Advertisement

ಕಾಡಾನೆ ದಾಳಿ: ಮೃತನ ಕುಟುಂಬಕ್ಕೆ ನೌಕರಿ ನೀಡಿ

06:25 PM Aug 26, 2022 | Team Udayavani |

ಆಲೂರು: ಕಾಡಾನೆ ದಾಳಿಯಿಂದ ಮೃತಪಟ್ಟ ಕುಟುಂಬಸ್ಥರು ಮನೆಗೆ ಅಸರೆಯಾಗಿದ್ದ ಯಜಮಾನ ಮಕ್ಕಳನ್ನು ಕಳೆದುಕೊಂಡು ಬೀದಿಯಲ್ಲಿದ್ದಾರೆ. ಆದ್ದರಿಂದ ಸರ್ಕಾರ ಕುಟುಂಬದ ಸದಸ್ಯರಿಗೆ ಸರ್ಕಾರಿ ನೌಕರಿ ನೀಡಬೇಕು ಎನ್ನುವ ಕೂಗು ಕೇಳಿ ಬರುತ್ತಿದೆ.

Advertisement

ಸುಮಾರು ಮೂರ್ನಾಲ್ಕು ದಶಕಗಳಿಂದ ಆಲೂರು-ಸಕಲೇಶಪುರ ಹಾಗೂ ಬೇಲೂರು ತಾಲೂಕಿನಲ್ಲಿ ನೂರಾರು ಕೂಲಿ ಕಾರ್ಮಿಕರು ಹಾಗೂ ರೈತರು ಕಾಡಾನೆ ದಾಳಿಯಿಂದ ಪ್ರಾಣ ಕಳೆದುಕೊಂಡರೇ ಇನ್ನೂ ಹಲವರು ದಿವ್ಯಾಂಗರಾಗಿ ಬಳಲುತ್ತಿದ್ದಾರೆ. ದುಡಿಯುವ ಕೈಗಳನ್ನು ಕಳೆದುಕೊಂಡು ಬೀದಿಯಲ್ಲಿ ನಿಂತಿದ್ದಾರೆ. ಸರ್ಕಾರ ಇದನ್ನು ಮನಗಂಡು ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ನೌಕರಿ ನೀಡಬೇಕು ಎನ್ನುವುದು ಜನಸಾ ಮಾನ್ಯರ ಒತ್ತಾಯವಾಗಿದೆ.

ಬೆಳೆ ಪರಿಹಾರ ಕೊಡಿಸುವಲ್ಲಿ ವಿಫ‌ಲ: ಕಾಡಾನೆ ದಾಳಿಯಿಂದ ಮೃತಪಟ್ಟ ಕುಟುಂಬಸ್ಥರಿಗೆ ಸರ್ಕಾರಿ ನೌಕರಿ ಕೋಡಿಸುವ ಮಾತಿರಲಿ, ಆಲೂರು ಸಕಲೇಶಪುರ ಹಾಗೂ ಬೇಲೂರು ತಾಲೂಕಿನ ಕೆಲವು ಭಾಗಗಳಲ್ಲಿ ರೈತರು ಕಷ್ಟ ಪಟ್ಟು ಬೆಳೆದ ಕಾಫಿ, ಏಲಕ್ಕಿ, ಮೆಣಸು, ಭತ್ತದ ಬೆ ಳೆಗಳನ್ನು ಸಂಪೂರ್ಣವಾಗಿ ನಾಶಪಡಿಸಿವೆ. ಇದರಿಂದ ಕೋಟ್ಯಂತರ ರೂ.ಪರಿಹಾರ ಬರಬೇಕಾಗಿದೆ. ಅದರೆ ಸ್ಥಳೀಯ ಶಾಸಕರು ಸರ್ಕಾರದಿಂದ ಪರಿಹಾರ ಕೊಡಿಸುವಲ್ಲಿ ಸಂಪೂರ್ಣ
ವಿಫ‌ಲವಾಗಿದ್ದಾರೆ. ಕಾಡಾನೆ ದಾಳಿ ಆದಾಗ ಮೃತಪಟ್ಟವರಿಗೆ ಒಂದು ಹಾರ ಹಾಕಿ ಸಂತಾಪ ಸೂಚಸುವುದು ಹಾಗೂ ಭರವಸೆ ನೀಡುವುದಕ್ಕಷ್ಟೇ ಶಾಸಕರು ಸೀಮಿತರಾಗಿದ್ದಾರೆ.

ತಕ್ಕ ಪಾಠ ಕಲಿಸುತ್ತಾರೆ: ಕಾಡಾನೆ ಸಮಸ್ಯೆ ಬಗ್ಗೆ ವಿಧಾನಸೌಧದಲ್ಲಿ ಗಟ್ಟಿಯಾಗಿ ಮಾತನಾಡದ ಶಾಸಕ ಕುಮಾರಸ್ವಾಮಿ ಬೀದಿಯಲ್ಲಿ ಕೂತು ಪ್ರತಿಭಟನೆ ಮಾಡುವ ಮೂಲಕ ಮತ ನೀಡಿದ ಮತದಾರರನ್ನು ವಂಚಿಸುತ್ತಾ ನಾಟಕವಾಡುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಜನರು ಇವರಿಗೆ ಪಾಠ ಕಲಿಸುತ್ತಾರೆ ಎಂದು ಕಾಂಗ್ರೆಸ್‌ ಮುಖಂಡ ಡಿ.ಸಿ.ಸಣ್ಣಸ್ವಾಮಿ ಕಿಡಿಕಾರಿದರು.

ಕಾಡಾನೆ ಹಾವಳಿ ಶಾಶ್ವತ ಪರಿಹಾರ ಒದಗಿಸಿ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ಕ್ಷೇತ್ರ ಸಂಚಾಲಕ ಹಾಗೂ ವಕ್ತಾರ ಸುದರ್ಶನ್‌ ಮಾತನಾಡಿ, ಆಲೂರು -ಸಕಲೇಶಪುರ ಕ್ಷೇತ್ರದಲ್ಲಿ ಮೂರ್ನಾಲ್ಕು ದಶಕಗಳಿಂದ ಕಾಡಾನೆ ದಾಳಿಯಿಂದ ಅಪಾರ ಬೆಳೆ ಹಾನಿಯಾಗಿದೆ. ಜೊತೆಗೆ ನೂರಾರು ಜನ ಮೃತಪಟ್ಟಿದ್ದಾರೆ. ಸಾವನ್ನಪ್ಪಿದಾಗ ಮಾತ್ರ ಬಂದು ಹೋಗುವ ಜನನಾಯಕರು ನಮಗ್ಯಾಕೆ..? ಇದಕ್ಕೊಂದು ಶಾಶ್ವತ ಪರಿಹಾರ ಒದಗಿಸಬೇಕೆಂದು ಜನ ಸಾಮಾನ್ಯರು
ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಡಾನೆ ಹಾವಳಿಗೆ ಸರ್ಕಾರ ಕೂಡಲೇ ಶಾಶ್ವತ ಪರಿಹಾರ ಒದಗಿಸಬೇಕು. ಮೃತರ ಕುಟುಂಬಕ್ಕೆ ಮಾನವೀಯತೆ ಅಧಾರದಲ್ಲಿ ಸರ್ಕಾರಿ ನೌಕರಿ ನೀಡಬೇಕು ಎಂದು ಒತ್ತಾಯಿಸಿದರು.

Advertisement

ಕಾಡಾನೆ ಸೆರೆ ಕಾರ್ಯಾಚರಣೆ ನೆಪದಲ್ಲಿ ಹಣ ಲೂಟಿ
ಶಾಸಕ ಎಚ್‌.ಕೆ. ಕುಮಾರಸ್ವಾಮಿ ಶಾಶ್ವತ ಪರಿಹಾರಕ್ಕೆ ಮುಂದಾಗುತ್ತಿಲ್ಲ. ಕಾಡಾನೆ ಹಿಡಿಯುವ ನೆಪದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಕೋಟ್ಯಂತರ ರೂ. ಲೂಟಿ ಹೊಡೆಯುತ್ತಿದ್ದಾರೆ. ಆಲೂರು-ಸಕಲೇಶಪುರ ಕ್ಷೇತ್ರದಲ್ಲಿ ಕಾಡಾನೆ ಸಮಸ್ಯೆ  ಬಿಗಡಾಯಿಸಿದೆ. ಕಾಡಾನೆ ಸಮಸ್ಯೆ ಬಗ್ಗೆ ವಿಧಾನಸೌಧದಲ್ಲಿ ಗಟ್ಟಿಯಾಗಿ ಮಾತನಾಡದ ಶಾಸಕ ಕುಮಾರಸ್ವಾಮಿ, ಬೀದಿಯಲ್ಲಿ ಕೂತು ಪ್ರತಿಭಟನೆ ಮಾಡಿ ಮತದಾರರನ್ನು ವಂಚಿಸುತ್ತಿದ್ದಾರೆ. ಮುಂದಿನ ಚುನಾವಣೆ ಯಲ್ಲಿ ಜನರು ಇವರಿಗೆ ಪಾಠ ಕಲಿಸುತ್ತಾರೆ ಎಂದು ಕಾಂಗ್ರೆಸ್‌ ಹಿರಿಯ ಮುಖಂಡ ಡಿ.ಸಿ.ಸಣ್ಣಸ್ವಾಮಿ ಕಿಡಿಕಾರಿದರು.

ಅನುಕಂಪದ ಆಧಾರದಲ್ಲಿ ಸರ್ಕಾರಿ ನೌಕರಿಗೆ ಒತ್ತಾಯ
ರಾಧಮ್ಮ ಜನಸ್ಪಂಧನ ಮುಖ್ಯಸ್ಥ ಹೇಮಂತ್‌ ಕುಮಾರ್‌ ಮಾತನಾಡಿ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇಚ್ಛಾಶಕ್ತಿ ಕೊರತೆ, ನಿರ್ಲಕ್ಷ್ಯ  ಮನೋಭಾವದಿಂದ ಆಲೂರು- ಸಕಲೇಶಪುರ ಹಾಗೂ ಬೇಲೂರು ತಾಲೂಕಿನಲ್ಲಿ ಕಾಡಾನೆ ದಾಳಿಗೆ ನೂರಾರು ಮಂದಿ ಬಲಿ ಆಗಿ ದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಮೃತಪಟ್ಟರೆ ಕುಟುಂಬದ ಸದಸ್ಯರಿಗೆ ಉದ್ಯೋಗ ನೀಡುತ್ತದೆ. ಅದರೆ ಕಾಡಾನೆ ದಾಳಿಯಿಂದ ಮೃತಪಟ್ಟ ರೈತ ಮೃತ ಪ ಟ್ಟರೇ ಕೇವಲ ಐದು ಲಕ್ಷ ಪರಿಹಾರ ನೀಡಿ ಕೈ ತೊಳೆದುಕೊಳ್ಳುತ್ತಿದೆ. ಹಾಗಾ ಗಿ ಅರಣ್ಯ ಇಲಾಖೆಯಲ್ಲಿ ಸರ್ಕಾರಿ ಉದ್ಯೋಗ ನೀಡಬೇಕು. ಆಗ ಮಾತ್ರ ನ್ಯಾಯ ನೀಡದಂತಾಗುತ್ತದೆ. ಮುಖ್ಯಮಂತ್ರಿಗಳು ಅನುಕಂಪದ ಅಧಾರದಲ್ಲಿ ಕಾಡಾನೆಯಿಂದ ಮೃತಪಟ್ಟ ಕುಟುಂಬ ಸ್ಥರಿಗೆ ಸರ್ಕಾರಿ ನೌಕರಿ ನೀಡಬೇಕು . ಈ ಬಗ್ಗೆ ಮುಂದಿನ ವಾರ ಮುಖ್ಯಮಂತ್ರಿಗಳನ್ನು ಬೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದರು.

●ಟಿ.ಕೆ.ಕುಮಾರಸ್ವಾಮಿ ಟಿ.ತಿಮ್ಮನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next