ನ್ಯೂಯಾರ್ಕ್: ಪ್ರಸ್ತುತ ಟೆಸ್ಲಾ ಸಿಇಒ ಆಗಿರುವ ಎಲಾನ್ ಮಸ್ಕ್ ತಾತ್ಕಾಲಿಕವಾಗಿಯಾದರೂ ಟ್ವಿಟರ್ ನ ಮುಂದಿನ ಸಿಇಒ ಆಗಬಹುದು ಎಂದು ವರದಿಯಾಗಿದೆ. ಅಂದರೆ ಕೇವಲ ಐದು ತಿಂಗಳ ಹಿಂದೆಯಷ್ಟೇ ಟ್ವಿಟರ್ ನ ಸಿಇಒ ಆಗದ ಪರಾಗ್ ಅಗರವಾಲ್ ಅವರನ್ನು ಕೈಬಿಡಲು ಮಸ್ಕ್ ಯೋಜಿಸುತ್ತಿದ್ದಾರೆ.
ಆದರೆ, 44 ಅಮೆರಿಕನ್ ಬಿಲಿಯನ್ ಒಪ್ಪಂದವು ಮುಕ್ತಾಯಗೊಂಡ ನಂತರ ಮಾತ್ರ ಮಸ್ಕ್ ಮಾತ್ರ ಸಿಇಒ ಆಗಲಿದ್ದಾರೆ ಎಂದು ಸಿಎನ್ ಬಿಸಿ ಯ ಡೇವಿಡ್ ಫೇಬರ್ ಹಂಚಿಕೊಂಡಿದ್ದಾರೆ.
ಕಂಪನಿಯಿಂದ ಜಾಕ್ ಡಾರ್ಸೆ ನಿರ್ಗಮಿಸಿದ ನಂತರ, ಕಳೆದ ವರ್ಷ ನವೆಂಬರ್ ನಲ್ಲಿ ಟ್ವಿಟರ್‌ನ ಹೊಸ ಸಿಇಒ ಆಗಿ ಪರಾಗ್ ಅಗರವಾಲ್ ನೇಮಕವಾಗಿದ್ದರು. ಟೌನ್‌ಹಾಲ್ ಸಭೆಯೊಂದರಲ್ಲಿ, ಅಗರವಾಲ್ ಅವರು ಮಸ್ಕ್ ನಾಯಕತ್ವದಲ್ಲಿ ಕಂಪನಿಯ ಭವಿಷ್ಯವು ಅನಿಶ್ಚಿತವಾಗಿದೆ ಎಂದು ಹೇಳಿದ್ದರು.
ಇದನ್ನೂ ಓದಿ:ರಾಜಕಾರಣಿಗಳ ಪರಿಚಯವಿದೆ ಎಂದು ನಂಬಿಸಿ 36 ಲಕ್ಷ ರೂ. ಪಂಗನಾಮ ಹಾಕಿದ ಮಹಿಳೆ
ಮಾಜಿ ಟ್ವಿಟರ್ ಸಿಇಒ ಜ್ಯಾಕ್ ಡಾರ್ಸೆ ಅವರನ್ನೂ ಸಿಎಒ ಸ್ಥಾನಕ್ಕೆ ಮತ್ತೆ ಪರಿಗಣಿಸಬಹುದು ಎಂದು ವರದಿಯಾಗಿದೆ. ಅಲ್ಲದೆ ಕಂಪನಿಯ ಆದಾಯವನ್ನು ಹೆಚ್ಚಿಸಲು ಮಸ್ಕ್ ಉದ್ಯೋಗಗಳನ್ನು ಕಡಿತಗೊಳಿಸಲು ಯೋಜಿಸುತ್ತಿದ್ದಾರೆ.
ಅಧಿಕಾರ ವಹಿಸಿ 12 ತಿಂಗಳೊಳಗೆ ಅಗರವಾಲ್ ಅವರನ್ನು ವಜಾ ಮಾಡಿದರೆ, ಮಸ್ಕ್ 43 ಅಮೆರಿಕನ್ ಮಿಲಿಯನ್ ಪಾವತಿಸಬೇಕಾಗುತ್ತದೆ.