ವಾಷಿಂಗ್ಟನ್: ಜಗತ್ತಿನ ನಂಬರ್ ವನ್ ಶ್ರೀಮಂತ, ಎಲೆಕ್ಟ್ರಿಕ್ ಕಾರು ತಯಾರಿಕೆ ಸಂಸ್ಥೆಯ ಮಾಲೀಕ ಎಲಾನ್ ಮಸ್ಕ್ ಟೆಸ್ಲಾದ 44 ಲಕ್ಷ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಈ ಷೇರುಗಳ ಮಾರುಕಟ್ಟೆ ಮೌಲ್ಯ 3.99 ಬಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ. ಅಂದರೆ ಅಂದಾಜು 30, 536.79 ಕೋಟಿ ರೂಪಾಯಿ.!
ಇದನ್ನೂ ಓದಿ:ಕಲ್ಲಿದ್ದಲು ಕೊರತೆ; ದೆಹಲಿ, ಪಂಜಾಬ್, ಉತ್ತರಪ್ರದೇಶದಲ್ಲಿ ಭಾರೀ ವಿದ್ಯುತ್ ಕಡಿತ ಸಾಧ್ಯತೆ?
ಇತ್ತೀಚೆಗಷ್ಟೇ ಎಲಾನ್ ಮಸ್ಕ್ ಪ್ರಭಾವಿ ಸಾಮಾಜಿಕ ಜಾಲತಾಣ ಟ್ವೀಟರ್ ಅನ್ನು 44 ಬಿಲಿಯನ್ ಡಾಲರ್ (3.36 ಲಕ್ಷ ಕೋಟಿಗೆ) ಮೊತ್ತಕ್ಕೆ ಖರೀದಿಸಿದ್ದರು. ಇದೀಗ ಟೆಸ್ಲಾದ ಷೇರು ಮಾರಾಟದಿಂದಾಗಿ ಮಸ್ಕ್ ಗೆ ಸಾಮಾಜಿಕ ಜಾಲತಾಣವನ್ನು ಇನ್ನಷ್ಟು ಜನಪ್ರಿಯಗೊಳಿಸಲು ಹಣಕಾಸಿನ ನೆರವು ಸಿಕ್ಕಂತಾಗಲಿದೆ ಎಂದು ಬ್ಲೂಮ್ ಬರ್ಗ್ ವರದಿ ಮಾಡಿದೆ,
ಟ್ವೀಟರ್ ಖರೀದಿಯ ಸುದ್ದಿ ಹೊರಬಿದ್ದ ನಂತರ ಟೆಸ್ಲಾ ಕಂಪನಿಯ ಷೇರು ಮೌಲ್ಯ ಶೇ.12ರಷ್ಟು ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿತ್ತು. ಇದು 2020ರ ನಂತರ ಟೆಸ್ಲಾ ಕಂಪನಿ ಷೇರು ಮೌಲ್ಯ ದೊಡ್ಡ ಪ್ರಮಾಣದಲ್ಲಿ ಇಳಿಕೆ ಕಂಡಂತಾಗಿತ್ತು.
ಟೆಸ್ಲಾದ ಷೇರು ಮೌಲ್ಯ ಕುಸಿತದಿಂದಾಗಿ ಎಲಾನ್ ಮಸ್ಕ್ ಕೋಟ್ಯಂತರ ರೂಪಾಯಿ ನಷ್ಟ ಕಂಡಿದ್ದು, ಈ ಸಂದರ್ಭದಲ್ಲಿಯೇ ಮಸ್ಕ್ ತನ್ನ ವೈಯಕ್ತಿಕ ಸಾಲಗಳ ಭದ್ರತೆಗಾಗಿ ಟೆಸ್ಲಾದ ಸಾರ್ವಜನಿಕ ಷೇರುಗಳನ್ನು ಮಾರಾಟ ಮಾಡುವ ನಿರ್ಧಾರ ತೆಗೆದುಕೊಂಡಲ್ಲಿ ಟೆಸ್ಲಾ ಷೇರುಗಳ ಮೌಲ್ಯ ಮತ್ತಷ್ಟು ಕುಸಿತಕ್ಕೆ ಕಾರಣವಾಗಲಿದೆ ಎಂದು ಕಂಪನಿ ಹೂಡಿಕೆದಾರರಿಗೆ ಎಚ್ಚರಿಸಿತ್ತು.