Advertisement

ಪಡುಬಿದ್ರಿ : ಕೆಲಸ ಮಾಡುವ ವೇಳೆ ವಿದ್ಯುತ್ ಶಾಕ್ ; ಓರ್ವ ಕಾರ್ಮಿಕ ಸಾವು, ಇನ್ನೋರ್ವನಿಗೆ ಗಾಯ

04:35 PM Mar 23, 2022 | Team Udayavani |

ಪಡುಬಿದ್ರಿ : ಅಂಗಡಿಯಲ್ಲಿ ಕೆಲಸಮಾಡುತ್ತಿದ್ದ ವೇಳೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ನಡೆದ ದುರಂತದಲ್ಲಿ ಓರ್ವ ಸವನ್ನಪ್ಪಿ ಇನ್ನೋರ್ವ ಗಾಯಗೊಂಡ ಘಟನೆ ಬುಧವಾರ  ಪಡುಬಿದ್ರಿಯಲ್ಲಿ ನಡೆದಿದೆ.

Advertisement

ಕಂಚಿನಡ್ಕ ನಿವಾಸಿ ಬಶೀರ್ (೪೫) ಸಾವನ್ನಪ್ಪಿದ ದುರ್ದೈವಿ,

ಪಡುಬಿದ್ರಿಯಲ್ಲಿರುವ ಗಿರಿ ಚಿಕನ್ ಸ್ಟಾಲ್ ನಲ್ಲಿ ಘಟನೆ ನಡೆದಿದ್ದು, ಮಧ್ಯಾಹ್ನ 2;30ರ ವೇಳೆಗೆ ಬಶೀರ್ ಅಂಗಡಿಯಲ್ಲಿ ಕೋಳಿ ಸ್ವಚ್ಛಗೊಳಿಸಲು ಕೋಳಿಯನ್ನು ಮೆಷಿನ್ ಒಳಗೆ ಹಾಕುವ ಸಂದರ್ಭ ವಿದ್ಯುತ್ ಆಘಾತಗೊಂಡಿದೆ, ಈ ವೇಳೆ ಕಾರ್ಮಿಕ ಬಶೀರ್ ಸಾವನ್ನಪ್ಪಿದ್ದಾನೆ. ಈ ವೇಳೆ ಗಾಯಗೊಂಡ ಇನ್ನೋರ್ವನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಶೀರ್ ಪತ್ನಿ,‌ ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಘಟನೆ ಕುರಿತು ಪಡುಬದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಸ್ಥಳಕ್ಕೆ ಭೇಟಿಯಿತ್ತಿದ್ದಾರೆ.

Advertisement

ಇದನ್ನೂ ಓದಿ : ವಿಜಯಪುರ: ಕ್ಷುಲ್ಲಕ ಕಾರಣಕ್ಕೆ ಬಾಲಕನನ್ನು ಬೆತ್ತಲು ಮಾಡಿ ಥಳಿತ: ವಿಡಿಯೋ ವೈರಲ್

Advertisement

Udayavani is now on Telegram. Click here to join our channel and stay updated with the latest news.

Next