ಟೆಕ್ಸಾಸ್: ಟೆಸ್ಲಾ ಸಂಸ್ಥೆಯ ಸಂಸ್ಥಾಪಕ ಎಲಾನ್ ಮಸ್ಕ್ ಅವರ ನಿವ್ವಳ ಮೌಲ್ಯ ಈ ವಾರದಲ್ಲಿ ಬರೋಬ್ಬರಿ 50 ಬಿಲಿಯನ್ ಡಾಲರ್ (3.5 ಲಕ್ಷ ಕೋಟಿ ರೂ.) ಕುಸಿದಿದೆ.
ಮಸ್ಕ್ ಅವರ ಷೇರುಗಳ ಮೌಲ್ಯ ಕುಸಿದಿರುವ ಹಿನ್ನೆಲೆಯಲ್ಲಿ ಅವರ ಮೌಲ್ಯವೂ ಕುಸಿದಿದೆ.
ಎಲಾನ್ ಮಸ್ಕ್ ಅವರು “ನನ್ನ ಶೇ. 10 ಷೇರನ್ನು ಮಾರಾಟ ಮಾಡಲೇ?’ ಎನ್ನುವ ಪ್ರಶ್ನೆಯನ್ನು ಕಳೆದ ವಾರಾಂತ್ಯದಲ್ಲಿ ಟ್ವಿಟ್ಟರ್‌ನಲ್ಲಿ ಕೇಳಿದ್ದರು. ಅದರ ನಂತರ ಅವರ ಷೇರು ಮೌಲ್ಯ ಕುಸಿದಿದೆ. ಅದರಿಂದಾಗಿ ಮಸ್ಕ್ ಅವರ ನಿವ್ವಳ ಮೌಲ್ಯವೂ ಕುಸಿದಿದೆ.
ಇದನ್ನೂ ಓದಿ:ಮಠ ಮಾನ್ಯಗಳಿಗೆ ಸರ್ಕಾರ ಬೆನ್ನೆಲುಬು: ಸಿಎಂ
ಹಾಗಿದ್ದರೂ ಈಗಲೂ ಮಸ್ಕ್ ಅವರು ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲೇ ಮುಂದುವರಿದಿದ್ದಾರೆ. ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಜೆಫ್ ಬೆಜೋಸ್ ಅವರ ಮೌಲ್ಯಕ್ಕಿಂದ ಮಸ್ಕ್ ಅವರ ಮೌಲ್ಯ 83 ಬಿಲಿಯನ್ ಡಾಲರ್ ಹೆಚ್ಚಿದೆ.