Advertisement

ವಿದ್ಯುತ್‌ ಬಿಲ್‌ ಹೆಚ್ಚಳ ಉದ್ದಿಮೆಗಳ ಮೇಲಿನ ಗದಾ ಪ್ರಹಾರ: B.Y ವಿಜಯೇಂದ್ರ

09:50 PM Jun 19, 2023 | Team Udayavani |

ಶಿವಮೊಗ್ಗ: ವಿದ್ಯುತ್‌ ಬಿಲ್‌ ಹೆಚ್ಚಳದಿಂದ ರಾಜ್ಯದಲ್ಲಿರುವ ಕೈಗಾರಿಕೆಗಳು ಮತ್ತು ಉದ್ಯಮಗಳು ನಷ್ಟಕ್ಕೆ ಒಳಗಾಗುತ್ತಿವೆ. ಕೋವಿಡ್‌ನಿಂದ ಈ ಹಿಂದೆ ಹೊಡೆತ ತಿಂದಿರುವ ಉದ್ಯಮಗಳು ಈಗಷ್ಟೇ ಚೇತರಿಸಿಕೊಳ್ಳುತ್ತಿವೆ. ಈ ಹೊತ್ತಿನಲ್ಲಿ ವಿದ್ಯುತ್‌ ಬಿಲ್‌ ಹೆಚ್ಚಿಸಿರುವುದರಿಂದ ರಾಜ್ಯ ಸರಕಾರ ಉದ್ಯಮಗಳ ಮೇಲೆ ಗದಾಪ್ರಹಾರ ಮಾಡಿದಂತಾಗಿದೆ ಎಂದು ಶಾಸಕ ಬಿ. ವೈ. ವಿಜಯೇಂದ್ರ ತಿಳಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 22ರಂದು ಉದ್ದಿಮೆದಾರರು ರಾಜ್ಯಾದ್ಯಂತ ಬೀದಿಗಿಳಿದು ಪ್ರತಿಭಟನೆ ಮಾಡಲಿದ್ದಾರೆ ಎಂದರು.

ವೈರಾಗ್ಯದ ಮಾತು
ಡಿ.ಕೆ.ಸುರೇಶ್‌ ವೈರಾಗ್ಯದ ಮಾತಾಡಿದ್ದು, ನಾವು ಅವರ ನೋವನ್ನು ಅರ್ಥ ಮಾಡಿಕೊಳ್ಳಬೇಕು. ಡಿ.ಕೆ. ಶಿವಕುಮಾರ್‌ ಎರಡು- ಮೂರು ವರ್ಷಗಳಿಂದ ಕಾಂಗ್ರೆಸ್‌ ರಾಜ್ಯಾಧ್ಯಕ್ಷರಾಗಿದ್ದರು. ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲು ಶ್ರಮಿಸಿದ್ದಾರೆ. ಕಾಂಗ್ರೆಸ್ಸನ್ನು ಅಧಿ ಕಾರಕ್ಕೆ ತಂದು ಮುಖ್ಯಮಂತ್ರಿ ಆಗಬೇಕೆಂದು ಆಸೆ ಇಟ್ಟುಕೊಂಡಿದ್ದರು. ಆ ಸ್ಥಾನದಲ್ಲಿ ಸಿದ್ದರಾಮಯ್ಯ ಕುಳಿತಿದ್ದಾರೆ ಎಂಬ ನೋವು ಅವರಿಗಿದೆ. ಜತೆಗೆ ಯಾವ ಶಾಸಕರೂ ಡಿ.ಕೆ. ಶಿವಕುಮಾರ್‌ ಪರವಾಗಿ ಮಾತನಾಡುತ್ತಿಲ್ಲ ಎಂಬ ನೋವು ಕೂಡ ಇದೆ ಎಂದರು.

ಕಾಂಗ್ರೆಸ್‌ ಭರವಸೆ ಈಡೇರಿಕೆ ಮೋದಿ ಕೆಲಸವಲ್ಲ
ಕಾಂಗ್ರೆಸ್‌ ನೀಡಿರುವ ಭರವಸೆಗಳನ್ನು ಈಡೇರಿಸುವುದು ಮೋದಿ ಸರಕಾರದ ಕೆಲಸವಲ್ಲ. ನೀವು ನೀಡಿರುವ ಭರವಸೆಗಳನ್ನು ಈಡೇರಿಸುವುದು ನಿಮ್ಮ ಕರ್ತವ್ಯ. ನರೇಂದ್ರ ಮೋದಿ ವಿರುದ್ಧ ಹೋರಾಟ ಮಾಡುತ್ತೇವೆ ಎನ್ನುವುದು ತಮಾಷೆಯ ಸಂಗತಿ. ಇದು ರಾಜ್ಯದ ಜನರನ್ನು ತಪ್ಪು ದಾರಿಗೆಳೆಯುತ್ತದೆ ಎಂದರು.

ಮಳೆಯಿಲ್ಲದೆ ರೈತರು ಸಂಕಷ್ಟಕ್ಕೆ ಒಳಗಾಗಿದ್ದು, ಸರಕಾರ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು. ಮಳೆಯ ಮುನ್ಸೂಚನೆ ಇಲ್ಲ. ಬಿತ್ತನೆಯಾಗಿಲ್ಲ. ಸರಕಾರ ರೈತರ ನೆರವಿಗೆ ಧಾವಿಸುವುದನ್ನು ಬಿಟ್ಟು ಗ್ಯಾರಂಟಿ ವಿಷಯದಲ್ಲಿ ಮುಳುಗಿ ಹೋಗಿದೆ. ಕುಡಿಯುವ ನೀರಿನ ಸಮಸ್ಯೆ ಕೂಡ ಇದೆ.
– ಬಿ.ವೈ. ವಿಜಯೇಂದ್ರ, ಶಾಸಕ

Advertisement
Advertisement

Udayavani is now on Telegram. Click here to join our channel and stay updated with the latest news.

Next