Advertisement
ಕಾಡಾನೆಯೊಂದು ಮರಣ ಹೊಂದಿದ್ದು, ಮರಣ ಹೊಂದಿದ ಆನೆಯ ಕಳೇಬರವನ್ನು ನೋಡಲು ದೂರದಿಂದ ಆನೆಗಳ ಹಿಂಡೂ ಬಂದಿವೆ. ಇಂತಹದೊಂದು ಘಟನೆ ನಡೆದಿರುವುದು ಭದ್ರ ಅಭಯಾರಣ್ಯ ವ್ಯಾಪ್ತಿಯಲ್ಲಿನ ಹೆಬ್ಬೆ ವಲಯದಲ್ಲಿ. ಕಾಡಾನೆಗಳು ಮೃತಪಟ್ಟ ಆನೆಯ ಕಳೇಬರ ಸಮೀಪ ಕೆಲಕಾಲ ಇದ್ದು ನಂತರ ತೆರಳಿರುವ ದೃಶ್ಯದ ಪೋಟೋಗಳು ಅರಣ್ಯ ಇಲಾಖೆ ಅಳವಡಿಸಿದ್ದ ಟ್ರ್ಯಾಪ್ ಕ್ಯಾಮಾರಾದಲ್ಲಿ ಸೆರೆಯಾಗಿದೆ. ಮನುಷ್ಯರಂತೆ ಮೂಕ ಪ್ರಾಣಿಗಳಿಗೂ ಭಾವನೆಗಳಿವೆ. ಸಂಬಂಧದ ಬೆಲೆ ತಿಳಿಸಿದೆ ಎನ್ನುವುದನ್ನು ಈ ಪೋಟೋಗಳು ಸಾರಿ ಸಾರಿ ಹೇಳುತ್ತಿದೆ.
Related Articles
Advertisement
ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಆನೆಯ ಕಳೇಬರ ಬಿಟ್ಟು ಬರುವ ವೇಳೆ ಆನೆಯ ಕಳೇಬರ ಡಿ ಕಂಪೋಸ್ ಹೇಗೆ ಆಗುತ್ತದೆ. ಹಾಗೂ ಯಾವ ಯಾವ ಪ್ರಾಣಿಗಳು ಕಳೇಬರವನ್ನು ಭಕ್ಷಿಸುತ್ತವೆ ಎಂದು ತಿಳಿಯುವ ಉದ್ದೇಶದಿಂದ ಟ್ರ್ಯಾಪ್ ಕ್ಯಾಮಾರ ಅಳವಡಿಸಿದ್ದರು. ಕೆಲ ದಿನಗಳ ನಂತರ ಕ್ಯಾಮಾರ ಪರಿಶೀಲಿಸಿದಾಗ ಆನೆಯ ಕಳೇಬರದ ಹತ್ತಿರಕ್ಕೆ 17 ಕಾಡಾನೆಗಳು ಬಂದಿದ್ದು, ಕಳೇಬರದ ಸುತ್ತ ತಿರುಗಾಡುತ್ತಿರುವ ದೃಶ್ಯ ಸೆರೆಯಾಗಿದೆ. ಒಂದು ವಂಶದ ಆನೆಗಳು ವರ್ಷಕೊಮ್ಮೆ ಒಂದು ಕಡೆ ಸೇರುತ್ತವೆ. ಆನೆಗಳು ಮೃತಪಟ್ಟರೇ ಉಳಿದ ಆನೆಗಳು ಹುಡುಕಿಕೊಂಡು ಬರುತ್ತವೆ ಎಂದು ಹಿಂದಿನವರು ಹೇಳುತ್ತಿದ್ದರು. ಈಗ ಅದು ನಿಜವಾಗಿದೆ. ಒಟ್ಟಾರೆ ಮನುಷ್ಯರಂತೆ ಪ್ರಾಣಿಗಳು ಭಾನವೆ ಮತ್ತು ಸಂಬಂಧಗಳಿಗೆ ಬೆಲೆ ಕೊಡುತ್ತವೆ ಎನ್ನುವುದು ಟ್ರ್ಯಾಪ್ ಕ್ಯಾಮಾರ ಸೆರೆಯಾಗಿರುವ ದೃಶ್ಯಗಳು ಸಾಕ್ಷೀಕರಿಸುತ್ತವೆ.