗೆದುಕೊಂಡಿದ್ದಾರೆ.

Advertisement

ಇದರೊಂದಿಗೆ ಟೆಸ್ಲಾ ಸಿಇಒ ಎಲೋನ್ ಮಸ್ಕ್ ಟ್ವಿಟರ್‌ನ ಹೊಸ ಮಾಲೀಕರಾಗಿದ್ದಾರೆ. ರಾಯಿಟರ್ಸ್ ವರದಿಯ ಪ್ರಕಾರ, ಎಲೋನ್ ಮಸ್ಕ್ ಮಾಲೀಕರಾದ ಬೆನ್ನಲ್ಲೇ ಟ್ವಿಟರ್ ಸಿಇಒ ಪರಾಗ್ ಅಗರ್ವಾಲ್ ಮತ್ತು ಸಿಎಫ್‌ಒ ನೆಡ್ ಸೆಗಲ್ ಅವರನ್ನು ಕಂಪನಿಯಿಂದ ವಜಾಗೊಳಿಸಲಾಗಿದೆ. ಅಷ್ಟೇ ಅಲ್ಲ, ಕಂಪನಿಯ ಪ್ರಧಾನ ಕಚೇರಿಯಿಂದಲೂ ಅವರನ್ನು ಹೊರಹಾಕಲಾಗಿದೆ ಎನ್ನಲಾಗಿದೆ.

ಮಸ್ಕ್ ಅವರು ಟ್ವಿಟರ್ ಖರೀದಿ ಪ್ರಸ್ತಾವದಿಂದ ಹಿಂದೆ ಸರಿಯಲು ಯತ್ನಿಸಿದಾಗ ಅಗರ್​ವಾಲ್ ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯದಲ್ಲಿ ಹಿನ್ನಡೆಯಾಗಬಹುದು ಎಂಬ ಭೀತಿಯಿಂದ ಮಸ್ಕ್ ಟ್ವಿಟರ್ ಖರೀದಿ ಪ್ರಕ್ರಿಯೆ ಪೂರ್ಣಗೊಳಿಸಿದರು. ಟ್ವಿಟರ್ ಖರೀದಿ ಪ್ರಕ್ರಿಯೆಗೆ ನ್ಯಾಯಾಲಯವು ವಿಧಿಸಿದ್ದ ಗಡುವು ಪೂರ್ಣಗೊಳ್ಳಲು ಕೆಲವೇ ಗಂಟೆಗಳು ಬಾಕಿ ಇರುವಾಗ ಈ ಮಹತ್ವದ ಬೆಳವಣಿಗೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next