Advertisement
ಹೀಗಾಗಿ, ಧನಾತ್ಮಕ ಚಿಂತನೆಯು ವ್ಯಕ್ತಿಯಲ್ಲಿ ಆಶಾವಾದ ಮತ್ತು ಭರವಸೆಯ ಆಲೋಚನೆಗಳನ್ನು ಬಲಪಡಿಸುವುದಲ್ಲದೇ ಯಾರು ಪ್ರತಿಯೊಂದನ್ನೂ ಧನಾತ್ಮಕ ದೃಷ್ಟಿಕೋನದಿಂದ ನೋಡುತ್ತಾನೋ ಆತನು ಬದುಕಿನಲ್ಲಿ ಬರುವ ಹಲವಾರು ಸಮಸ್ಯೆಗಳು ಮತ್ತು ಸವಾಲುಗಳನ್ನು ಸುಲಭವಾಗಿ ಗೆದ್ದು ಬೀಗುತ್ತಾನೆ. ನಮ್ಮ ಸುತ್ತಲೂ ಪ್ರತಿಯೊಂದಕ್ಕೂ ಅಯ್ಯೋ ಹೀಗಾಯ್ತಲ್ಲಾ, ಹೀಗಾಗಬಾರದಿತ್ತು, ಮೊದಲೇ ಚೆನ್ನಾಗಿತ್ತು, ಇಷ್ಟೊಂದು ಕಠಿನ ಆಗುತ್ತದೆ ಅಂದುಕೊಂಡಿರಲಿಲ್ಲ ಇಂತಹ ನಕಾರಾತ್ಮಕ ಯೋಚನೆಯನ್ನೇ ಮಾಡುವ ಜನರನ್ನು ನೋಡುತ್ತೇವೆ.
Related Articles
Advertisement
ಪಂಚ್‌ನ ಗಾಜಿಗೇ ಸ್ಟ್ರೈಕ್ ಮಾಡಿದ ಪೆರ್ರಿ
ಮಹಿಳಾ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಆಟಗಾರ್ತಿ ಎಂದು ಪರಿಗಣಿಸಲ್ಪಟ್ಟಿರುವ ಆಸೀಸ್ ಆಲ್‌ರೌಂಡರ್ ಎಲ್ಲಿಸ್ ಪೆರ್ರಿ ಈ ಪಂದ್ಯದ 19ನೇ ಓವರ್‌ನಲ್ಲಿ ದೀಪ್ತಿ ಶರ್ಮಾ ವಿರುದ್ಧ ಬಾಲ್ ಒಂದನ್ನು ಪ್ರದರ್ಶನಕ್ಕೆ ಇಟ್ಟಿದ ಟಾಟಾ ಪಂಚ್ ಕಾರಿನ ಕಡೆಗೆ ನೇರವಾಗಿ ಹೊಡೆದರು. ಟಿವಿ ಪರದೆಯ ಮೇಲೆ ಕಾರಿನ ಕಿಟಕಿ ಗಾಜನ್ನು ಒಡೆದ ಅನಂತರ ಚೆಂಡು ಹಿಂದಿನ ಸೀಟಿನಲ್ಲಿ ಲ್ಯಾಂಡ್ ಆಗಿರುವುದನ್ನು ನೋಡಿದ ಪೆರ್ರಿಯ ಸಿಕ್ಸರ್ ಆರ್. ಸಿ.ಬಿ. ಫ್ಯಾನ್ಸ್‌ಗಳಿಂದ ಭರ್ಜರಿ ಮೆಚ್ಚುಗೆ ಪಡೆಯಿತು.
ಡಬ್ಲ್ಯು.ಪಿ.ಎಲ್.ನಲ್ಲಿ ಸೂಪರ್ ಸ್ಟ್ರೈಕರ್ ಪಡೆಯುವ ಆಟಗಾರ್ತಿಗೆ ಈ ಆವೃತ್ತಿಯಲ್ಲಿ ಟಾಟಾ ಪಂಚ್ ಕಾರನ್ನು ಪ್ರಶಸ್ತಿಯಾಗಿ ನೀಡಲಾಗುತ್ತದೆ. ಹೀಗಾಗಿ ಟಾಟಾ ಪಂಚ್ ಕಂಪೆನಿಯ ಕಾರೊಂದನ್ನು ಪ್ರದರ್ಶನಕ್ಕಾಗಿ ಪ್ರತೀ ಪಂದ್ಯದಲ್ಲೂ ಇಡಲಾಗುತ್ತದೆ. ಹಾಗೆ ಇಟ್ಟಿದ್ದ ಕಾರಿನ ಡೋರ್ ಗಾಜಿಗೆ ಎಲ್ಲಿಸ್ ಪೆರ್ರಿ ಬಾರಿಸಿದ ಸಿಕ್ಸರ್ ಬಡಿದಿದ್ದು, ಚೆಂಡು ಬಿದ್ದ ರಭಸಕ್ಕೆ ಗಾಜು ಪೀಸ್ ಪೀಸ್ ಆಗಿದೆ.
ಕಾರಿನ ಗಾಜು ಒಡೆದಿರುವುದನ್ನು ನೋಡಿದ ಪೆರಿಯು ತನ್ನ ತಲೆಯ ಮೇಲೆ ಕೈಹೊತ್ತ ಪ್ರತಿಕ್ರಿಯೆ ಚಿನ್ನದಂತಿತ್ತು. ನಂತರ ಪೆರ್ರಿಯು ನಾನು ಸ್ವಲ್ಪ ಚಿಂತಿತಳಾಗಿದ್ದೇನೆ ಏಕೆಂದರೆ ಕಾರಿನ ಗಾಜಿನ ಮೊತ್ತವನ್ನು ನಾನು ಪಾವತಿಸಬೇಕೇ ನನಗೆ ತಿಳಿದಿಲ್ಲ. ಅದೇ ರೀತಿ ನನ್ನ ವಿಮೆಯು ಇಲ್ಲಿ ಉಪಯೋಗಕ್ಕೆ ಬರುತ್ತದೆ ಎಂದು ನಾನು ಭಾವಿಸುವುದಿಲ್ಲ ಎಂದು ಪೋಸ್ಟ್ ಮ್ಯಾಚ್ ಪ್ರಸೆಂಟೇಶನ್‌ನಲ್ಲಿ ಹೇಳಿದ್ದರು.
ಕಲೆ ಮತ್ತು ಕಲಾವಿದ ಎಂಬ ಶೀರ್ಷಿಕೆಯೊಂದಿಗೆ ಎಲ್ಲಿಸ್ ಪೆರ್ರಿ ಗಾಜು ಒಡೆದ ಕಾರಿನ ಮುಂದೆ ನಿಂತಿರುವ ಚಿತ್ರವನ್ನು ಆರ್.ಸಿ.ಬಿ ಪೋಸ್ಟ್ ಮಾಡಿದ್ದು, ಅತ್ಯುತ್ತಮವಾಗಿ ನಡೆಯುತ್ತಿರುವ ಈ ಲೀಗ್‌ನಲ್ಲಿ ಮತ್ತು ಮುಂಬರುವ ಐಪಿಎಲ್ ಪಂದ್ಯಗಳಲ್ಲಿ ಇನ್ನಷ್ಟು ಹೆಚ್ಚು ಕಾರಿನ ಕಿಟಕಿಗಳು ಒಡೆಯಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದೆ.
ಒಂದು ರೀತಿಯಲ್ಲಿ ಟಾಟಾ ಕಂಪೆನಿಯ ಬಗೆಗೆ ನಿಮ್ಮ ಕಾರ್ ಡ್ಯಾಮೇಜ್ ಆಯಿತು ನೋಡಿ ಎನ್ನುವ ಭಾವನೆ ವೀಕ್ಷಕರಲ್ಲಿ ಹರಡಿ, ಪ್ರಚಾರಕ್ಕೆಂದು ನಿಲ್ಲಿಸಿದ್ದ ಕಾರಿನ ಬ್ರ್ಯಾಂಡ್‌ಗೆ ಋಣಾತ್ಮಕ ಎಫೆಕ್ಟ್ ಬಂದಿತ್ತು!
ಆದರೆ ಇದರಿಂದ ವಿಚಲಿತರಾಗದೇ ಸ್ಮಾರ್ಟ್ ಆಗಿ ಯೋಚಿಸಿದ ಟಾಟಾ ಕಂಪೆನಿಯ ಎಫ್.ಸಿ.ಬಿ ಕಿನೆಕ್ಟ್‌ನ ರಾಷ್ಟ್ರೀಯ ಸೃಜನಾತ್ಮಕ ನಿರ್ದೇಶಕ ಕಾರ್ತಿಕೇಯ ತಿವಾರಿ ಇವರು ಆ ಕಾರಿನ ಕಿಟಕಿಯ ಒಡೆದು ಹೋದ ಚೂರುಗಳನ್ನು ಸಂಗ್ರಹಿಸಿ ಒಂದು ಫ್ರೆàಮ್‌ನಲ್ಲಿ ಜೋಡಿಸಿ ಸುಂದರ ಸ್ಮರಣಿಕೆಯನ್ನಾಗಿ ತಯಾರಿಸಿ ಕಾರಿನ ಗಾಜನ್ನು ಒಡೆದ ಅದೇ ಹುಡುಗಿಗೆ ಫೈನಲ್ ಪಂದ್ಯದಲ್ಲಿನ ಶ್ರೇಷ್ಠ ಪ್ರದರ್ಶನಕ್ಕೆ ಪ್ರಶಸ್ತಿಯಾಗಿ ಕೊಡಿಸಿದರು.
ತಿವಾರಿ ಅವರ ಈ ಸೃಜನಶೀಲ ನಡೆ ಮತ್ತು ನಿರ್ಧಾರವು ಕಾರಿನ ಬ್ರಾಂಡ್ ಮೇಲೆ ಬಂದಿದ್ದ ಋಣಾತ್ಮಕ ಎಫೆಕ್ಟನ್ನು ಪೂರ್ತಿಯಾಗಿ ತೊಡೆದುಹಾಕಿ ಕಂಪೆನಿಗೆ ಮತ್ತಷ್ಟು ಹೆಚ್ಚಿನ ಧನಾತ್ಮಕ ಪ್ರಚಾರವನ್ನು ಗಳಿಸಿಕೊಟ್ಟಿತು. ನೆಗೆಟಿವ್ ಆಗಿದ್ದನ್ನು ಪಾಸಿಟಿವ್ ಆಗಿ ಬದಲಾಯಿಸುವ ಜಾಣ್ಮೆಯಲ್ಲಿ ಜೀವನದ ಖುಷಿ ಅಡಗಿದೆ ಎನ್ನುವುದನ್ನು ಟಾಟಾ ಕಂಪೆನಿಯು ಮತ್ತೂಮ್ಮೆ ಸಾಬೀತು ಮಾಡಿತು! ಈ ಸ್ಮರಣಿಕೆಗೆ ತಿವಾರಿ ಅವರು ನೀಡಿದ ಹೆಸರು ಪೆರ್ರಿ ಪವರ್ ಫುಲ್ ಪಂಚ್!
4 ಮಾರ್ಚ್ 2024 ರಂದು ಪೆರ್ರಿ ಬಾರಿಸಿದ ಸಿಕ್ಸರ್ ಕಾರಿನ ಗಾಜಿನ ಕಿಟಕಿಯನ್ನು ಒಡೆಯಿತು. ಟಾಟಾ ಸಂಸ್ಥೆಯು ಇದೇ ಆಟಗಾರ್ತಿಗೆ ಟಾಟಾ ಪಂಚ್ ಕಾರಿನ ಕಿಟಕಿಯ ಒಡೆದ ಗಾಜಿನ ಚೂರುಗಳನ್ನು ಸೃಜನಾತ್ಮಕವಾಗಿ ಜೋಡಿಸಿ ಪೆರಿ ಪವರ್‌ಫುಲ್ ಪಂಚ್’ ಎನ್ನುವ ವಿಶಿಷ್ಟ ಸ್ಮರಣಿಕೆಯನ್ನು ನೀಡುವ ಮೂಲಕ ಈ ಕ್ಷಣವನ್ನು ಸ್ಮರಣೀಯ ವಿಜಯವನ್ನಾಗಿ ಮಾಡಿತು.
ಈ ಸ್ಮರಣಿಕೆಯು ಪೆರ್ರಿ ಕಾರಿನ ಗಾಜನ್ನು ಒಡೆದ ದಿನಾಂಕವನ್ನು ಒಳಗೊಂಡಿದ್ದು, ಪೆರ್ರಿ ಒಡೆದ ಕಾರಿನ ಕಿಟಕಿಯ ಒಡೆದ ಗಾಜುಗಳನ್ನು ಅತ್ಯಂತ ನಾಜೂಕು ಮತ್ತು ಕಲಾತ್ಮಕವಾಗಿ ಜೋಡಿಸಿ ಅದಕ್ಕೆ ಚೌಕಟ್ಟನ್ನು ಹಾಕಿ ಈ ಪ್ರಶಸ್ತಿಯನ್ನು ರಚಿಸಲಾಗಿದೆ.
ಈ ಸ್ಮರಣಿಕೆಯನ್ನು ನೀಡಿದ ಉದ್ದೇಶ, ಸಾಧನೆಯ ಹಸಿವು ಇರುವ ಮತ್ತು ಪ್ರತಿಭಾವಂತ ಮಹಿಳಾ ಆಟಗಾರ್ತಿಯರು ಸಾಧನೆಯ ಕಡೆಗೆ ಸಾಗಲು ಇರುವ ಹಲವು ಅಡೆತಡೆಗಳನ್ನು ಮುರಿಯುವ ಮತ್ತು ಸಾಧನೆಯ ಸಂಭ್ರಮವನ್ನು ಆಚರಿಸುವುದನ್ನು ಸಂಕೇತಿಸುತ್ತದೆ ಎಂದು ಟಾಟಾ ಕಂಪನಿಯು ಹೇಳಿಕೊಂಡಿದೆ.
ಮಹಿಳಾ ಪ್ರೀಮಿಯರ್ ಲೀಗ್ ಈ ದಿನ ಮಹಿಳಾ ಕ್ರಿಕೆಟ್ ಜಗತ್ತಿನಲ್ಲಿ ಹಲವಾರು ಪೂರ್ವಾಗ್ರಹಗಳನ್ನು ಛಿದ್ರಗೊಳಿಸುವಲ್ಲಿ ಹೊಸ ಆಯಾಮವನ್ನು ತಲುಪಿದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಎಲ್ಲಿಸ್ ಪೆರ್ರಿ ಕ್ರೀಡೆಯಲ್ಲಿ ಮಹಿಳೆಯರ ಸಾಧನೆಯ ಬಗೆಗೆ ಅಚ್ಚಳಿಯದ ಹೆಜ್ಜೆಗುರುತನ್ನು ಮೂಡಿಸಿದ್ದಾರೆ ಅಷ್ಟೇ ಅಲ್ಲದೇ ಲೀಗಿನ ಶೀರ್ಷಿಕೆ ಪ್ರಾಯೋಜಕರ ಡಿಸ್‌ಪ್ಲೆಕಾರ್, ಖೀಂಖೀಂ.ಜñನ ಕಿಟಕಿಯನ್ನೂ ಸಹ ಛಿದ್ರಗೊಳಿಸಿದರು ಎಂದು ಮಾರ್ಮಿಕವಾಗಿ ಘೋಷಿಸುವ ಮೂಲಕ ಮಹಿಳಾ ಸಾಧಕಿಯರನ್ನು ಬೆಂಬಲಿಸುವುದಾಗಿ ಟಾಟಾ ಇವಿ ಕಂಪೆನಿ ಘೋಷಿಸಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿಯೊಂದು ಮಗುವೂ ಬೀದಿಗಳಲ್ಲಿ ಕ್ರಿಕೆಟ್ ಆಡುವ ಮತ್ತು ರಸ್ತೆಯಲ್ಲಿ ನಿಲ್ಲಿಸಿರುವ ಕಾರುಗಳನ್ನು ದೂಡುವ ಕನಸುಗಳನ್ನು ಕಾಣುತ್ತವೆ. ಆದರೆ ಅದನ್ನು ನನಸಾಗಿಸುವ ಧೈರ್ಯವನ್ನು ಮಾಡುವುದಿಲ್ಲ, ಆದರೆ ನೀವು ಅದನ್ನು ಇಂದು ಮಾಡಿದ್ದೀರಿ. ನಿಲ್ಲಿಸಿದ್ದ ಆ ಡಿಸ್ಪೆ ಕಾರಿನ ಗಾಜನ್ನು ಮುರಿಯುವುದು ಕೇವಲ ದವಡೆಯನ್ನು ಮುರಿಯುವ ಕ್ಷಣವಷ್ಟೇ ಆಗಿರಲಿಲ್ಲ, ಬದಲಿಗೆ ಪ್ರತಿಯೊಬ್ಬ ಕ್ರಿಕೆಟ್ ಪ್ರೇಮಿಯ ಹೃದಯದಲ್ಲಿ ಅಡಗಿರುವ ಚೇಷ್ಟೆಯ ಮನೋಭಾವದ ಸಂತೋಷಕ್ಕೆ ಇದು ಸಿಕ್ಕಿದ ಸವಿಯಾದ ನಮನ. ಖೀಂಖೀಂಘಕಐ 2024 ರ ಕಾರಿನ ಕಿಟಕಿ ಮುರಿದ ಯೋಧ ನಿಮಗೆ ಚೀರ್ಸ್! ಎಂದು ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಟಾಟಾ ಮೋಟಾರ್ಸ್ ಬರೆದುಕೊಂಡಿದೆ.
ಈ ಬಾರಿಯ ಮಹಿಳಾ ಪ್ರೀಮಿಯರ್ ಲೀಗಿನ ಸರಣಿಯಿಡೀ ಅದ್ಭುತವಾಗಿ ಆಡಿದ ಆಟಗಾರ್ತಿಯ ಹೆಸರು ಎಲ್ಲಿಸ್ ಪೆರ್ರಿ ಕೂಡ ಈ ಸ್ಮರಣಿಕೆಯ ಶೀರ್ಷಿಕೆಯಲ್ಲಿ ಬಂದಿದ್ದು, ಪಂದ್ಯಾವಳಿಯಲ್ಲಿ ನಡೆದ ರೋಚಕ ಘಟನೆಯನ್ನು ವಿವರಣೆ ಮಾಡಬಹುದಾದ ಪದಗಳನ್ನೂ ಅರ್ಥವತ್ತಾಗಿ ಇಲ್ಲಿ ಬಳಸಿಕೊಂಡು ಪಂಚ್ ಎಂಬ ಕಾರಿನ ಹೆಸರನ್ನೂ ಹೆಚ್ಚು ಪವರ್ ಫುಲ್ ಎಂಬಂತೆ ಧನಾತ್ಮಕವಾಗಿ ಪ್ರಚಾರ ಮಾಡುವ ಮೂಲಕ ಸೃಜನಶೀಲತೆಯನ್ನು ಪ್ರದರ್ಶಿಸಿತು.
ಕಾರ್ತಿಕೇಯ ತಿವಾರಿ ಅವರು ಸಮಕಾಲೀನ ಬ್ರಾಂಡ್‌ಗಳನ್ನು ಯೋಜಿತ ಕ್ಷಣಗಳಲ್ಲಿ ನಿರ್ಮಿಸಲಾಗಿದ್ದು, ಈ ಲೀಗ್ ಕೇವಲ ಕ್ರಿಕೆಟ್ ಪಂದ್ಯಾವಳಿಯಷ್ಟೇ ಆಗಿರದೇ ಇದು ಸಂದರ್ಭಕ್ಕೆ ಅನುಗುಣವಾಗಿ ಪ್ರತಿಕ್ರಿಯಿಸುವ ಮತ್ತು ಅಗಾಧ ಪ್ರತಿಭೆಯ ಅನಾವರಣದ ಸಂಭ್ರಮವೂ ಆಗಿದೆ.
ಈ ಘಟನೆಯು ಭಾರತದಲ್ಲಿ ಮಹಿಳೆಯರು ಹೇಗೆ ಗಾಜಿನ ಒಳ ಛಾವಣಿಯನ್ನು ನುಚ್ಚುನೂರು ಮಾಡುತ್ತಾರೆ ಎನ್ನುವುದಕ್ಕೆ ಅತ್ಯುತ್ತಮ ಉದಾಹರಣೆ ಆಗಿದೆ. ಈ ಒಂದು ಅದ್ಭುತ ಹಾಗೂ ನೈಜ ಕ್ಷಣವನ್ನು ಧನಾತ್ಮಕವಾಗಿ ಪರಿಗಣಿಸಿ ಮತ್ತು ಈ ವಿಜಯವನ್ನು ಅಮರಗೊಳಿಸಿ ಪೆರ್ರಿ ಅವರಿಗೆ ಹೂಗುತ್ಛವನ್ನು ನೀಡುವ ಮೂಲಕ ಅಭಿನಂದನೆ ಸಲ್ಲಿಸಲು ಬಯಸುತ್ತೇವೆ ಎಂದು ಹೇಳಿದ್ದಾರೆ. ಪ್ರತಿಯೊಂದು ವಿಚಾರದಲ್ಲೂ ಕೇವಲ ಋಣಾತ್ಮಕ ಧೋರಣೆಯನ್ನೇ ತೋರುವ ವ್ಯವಸ್ಥೆಯ ನಡುವೆ ಧನಾತ್ಮಕತೆ ಎಂದರೆ ಇದೇ ಅಲ್ಲವೇ?
-ಸಂತೋಷ್ ರಾವ್ ಪೆರ್ಮುಡ
ಬೆಳ್ತಂಗಡಿ