Advertisement

Kasaragod ಸಹಿತ 3 ಜಿಲ್ಲೆಗಳ ವಿದ್ಯುತ್‌ ಸಮಸ್ಯೆ; 1,023 ಕೋಟಿ ರೂ. ವಿಶೇಷ ಪ್ಯಾಕೇಜ್‌

11:28 PM May 28, 2024 | Team Udayavani |

ಕಾಸರಗೋಡು: ಪದೇಪದೆ ವಿದ್ಯುತ್‌ ಪೂರೈಕೆ ಮೊಟಕುಗೊಳ್ಳುತ್ತಿರುವುದು ಹಾಗೂ ವಿದ್ಯುತ್‌ ಸಾಮಗ್ರಿಗಳ ಸಮಸ್ಯೆಗಳನ್ನು ಎದುರಿಸುತ್ತಿರುವ ಕಾಸರಗೋಡು, ಮಲಪ್ಪುರಂ ಮತ್ತು ಇಡುಕ್ಕಿ ಜಿಲ್ಲೆಗಳಿಗೆ ಒಟ್ಟು 1,023.04 ಕೋಟಿ ರೂ. ವಿಶೇಷ ಪ್ಯಾಕೇಜ್‌ ಜಾರಿಗೊಳಿಸಲು ರಾಜ್ಯ ವಿದ್ಯುನ್ಮಂಡಳಿ ತೀರ್ಮಾನಿಸಿದೆ.

Advertisement

ಇದರಂತೆ ಕಾಸರಗೋಡು ಜಿಲ್ಲೆಗೆ 394.15 ಕೋಟಿ ರೂ., ಮಲಪ್ಪುರಂಗೆ 410.93 ಕೋಟಿ ರೂ. ಮತ್ತು ಇಡುಕ್ಕಿ ಜಿಲ್ಲೆಗೆ 217.96 ಕೋಟಿ ರೂ. ಬಿಡುಗಡೆ ಮಾಡಿದೆ. ಇದರಡಿ 11 ಕೆ.ವಿ. ವಿದ್ಯುತ್‌ ಲೈನ್‌ ಅಳವಡಿಕೆ, ಸಬ್‌ ಸ್ಟೇಷನ್‌ಗಳ ನಿರ್ಮಾಣ, ಹೆಚ್ಚು ಸಾಮರ್ಥ್ಯದ ಟ್ರಾನ್ಸ್‌ಫಾರ್ಮರ್‌ಗಳನ್ನು ಸ್ಥಾಪಿಸುವುದು ಮೊದಲಾದ ಹಲವು ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಲಾಗುವುದು.

ವಿದ್ಯುತ್‌ ಲೈನ್‌, ಟ್ರಾನ್ಸ್‌ಫಾರ್ಮರ್‌ಗಳಲ್ಲಿ ಅಧಿಕ ವಿದ್ಯುತ್‌ ಲೋಡ್‌ ಮತ್ತು ಭೌಗೋಳಿಕ ಸಮಸ್ಯೆ ಇತ್ಯಾದಿಗಳನ್ನು ಪರಿಶೀಲಿಸಿ ಈ ಪ್ಯಾಕೇಜ್‌ಗೆ ರೂಪಿಸಲಾಗಿದೆ. ಇದು ವಿದ್ಯುತ್‌ ಇಲಾಖೆ ರೂಪು ನೀಡಿರುವ ವಿಶೇಷ ಯೋಜನೆಯಾಗಿರುವುದರಿಂದಾಗಿ ಅದಕ್ಕಾಗಿ ವಿದ್ಯುನ್ಮಂಡಳಿಯ ನಿಧಿಯಿಂದ ಅಥವಾ ಸಾಲದ ಮೂಲಕ ಅಗತ್ಯದ ಮೊತ್ತ ಕಂಡುಕೊಳ್ಳಲಾಗುವುದು.

ಆದರೆ ಪ್ರಸ್ತುತ ಯೋಜನೆ ಕೇಂದ್ರ ಇಂಧನ ಸಚಿವಾಲಯದ ಆಶ್ರಯದಲ್ಲಿರುವ ಆರ್‌ಡಿಎಸ್‌ಎಸ್‌ ಯೋಜನೆಗೆ ಒಳಪಟ್ಟಿಲ್ಲ. ಆದ್ದರಿಂದ ರೂರಲ್‌ ಎಲೆಕ್ಟ್ರಿಫಿಕೇಶನ್‌ ಕಾರ್ಪೊರೇಶನ್‌ ಲಿಮಿಟೆಡ್‌ (ಗ್ರಾಮೀಣ ವಿದ್ಯುದೀಕರಣ ನಿಗಮ ನಿಯಮಿತ) ಸೇರಿದಂತೆ ಇಂಧನ ವಲಯದಲ್ಲಿ ಕಾರ್ಯವೆಸಗುತ್ತಿರುವ ಕೇಂದ್ರ ಸಂಸ್ಥೆಗಳಿಂದ ಈ ಯೋಜನೆಗಾಗಿ ಸಾಲ ಪಡೆಯಬೇಕಾಗಿ ಬರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next