ಹುಣಸೂರುಡಿ: ನಾಗರಹೊಳೆ ಉದ್ಯಾನವನದಲ್ಲಿ ಸಲಗದ ದಾಳಿಗೆ ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬರು ಬಲಿಯಾದ ಘಟನೆ ಗುರುವಾರ ಸಂಭವಿಸಿದೆ.
ಅರಣ್ಯ ಇಲಾಖಾ ಸಿಬ್ಬಂದಿ ಗುರುರಾಜ್( 53 ) ಆನೆ ದಾಳಿಗೆ ಸಿಲುಕಿ ಮೃತಪಟ್ಟವರು,
ಗುರುರಾಜ್ ಅವರನ್ನು ಎರಡು ರ್ವಗಳ ಹಿಂದೆ ಅಲ್ಲಿಂದ ಬೀಟ್ ಕಾಯಲು ನೇಮಿಸಲಾಗಿತ್ತು.
ಗುರುವಾರ ಎಂದಿನಂತೆ ಗುರುರಾಜ್, ಚಂದ್ರು ಹಾಗೂ ಅಶೋಕ್ ಬೀಟ್ ನಡೆಸುತ್ತಿದ್ದ ವೇಳೆ ಹಠಾತ್ ಆಗಿ ಸಲಗ ದಾಳಿ ನಡೆಸಿದೆ. ಈ ವೇಳೆ ಗುರುರಾಜ್ ಸಲಗದ ದಾಳಿಗೆ ಸಿಲುಕಿ ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದಾರೆ, ಇವರ ಜೊತೆಗಿದ್ದ ಚಂದ್ರು. ಅಶೋಕ್ ಸಲಗದ ದಾಳಿಯಿಂದ ಬಚಾವಾಗಿ ಓಡಿ ಪ್ರಣ ಉಳಿಸಿಕೊಂಡಿದ್ದಾರೆ.
ಇದನ್ನೂ ಓದಿ:ಮೂರೂವರೆ ತಿಂಗಳ ಹಿಂದೆ ಹತ್ಯೆಮಾಡಿ ಹೂತಿದ್ದ ಅರ್ಚಕ ನೀಲಕಂಠ ದೀಕ್ಷಿತ್ ಮೃತದೇಹ ಹೊರಕ್ಕೆ
ವಿಷಯ ತಿಳಿದ ಇತರ ಸಿಬ್ಬಂದಿಗಳು ಕೊಡಗಿನ ಕುಟ್ಟ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆಂದು ನಾಗರಹೊಳೆ ಹುಲಿಯೋಜನೆ ನಿರ್ಧೆಶಕ ಡಿ.ಮಹೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.
ಮೃತ ಗುರುರಾಜ್ ಹೊಟ್ಟೆ ಬಾಗಕ್ಕೆ ಆನೆ ತಿವಿದಿದ್ದರಿಂದ ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದಾರೆ. ಮರಣೋತ್ತರ ಪರೀಕ್ಷೆ ನಂತರ ಸ್ವಂತ ಊರರಾದ ಮಂಡ್ಯ ಜಿಲ್ಲೆಗೆ ಮೃತದೇಹವನ್ನು ಕಳುಹಿಸಿಕೊಡಲಾಗಿತ್ತೆಂದು ಎಸಿಎಫ್ ಗೋಪಾಲ್ ತಿಳಿಸಿದ್ದಾರೆ.
ಗುರುರಾಜ್ ಅವರು ಹೆಂಡತಿ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.