Advertisement

ಬಂಡೀಪುರ ಅರಣ್ಯದಲ್ಲಿ ಆನೆಗಳ ಗಣತಿ

11:35 AM Sep 09, 2020 | Suhan S |

ಗುಂಡ್ಲುಪೇಟೆ: ಬಂಡೀಪುರ ರಾಷ್ಟ್ರೀಯ ಉದ್ಯಾನದ ಅರಣ್ಯ ಪ್ರದೇಶಗಳಲ್ಲಿ ಎರಡು ದಿನಗಳಿಂದ ಆನೆಗಳ ಗಣತಿ ಕಾರ್ಯ ನಡೆಸಲಾಯಿತು.

Advertisement

ಪ್ರತಿ ಮೂರು ವರ್ಷಕ್ಕೊಮ್ಮೆ ಆನೆಗಳ ಲದ್ದಿಯ ಆಧಾರದ ಮೇಲೆ ನಡೆಸುವ ಗಣತಿಯಲ್ಲಿ ಸ್ವಯಂ ಸೇವಕರನ್ನು ಬಳಸಿಕೊಳ್ಳದೇ ಕೇವಲ ಸಿಬ್ಬಂದಿಯ ಮೂಲಕ ನಡೆಸಲಾಗುತ್ತದೆ. ಈ ಮಾದರಿಯಲ್ಲಿ ಈ ಬಾರಿಯೂ ಸಹ ಬಂಡೀಪುರ ಹುಲಿ ಯೋಜನೆಯ ಎಲ್ಲಾ ವಲಯಗಳಲ್ಲಿಯೂ 4ರಿಂದ 6 ಕಿಲೋ ಮೀಟರ್‌ ಅಳತೆಗೆ ಸಿದ್ಧಪಡಿಸಿದ ಬ್ಲಾಕ್‌ನಲ್ಲಿ ತರಬೇತಿ ಪಡೆದ ಅರಣ್ಯ ಸಿಬ್ಬಂದ ಸೋಮವಾರ ಮತ್ತು ಮಂಗಳವಾರ ಬೆಳಗ್ಗೆ 7 ರಿಂದ ಮಧ್ಯಾಹ್ನ 2 ಗಂಟೆವರೆಗೆ ಗಣತಿ ಕಾರ್ಯ ನಿರ್ವಹಿಸಿದರು.

ಇತ್ತೀಚೆಗೆ ಮಳೆಬಿದ್ದು ಹಸಿರಿನಿಂದ ಕೂಡಿರುವ ಅರಣ್ಯದಲ್ಲಿ ಆನೆಗಳ ಗಣತಿ ಕಾರ್ಯ ಕಷ್ಟಕರವಾಗಿದ್ದರೂ ಸಹ ಸಿಬ್ಬಂದಿ ನಿರ್ದಿಷ್ಟಗೊಳಿಸಿದ ಬ್ಲಾಕ್‌ನಲ್ಲಿ ಸಾಗಿದರು ಮತ್ತು ಅಲ್ಲಿ ಆನೆಗಳ ಲದ್ದಿ ಹಾಗೂ ಗುಂಪು ಗುಂಪಾಗಿ ಕಾಣುವ ಕಾಡಾನೆಗಳ ಫೋಟೋ ತೆಗೆದು ಅವುಗಳನ್ನು ಎಣಿಕೆ ಮಾಡುವುದರೊಂದಿಗೆ ಆನೆಗಣತಿಯನ್ನು ದಾಖಲಿಸಿದರು.

ಕಳೆದ ಸಾಲಿನಲ್ಲಿ 3 ಸಾವಿರದಷ್ಟಿದ್ದ ಆನೆಗಳ ಸಂತತಿ ಈ ಬಾರಿ ಮತ್ತಷ್ಟು ಹೆಚ್ಚಾಗಿದ್ದು, ಬಂಡೀಪುರ ಅಭಯಾರಣ್ಯ ಕಳೆದ ಸಾಲಿನಂತೆಯೇ ಈ ಬಾರಿಯೂಮೊದಲಿನ ಸ್ಥಾನ ಉಳಿಸಿಕೊಳ್ಳಲಿದೆ ಎಂದು ಗೋಪಾಲಸ್ವಾಮಿ ಬೆಟ್ಟ ವಲಯಾರಣ್ಯಾಧಿಕಾರಿ ಎನ್‌.ಪಿ.ನವೀನ್‌ ಕುಮಾರ್‌ ವಿಶ್ವಾಸ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next