Advertisement
ಸ್ಥಳೀಯರು ಸೇರಿದಂತೆ ಸುತ್ತಮುತ್ತಲ ಹಳ್ಳಿಗಳ ಮಹಿಳೆಯರು ತಂಡೋಪ ತಂಡವಾಗಿ ಮಠದ ಆವರಣದಲ್ಲಿ ಬೀಡು ಬಿಟ್ಟು ಅಹೋರಾತ್ರಿ ರೊಟ್ಟಿ ಸಿದ್ಧಗೊಳಿಸುತ್ತಿದ್ದಾರೆ. ಕೆಲವರು ದಾನಿಗಳು ನೀಡಿದ ಅಕ್ಕಿ, ಗೋಧಿ , ಬೇಳೆ ಕಾಳು ಸೇರಿದಂತೆ ವಿವಿಧ ದವಸ ಧಾನ್ಯ ಸ್ವತ್ಛಗೊಳಿಸುವ ಕಾಯಕದಲ್ಲಿ ನಿರತರಾಗಿದ್ದಾರೆ.
Related Articles
Advertisement
ಮಹಾರಾಜರ ಹಿನ್ನೆಲೆ: ಪೂರ್ವಾಶ್ರಮದ ಹೆಸರು ದಶರಥ ಜನಿಸಿದ್ದು, 1966ರಲ್ಲಿ ಇಂಡಿ ತಾಲೂಕಿನ ಶಿರಕನಹಳ್ಳಿಯಲ್ಲಿ ಕೃಷಿ ಕುಟುಂಬ, ಕುಸ್ತಿಪಟ್ಟು ಬಾಲ್ಯದಿಂದ ಪ್ರೌಢಾವಸ್ಥೆಗೆ ಬಂದಂತೆ ಅಧ್ಯಾತ್ಮದತ್ಲೂ ಒಲವು ಹೆಚ್ಚಿತು. ಊರಿಂದ 5 ಕಿಮೀ ದೂರವಿದ್ದ ಪ್ರಭುದೇವರ ಬೆಟ್ಟಕ್ಕೆ ಹೋಗಲಾರಂಭಿಸಿದರು.
ಶಿವಯೋಗಿಗಳ ಸಾನ್ನಿಧ್ಯದಲ್ಲಿ ಸ್ಥಾನ ಪಡೆದರು. 1990ರಲ್ಲಿ ಆರು ತಿಂಗಳು ಯೋಗಾನುಷ್ಠಾನಗೈದರು. ಈ ಬಳಿಕ ದಶರಥರಲ್ಲಿ ಸನ್ಯಾಸತ್ವದ ಹಂಬಲ ಹೆಚ್ಚಿತು. ಶಿವಯೋಗಿಗಳ ಆಜ್ಞೆಯಂತೆ ಬಂಥನಾಳದ ವೃಷಭಲಿಂಗೇಶ್ವರರಿಂದ ಸನ್ಯಾಸತ್ವದ ಸಂಕೇತವಾಗಿ ಕಾವಿ ಬಟ್ಟೆಯನ್ನು ಆಶೀರ್ವಾದವಾಗಿ ಪಡೆದು ಬಂದ ದಶರಥ ಶಿವಯೋಗಿಗಳಿಂದ ಲಿಂಗ ದೀಕ್ಷೆ ಪಡೆದರು. ಅಂದೇ ಸಂಸಾರಕ್ಕೆ ವಿದಾಯ ಹೇಳಿದ ದಶರಥ ಅಡವಿಲಿಂಗ ಮಹಾರಾಜರಾದರು. ಶಿವಯೋಗಿಗಳು ಅಡವಿಲಿಂಗನ ಆಧ್ಯಾತ್ಮಿಕ ಗುರುಗಳಾದರು. ಲೋಕ ಕಲ್ಯಾಣಕ್ಕಾಗಿ ಅವರು ಮಾಡಿದ ಜಪಾನುಷ್ಠಾನಗಳು ಹಲವಾರು.
ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ಹಿಮಾಲಯ ಒಳಗೊಂಡು ದೇಶದ ಹಲವು ಪ್ರದೇಶಗಳಲ್ಲಿ ಹಾಗೂ ನೇಪಾಳದಲ್ಲಿ ಘೋರ ತಪಸ್ಸನ್ನಾಚರಿಸಿದ ಸರಳ ಜೀವಿ. ಇಂದು ತಮ್ಮ ಗುರುಗಳಾದ ಬಂಥನಾಳದ ಲಿಂ.ಸಂಗನಬಸವ ಶಿವಯೋಗಿಗಳು ನಡೆಸಿದ 1.96ಲಕ್ಷ ಇಷ್ಟಲಿಂಗ ಪೂಜಾ ಕಾರ್ಯಕ್ರಮದ 50ವರ್ಷದ ನೆನಪಿಗಾಗಿ ವೀರಘೋಟದಲ್ಲಿ ಹಮ್ಮಿಕೊಂಡಿದ್ದಾರೆ.
ಲಕ್ಷ್ಮಣ ಹಿರೇಕುರಬರ