ಬೆಳ್ತಂಗಡಿ: ಚಾರ್ಮಾಡಿ ಘಾಟಿಯ ಮೂಲಕ ಸಂಚರಿಸುವ ವಾಹನಗಳಿಗೆ ಕಳೆದೆರಡು ದಿನಗಳಿಂದ ಒಂಟಿಒ ಸಲಗ ಎದುರಾಗುತ್ತಿದ್ದು, ಪ್ರಯಾಣಿಕರಲ್ಲಿ ಭಯದ ವಾತಾವರಣಕ್ಕೆ ಕಾರಣವಾಗಿದೆ.
ಘಾಟಿಯ 4ನೇ ತಿರುವಿನ ಬಳಿ ಬುಧವಾರ ಸಂಜೆ 7ರ ವೇಳೆಗೆ ವಾಹನ ಸವಾರರಿಗೆ ಕಾಡಾನೆ ಕಂಡುಬಂದಿದೆ. ಮರುದಿನ ಗುರುವಾರ ಬೆಳಗ್ಗೆ 9 ಗಂಟೆ ಹೊತ್ತಿಗೆ 7ನೇ ತಿರುವಿನ ಬಳಿ ಎದುರಾಗಿದೆ.
ಒಂಟಿ ಸಲಗದ ಸಂಚಾರದ ಕುರಿತು ಚಾರ್ಮಾಡಿ ಅರಣ್ಯ ಇಲಾಖೆಯ ಚೆಕ್‌ಪೋಸ್ಟ್‌ಗೆ ವಾಹನ ಸವಾರರು ಮಾಹಿತಿ ನೀಡಿದ್ದು ಅಲ್ಲಿನ ಸಿಬಂದಿ ಘಾಟಿ ಪ್ರದೇಶಕ್ಕೆ ಹೋಗಿ ಪರಿಶೀಲಿಸಿದರು. ಆಗ ಆನೆ ಕಾಣಿಸದಿದ್ದರೂ ಅದು ಸಂಚರಿಸಿದ ಕುರುಹುಗಳು ಕಂಡುಬಂದಿವೆ.
ಚಾರ್ಮಾಡಿ ಘಾಟಿ ಪರಿಸರವು ಅರಣ್ಯ ಪ್ರದೇಶದಲ್ಲಿದ್ದು, ಇಲ್ಲಿ ಹಲವಾರು ವನ್ಯಜೀವಿಗಳು ವಾಸಿಸುತ್ತವೆ. ಸಾಮಾನ್ಯವಾಗಿ ರಾತ್ರಿ ವೇಳೆ ಸಂಚರಿಸುವವರಿಗೆ ಆಗಾಗ ಅವು ಕಾಣಿಸಿಗುತ್ತವೆ. ಇದೀಗ ಹಗಲಿನಲ್ಲೇ ಕಾಡಾನೆ ಕಂಡುಬಂದಿದೆ. ವಾಹನ ಸವಾರರು ಮುಂಜಾಗ್ರತೆಯಿಂದ ಘಾಟಿ ರಸ್ತೆಯಲ್ಲಿ ಸಂಚರಿಸಬೇಕು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಸೂಚಿಸಿದ್ದಾರೆ.
ಘಾಟಿ ಪರಿಸರದಲ್ಲಿ ಇತ್ತೀಚೆಗೆ ಕಾಳಿYಚ್ಚು ಕಂಡುಬಂದಿರುವ ನಡುವೆ ಬಿರು ಬೇಸಗೆಯ ಪರಿಣಾಮದಿಂದ ನೀರಿನ ಅಭಾದಿಂದಲೋ, ಆಹಾರ ಅರಸುತ್ತಲೋ ಕಾಡುಪ್ರಾಣಿಗಳು ರಸ್ತೆ ಅಂಚಿಗೆ ಬರುತ್ತಿವೆ.