Advertisement

ಟ್ವಿಟರ್‌ನ ನೀಲಿ ಹಕ್ಕಿ ಇನ್ನಿಲ್ಲ? ಶೀಘ್ರವೇ ಎಲ್ಲ ಹಕ್ಕಿಗಳಿಗೂ ವಿದಾಯ: ಮಸ್ಕ್ ಬಾಂಬ್‌

12:20 AM Jul 24, 2023 | Team Udayavani |

ವಾಷಿಂಗ್ಟನ್‌: ಖ್ಯಾತ ಮೈಕ್ರೋಬ್ಲಾಗಿಂಗ್‌ ತಾಣ ಟ್ವಿಟರ್‌ನ ನೀಲಿ ಹಕ್ಕಿ ಇನ್ನು ಮುಂದೆ ನಾಪತ್ತೆಯಾಗಲಿದೆ!  ಹೌದು ನೀಲಿ ಬಣ್ಣದ ಹಕ್ಕಿಯಿಂದಲೇ ಗುರುತಿಸಲ್ಪಡುತ್ತಿದ್ದ ಟ್ವಿಟರ್‌ಗೆ ಹೊಸ ಚಿಹ್ನೆಯನ್ನು ಪರಿಚಯಿಸಲು ಸಂಸ್ಥೆಯ ಮಾಲಕ ಎಲಾನ್‌ ಮಸ್ಕ್ ಮುಂದಾಗಿದ್ದಾರೆ. ಅವರೇ ಈ ಕುರಿತು ಘೋಷಣೆ ಮಾ ಡಿದ್ದು, ಟ್ವಿಟರ್‌ ಬಳಕೆದಾರರಲ್ಲಿ ಅಚ್ಚರಿ ಮೂಡಿಸಿದ್ದಾರೆ.

Advertisement

ಟ್ವಿಟರ್‌ ವೇದಿಕೆಯನ್ನು ರೀಬ್ರ್ಯಾಂಡ್‌ ಮಾಡುವ ತಮ್ಮ ಯೋಜನೆ ಬಗ್ಗೆ ರವಿ ವಾರ ಹೇಳಿಕೊಂಡಿರುವ ಮಸ್ಕ್, “ಚೀನ ದಲ್ಲಿರುವ ವೀ ಚಾಟ್‌ ಮಾದರಿಯಲ್ಲೇ “ಸೂಪರ್‌ ಆ್ಯಪ್‌’ವೊಂದನ್ನು ರಚಿಸುವ ಯೋಜನೆ ರೂಪಿಸಿದ್ದೇವೆ. ಸದ್ಯದಲ್ಲೇ ಟ್ವಿಟರ್‌ ಬ್ರ್ಯಾಂಡ್‌ಗೆ, ಅನಂತರ ಕ್ರಮೇಣವಾಗಿ ಎಲ್ಲ ಹಕ್ಕಿಗಳಿಗೂ ವಿದಾಯ ಹೇಳ ಲಿದ್ದೇವೆ’ ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲ, “ಟ್ವಿಟರ್‌ ಅನ್ನು ರೀಬ್ರ್ಯಾಂಡ್‌ ಮಾಡಲು ಒಳ್ಳೆಯ ಚಿಹ್ನೆ ಸಿಕ್ಕಿದ್ದೇ ಆದಲ್ಲಿ, ಕೆಲವೇ ಗಂಟೆಗಳಲ್ಲಿ ನಾವು ಅದನ್ನು ಜಗತ್ತಿಗೆ ಪ್ರಸ್ತುತಪಡಿಸಲಿದ್ದೇವೆ’ ಎಂದು ಮತ್ತೂಂದು ಟ್ವೀಟ್‌ ಮಾಡಿದ್ದಾರೆ.

“ಎಕ್ಸ್‌'(ಗಿ) ಆ್ಯಪ್‌: ಟ್ವಿಟರ್‌ ಅನ್ನು “ಎಕ್ಸ್‌'(ಗಿ) ಹೆಸರಿನಿಂದ ರೀಬ್ರ್ಯಾಂಡ್‌ ಮಾಡಲಾಗುತ್ತದೆ ಎಂಬ ಸುಳಿವನ್ನೂ ಮಸ್ಕ್ ನೀಡಿದ್ದಾರೆ. ಹಿಂದಿನಿಂದಲೂ ಮಸ್ಕ್ ಅವರಿಗೆ ಈ ಹೆಸರು ಬಹಳ ಅಚ್ಚುಮೆಚ್ಚು. ಹಲವು ಬಾರಿ ಅವರು “ಎಕ್ಸ್‌ ಆ್ಯಪ್‌’ನ ಕನಸನ್ನು ಬಿಚ್ಚಿಟ್ಟಿದ್ದಾರೆ. ಜನರ ನಡುವೆ ಸಂಪರ್ಕ ಕಲ್ಪಿಸುವುದು, ಪಾವತಿ ಮಾಡುವುದು, ಆನ್‌ಲೈನ್‌ನಲ್ಲಿ ಆಹಾರ ಆರ್ಡರ್‌ ಮಾಡುವುದು ಸಹಿತ ಎಕ್ಸ್‌ ಆ್ಯಪ್‌ ಅನ್ನು ಬಹೂಪಯೋಗಿ ಅಪ್ಲಿಕೇಷನ್‌ ಆಗಿ ಬದಲಾಯಿಸುವುದು ಮಸ್ಕ್ ಬಯಕೆಯಾಗಿದೆ.

ಹಲವು ಬದಲಾವಣೆಗಳು: ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಟ್ವಿಟರ್‌ ಸಂಸ್ಥೆ ಯು ಮಸ್ಕ್ನ ಹಿಡಿತಕ್ಕೆ ಬಂದ ಅನಂತರದಲ್ಲಿ ಹಲವಾರು ಬದಲಾವಣೆಗಳಿಗೆ ಮೈಕ್ರೋಬ್ಲಾಗಿಂಗ್‌ ತಾಣ ಸಾಕ್ಷಿಯಾಗಿದೆ. ಆರಂಭದಲ್ಲೇ ಮಸ್ಕ್ ಅವರು ತಮ್ಮ ಉದ್ಯಮದ ಹೆಸರನ್ನು “ಎಕ್ಸ್‌ ಕಾರ್ಪ್‌’ ಎಂದು ಬದಲಾಯಿಸಿಕೊಂಡಿದ್ದರು. ಎಪ್ರಿಲ್‌ನಲ್ಲಿ ಟ್ವಿಟರ್‌ನ ಹಕ್ಕಿಯ ಲೋಗೋ ಇರುವ ಸ್ಥಳವನ್ನು ನಾಯಿ (ಇನು ಡಾಗ್‌)ಯು ಆಕ್ರಮಿಸಿಕೊಂ ಡಿತ್ತು. ಅನಂತರದಲ್ಲಿ ಬ್ಲೂಟಿಕ್‌ ಚಂದಾದಾರಿಕೆ, ಪದಗಳ ಮಿತಿ, ಕಚೇರಿಯಲ್ಲಿನ ಬದಲಾವಣೆಗಳು ಭಾರೀ ವಿವಾದಕ್ಕೂ ಕಾರಣವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next