Advertisement

ವಿದ್ಯುತ್‌ ಬಿಲ್‌: ಮುಂದಿನ ವರ್ಷ ಎಂಬಿಇಡಿ ಜಾರಿ?

12:35 AM Jun 05, 2021 | Team Udayavani |

ಹೊಸದಿಲ್ಲಿ: ವಿದ್ಯುತ್‌ ಬಳಕೆದಾರರಿಗೆ ಬಿಲ್‌ ಹೊರೆಯನ್ನು ತಗ್ಗಿಸುವುದಕ್ಕಾಗಿ ಕೇಂದ್ರ ಸರಕಾರವು ಮುಂದಿನ ವರ್ಷದ ಎಪ್ರಿಲ್‌ 1ರಿಂದ ವಿದ್ಯುತ್ತಿನ ಮಾರು ಕಟ್ಟೆ ಆಧಾರಿತ ಮಿತ ವ್ಯಯಿ ಬಟವಾಡೆ (ಎಂಬಿಇಡಿ) ಯೋಜನೆಯನ್ನು ಜಾರಿ ಗೊಳಿಸಲು ಉದ್ದೇಶಿಸಿದೆ.

Advertisement

ವಾರ್ಷಿಕ 12 ಸಾವಿರ ಕೋ.ರೂ.ಗಳ ಉಳಿತಾಯ ತರಲಿರುವ ಈ ಕಾರ್ಯತಂತ್ರ ಜಾರಿಗಾಗಿ ಕೇಂದ್ರ ಇಂಧನ ಸಚಿವಾಲಯವು “ಒಂದು ರಾಷ್ಟ್ರ, ಒಂದು ಗ್ರಿಡ್‌, ಒಂದು ತರಂಗಾಂತರ, ಒಂದು ದರ’ ಎಂಬ ಯೋಜನಾ ವರದಿಯನ್ನು ಸಿದ್ಧಪಡಿಸಿದೆ.

ಈ ಯೋಜನೆಯಿಂದ ವಿದ್ಯುತ್‌ ಉತ್ಪಾದಕರು, ವಿತರಕ ಸಂಸ್ಥೆಗಳು ಮತ್ತು ಬಳಕೆದಾರರು – ಮೂರೂ ಪಕ್ಷಗಳಿಗೆ ಪ್ರಯೋಜನ ದೊರಕಲಿದೆ.

Advertisement

Udayavani is now on Telegram. Click here to join our channel and stay updated with the latest news.

Next