Advertisement
ಯೋಜನೆ ಏನು: ಶಿಕ್ಷಕರಿಗೆ ತರಬೇತಿ, ವಿಷಯ ತಜ್ಞರಿಂದ ಮಾದರಿ ಪ್ರಶ್ನೆಪತ್ರಿಕೆಗಳ ಬುಕ್‌ಲೆಟ್ ತಯಾರಿಸಲಾಗಿದೆ. ವಿಶೇಷ ತರಗತಿಗಳು, ಓಪನ್‌ಎಗ್ಸಾಮ್, ವಿಶ್ವಾಸ ಕಿರಣ, ರಸಪ್ರಶ್ನೆ, ಮನೆ-ಮನೆ ಭೇಟಿ, ವಿದ್ಯಾರ್ಥಿಗಳ ದತ್ತು, ಪ್ರಾರ್ಥನೆ ವೇಳೆ ಮಾಹಿತಿ, ಚಾನಲ್-ರೇಡಿಯೋ ಮೂಲಕ ಮಾಹಿತಿ ನೀಡುವ ವಿನೂತನ ಯೋಜನೆ ರೂಪಿಸಿದೆ.
Related Articles
Advertisement
ರಸ ಪ್ರಶ್ನೆ: ಶಾಲೆಯಲ್ಲಿ ಪ್ರತಿ ಶನಿವಾರ ರಸಪ್ರಶ್ನೆ ಸ್ಪರ್ಧೆ ನಡೆಯುವುದು, ಅಲ್ಲದೆ ನಿತ್ಯದ ಪ್ರಾರ್ಥನೆ ವೇಳೆ ಎರಡರಿಂದ ಹತ್ತು ವಿಷಯವಾರು ಪ್ರಶ್ನೆಯನ್ನು ವಿದ್ಯಾರ್ಥಿಗಳೇ ಕೇಳಿ ಉತ್ತರ ಪಡೆಯುವುದರಿಂದ ಸಾಕಷ್ಟು ಪ್ರಭಾವ ಬೀರಲಿದೆ.
ಮನೆ-ಮನೆ ಭೇಟಿ: ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಯನ್ನು ಶಿಕ್ಷಕರು ದತ್ತು ತೆಗೆದುಕೊಳ್ಳುವುದು, ಅವರ ಓದಿನ ಮೇಲೆ ನಿಗಾ ಇಡಲು ಮನೆಗೆ ಭೇಟಿ ಕೊಡುವುದು, ಮಿಸ್ಡ್ಕಾಲ್ ನೀಡುವುದು. ರಾತ್ರಿ-ಮುಂಜಾನೆ ಓದುವಂತೆ ಪ್ರೇರೇಪಿಸಲು ಬಾಲಕರಿಗೆ ಶಾಲೆಯಲ್ಲೇ ಊಟ ಸಹಿತ ಅವಕಾಶ ಕಲ್ಪಿಸುವುದು ಯೋಜನೆ ಉದ್ದೇಶ.
ಸಂವಾದ: ಪ್ರತಿ ಶಾಲೆಯಲ್ಲೂ ಪೋಷಕರ ಸಭೆ ನಡೆಸಿ ಮಕ್ಕಳ ಪ್ರಗತಿಯನ್ನು ಪರಾಮರ್ಶಿಸಿ ಸಲಹೆ ನೀಡಿರುವುದಲ್ಲದೆ, ತಾವೇ ಎಲ್ಲ ಶಾಲೆಗಳಿಗೂ ತೆರಳಿ ಮಕ್ಕಳೊಂದಿಗೆ ಸಂವಾದ ನಡೆಸಿ ಶಿಕ್ಷಣದ ಮಹತ್ವವನ್ನು ತಿಳಿಸಿ, ಅವರಲ್ಲಿ ವಿಶ್ವಾಸ ಮೂಡಿಸಿ ಪರೀಕ್ಷೆಗೆ ಸನ್ನದ್ಧರನ್ನಾಗಿಸುವುದಾಗಿದೆ.
ಚಾನಲ್ ಮೂಲಕ ಪಾಠ: ನುರಿತ ಶಿಕ್ಷಕರಿಂದ ಇಂಗ್ಲಿಷ್, ಗಣಿತ,ವಿಜಾnನ ವಿಷಯಗಳ ರೆಕಾರ್ಡಿಂಗ್ ಮಾಡಿಸಿ, ನಗರದ ಇ-ಚಾನಲ್ ಮೂಲಕ ಮಾರ್ಚ್ 22ರ ವರೆಗೆ ನಿತ್ಯ ರಾತ್ರಿ 7 ರಿಂದ 8ರ ವರೆಗೆ ಬಿತ್ತರಿಸಲಾಗುವುದು. ಅಲ್ಲದೆ ನಿತ್ಯ ಮಧ್ಯಾಹ್ನ 2.30ರಿಂದ3.05ರವರೆಗಿನ ರೇಡಿಯೋ ಮೂಲಕ ಪಾಠವನ್ನೂ ಕೇಳಿಸಲು ಕ್ರಮವಹಿಸಲಾಗಿದೆ.
ಸಿ.ಸಿ.ಕ್ಯಾಮರಾ ಕಣ್ಗಾವಲು: ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮಾ. 23 ರಿಂದ ಏ. 6 ವರೆಗೆ ನಡೆಯಲಿದ್ದು, 32 ಸರಕಾರಿ ಶಾಲೆಗಳ 2558, ಅನುದಾನಿತ 429 ಹಾಗೂ ಖಾಸಗಿ ಶಾಲೆಗಳ 823 ಸೇರಿದಂತೆ ಒಟ್ಟಾರೆ 3810 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಎಲ್ಲ ಪರೀûಾ ಕೇಂದ್ರಗಳಲ್ಲಿ ಸಿ.ಸಿ.ಕ್ಯಾಮರಾ ಅಳವಡಿಸಲಾಗುವುದು.
ಕಳೆದ ಸಾಲಿನಲ್ಲಿ ಶೇ 76.91 ಫಲಿತಾಂಶ ಗಳಿಸಿ ಜಿಲ್ಲೆಗೆ ಮೂರನೇ ಹಾಗೂ ರಾಜ್ಯಕ್ಕೆ 79 ನೇ ಸ್ಥಾನಗಳಿಸಿತ್ತು. ಈ ಬಾರಿ ಮೊದಲ ಸ್ಥಾನ ಪಡೆಯುವ ಗುರಿ ಇಟ್ಟುಕೊಂಡು ವಿನೂತನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಬಿಇಒ ರೇವಣ್ಣ “ಉದಯವಾಣಿಗೆ’ ಮಾಹಿತಿ ನೀಡಿದರು.
* ಸಂಪತ್‌ಕುಮಾರ್ ಹುಣಸೂರು