Advertisement
ರಾಜ್ಯ ಸರ್ಕಾರ ಕಬ್ಬು ಅರೆಯಲು ಒಂದೇ ಕಂತಿನಲ್ಲಿ 50 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿತ್ತು. ಇದರಿಂದ ಜೂನ್‌ನಲ್ಲಿ ಬಾಯ್ಲರ್‌ಗೆ ಬೆಂಕಿ ಹಾಗೂ ಜು.6ರಂದು ಕಬ್ಬು ಅರೆಯುವಿಕೆಗೆ ಚಾಲನೆ ನೀಡಲಾಗಿತ್ತು. ಆದರೆ, ವಾರದೊಳಗೆ ಕಾರ್ಖಾನೆಯ ಯಂತ್ರದಲ್ಲಿ ದೋಷ ಹಾಗೂ ವಿದ್ಯುತ್ ಕಡಿತಗೊಂಡಿದ್ದರಿಂದ ಕಬ್ಬು ಅರೆಯುವಿಕೆ ಯನ್ನು ಭಾನುವಾರ ಸಂಜೆವರೆಗೂ ಸ್ಥಗಿತಗೊಳಿಸಲಾಗಿತ್ತು.
Related Articles
Advertisement
ಅಧಿಕಾರಿಗಳೇ ಇಲ್ಲ : ಶನಿವಾರ ರಾತ್ರಿ ತಾಂತ್ರಿಕ ಕಾರಣದಿಂದ ಕಾರ್ಖಾನೆ ಸ್ಥಗಿತಗೊಂಡಿದೆ. ಆದರೆ, ಅದನ್ನು ಸರಿಪಡಿಸುವ ಹಿನ್ನೆಲೆಯಲ್ಲಿ ತಾಂತ್ರಿಕ ತಂತ್ರಜ್ಞರ ಕೊರತೆಯಿಂದ ಭಾನುವಾರ ಮಧ್ಯಾಹ್ನದವರೆಗೂ ಕಾರ್ಖಾನೆ ಸ್ಥಗಿತಗೊಂಡಿತ್ತು. ನಂತರ ಕೆಲವು ಗಂಟೆಗಳು ಚಾಲನೆಗೊಂಡ ಕಾರ್ಖಾನೆ ಮತ್ತೆ ಸ್ಥಗಿತಗೊಂಡಿದೆ. ಕಾರ್ಖಾನೆಯಲ್ಲಿ ಈ ರೀತಿಯ ಬೆಳವಣಿಗೆಗಳು ಆಗುತ್ತಿದ್ದರೂ ಯಾವ ಅಧಿಕಾರಿಗಳು ಕಾರ್ಖಾನೆಯಲ್ಲಿಲ್ಲ. ವ್ಯವಸ್ಥಾಪಕ ನಿರ್ದೇಶಕರು, ಪ್ರಧಾನ ವ್ಯವಸ್ಥಾಪಕರು, ತಂತ್ರಜ್ಞರು ಸೇರಿದಂತೆ ಇತರೆ ವಿಭಾಗದ ಅಧಿಕಾರಿಗಳು ರಜೆಯಲ್ಲಿದ್ದರು.
ಕಳೆದ ವರ್ಷವೂ ಇದೇ ಪರಿಸ್ಥಿತಿ : ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲೂ ಇದೇ ಪರಿಸ್ಥಿತಿ ಇತ್ತು. ಈಗ ಮತ್ತೆ ಅದೇ ಮರು ಕಳುಹಿಸಿದೆ. ಕಳೆದ ವರ್ಷವೇ ಕಾರ್ಖಾನೆ ದುರಸ್ತಿ ಮಾಡಿದ್ದರು. ಅಲ್ಲದೆ, ಈ ವರ್ಷವೂ ದುರಸ್ತಿ ಕಾರ್ಯ ನಡೆದಿತ್ತು. ಅದಕ್ಕಾಗಿ ಕೋಟ್ಯಂತರ ರೂ. ಖರ್ಚು ಮಾಡಲಾಗಿದೆ. ಆದರೂ, ಸಮಸ್ಯೆ ತಲೆದೋರುತ್ತಿದೆ. ಇದರಿಂದ ಮತ್ತೆ ರೈತರಿಗೆ ಸಂಕಷ್ಟಕ್ಕೆ ಸಿಲುಕುವ ಆತಂಕ ಎದುರಾಗಿದೆ.
ಬೇರೆ ಕಾರ್ಖಾನೆಗಳಿಗೆ ಕಬ್ಬು ಸರಬರಾಜು : ಮೈಷುಗರ್ ಕಾರ್ಖಾನೆ ಆಗಾಗ್ಗೆ ವಿದ್ಯುತ್ ಹಾಗೂ ತಾಂತ್ರಿಕ ಕಾರಣಗಳಿಂದ ಸ್ಥಗಿತಗೊಳಿಸುತ್ತಿದ್ದರೆ, ರೈತರು ಬೇರೆ ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಲು ಮುಂದಾಗುತ್ತಾರೆ. ಈಗಾಗಲೇ ಮೈಷುಗರ್ ವ್ಯಾಪ್ತಿಯ ಸಾಕಷ್ಟು ಕಬ್ಬನ್ನು ಖಾಸಗಿ ಕಾರ್ಖಾನೆಗಳಿಗೆ ಸಾಗಾಣಿಕೆ ಮಾಡಲಾಗಿದೆ. ಇದು ಹೀಗೆ ಮುಂದುವರೆದರೆ ಕಬ್ಬು ಸಿಗದಂಥ ಪರಿಸ್ಥಿತಿ ನಿರ್ಮಾಣವಾಗಲಿದೆ. ಕಳೆದ ರಾತ್ರಿಯಿಂದಲೂ ಯಾರ್ಡ್‌ನಲ್ಲೇ ಸುಮಾರು 5 ಸಾವಿರ ಟನ್ ಕಬ್ಬಿದ್ದರೆ, ಕಬ್ಬಿನ ಗದ್ದೆಗಳಲ್ಲಿ ಕಟಾವು ಮಾಡಿರುವ ಸುಮಾರು 8 ಸಾವಿರಕ್ಕೂ ಹೆಚ್ಚು ಟನ್ ಕಬ್ಬು ಇದೆ. ಬೆಳೆದು ನಿಂತಿರುವ ಕಬ್ಬನ್ನು ಸರಿಯಾದ ಸಮಯಕ್ಕೆ ಕಟಾವು ಮಾಡದಿದ್ದರೆ ಇಳುವರಿ ಕಡಿಮೆಯಾಗಲಿದೆ ಎಂಬ ಆತಂಕದಲ್ಲಿ ಇರುವ ಕಬ್ಬನ್ನು ಬೇರೆ ಕಾರ್ಖಾನೆಗಳಿಗೆ ರೈತರು ಸರಬರಾಜು ಮಾಡುತ್ತಾರೆ. ಮೈಷುಗರ್‌ಗೆ ಮುಂದಿನ ದಿನಗಳಲ್ಲಿ ಕಬ್ಬಿನ ಕೊರತೆ ಎದುರಾಗಲಿದೆ ಎಂದು ಕಬ್ಬು ತುಂಬಿಕೊಂಡು ಬಂದಿದ್ದ ಕಾರ್ಮಿಕರು, ರೈತರು ಹೇಳಿದ್ದಾರೆ.
ಬಾಕಿ ಬಿಲ್ ಕಟ್ಟದೆ ವಿದ್ಯುತ್ ಸಮಸ್ಯೆ?: ಮೈಷುಗರ್ ಕಾರ್ಖಾನೆಯು ಸೆಸ್ಕಾಂಗೆ ಸುಮಾರು 41 ಕೋಟಿ ರೂ. ಹೆಚ್ಚು ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದೆ. ಶನಿವಾರ ರಾತ್ರಿ ಕಾರ್ಖಾನೆ ಸ್ಥಗಿತಗೊಳ್ಳಲು ವಿದ್ಯುತ್ ಕಾರಣವಾಗಿದೆ ಎನ್ನಲಾಗುತ್ತಿದೆ. ಶನಿವಾರ ರಾತ್ರಿ 12 ಗಂಟೆಗೆ ವಿದ್ಯುತ್ ಕಡಿತಗೊಂಡಿದೆ. ಇದರಿಂದ ಕಾರ್ಖಾನೆ ಕಬ್ಬು ಅರೆಯುವಿಕೆ ನಿಲ್ಲಿಸಿದೆ. ಭಾನುವಾರ ಬೆಳಗ್ಗೆ 9 ಗಂಟೆಗೆ ವಿದ್ಯುತ್ ಬಂದರೂ ಸಂಜೆವರೆಗೂ ಕಾರ್ಖಾನೆ ಚಾಲನೆ ಮಾಡಿರಲಿಲ್ಲ ಎಂದು ಕಬ್ಬು ತುಂಬಿಕೊಂಡು ಬಂದಿದ್ದ ರೈತರು ಆರೋಪಿಸಿದ್ದಾರೆ.