ತುಮಕೂರು : ತುಮಕೂರು ನಗರದ ಮಠವೊಂದರಲ್ಲಿ ಸಾಕಿರುವ ಆನೆಗೆ ಸ್ನಾನ ಮಾಡಿಸಲು ನೀರಿಲ್ಲದೆ ವಾಹನಗಳನ್ನು ಸರ್ವಿಸ್ ಮಾಡುವ ಸ್ಥಳದಲ್ಲಿ ಸ್ನಾನಮಾಡಿಸಲಾಗುತ್ತಿದೆ.
ಹೌದು ತುಮಕೂರಿನ ಕರಿಬಸವೇಶ್ವರ ಮಠದಲ್ಲಿ ಸಾಕಿರುವ ಲಕ್ಷ್ಮಿ ಹೆಸರಿನ ಆನೆಗೆ ಪ್ರತಿನಿತ್ಯ ಸ್ನಾನ ಮಾಡಿಸಲು ಮಠದಲ್ಲಿ ನೀರಿನ ಅಭಾವ ಎದುರಾಗಿದೆ. ಹೀಗಾಗಿ ಸಮೀಪದ ಗ್ಯಾರೇಜ್ ಗೆ ಕರೆದುಕೊಂಡು ಹೋಗಿ ಆನೆಗೆ ಸ್ನಾನ ಮಾಡಿಸಲಾಗುತ್ತದೆ.
ಸುಮಾರು 20 ವರ್ಷ ವಯಸ್ಸಿನ ಆನೆಯನ್ನು ಮಠದಲ್ಲಿ ಅನೇಕ ವರ್ಷಗಳಿಂದ ಸಾಕಲಾಗುತ್ತಿದೆ. ಇದರ ಲಾಲನೆ ಪೋಷಣೆಯನ್ನು ಕೂಡ ಮಾಡಲಾಗುತ್ತಿದ್ದು ಮಠದಲ್ಲಿ ನೀರಿನ ಅಭಾವ ಎದುರಾಗಿರುವುದರಿಂದ ವಿಧಿಯಿಲ್ಲದೆ ಆನೆಯನ್ನು ನೋಡಿಕೊಳ್ಳುವ ಕೆಲಸಗಾರರು ಗ್ಯಾರೇಜ್ ನಲ್ಲಿ ನಿತ್ಯ ಸ್ನಾನ ಮಾಡಿಸುತ್ತಾರೆ.
ಇದನ್ನೂ ಓದಿ : ಹರೆಯದ ಮನಸ್ಸುಗಳ ಚಿತ್ರ: “ಒಂದ್ ಊರಲ್ ಒಂದ್ ಲವ್ ಸ್ಟೋರಿ” ಜೂ.3ಕ್ಕೆ ಬಿಡುಗಡೆ