ಮೈಸೂರು: ನಗರದ ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜು ಎಲೆಕ್ಟ್ರಿಕ್ ವಿಭಾಗದ ವಿದ್ಯಾರ್ಥಿಗಳ ತಂಡ ಕಡಿಮೆ ವೆಚ್ಚದಲ್ಲಿ ಪರಿಸರ ಸ್ನೇಹಿ ಎಲೆಕ್ಟ್ರಿಕ್‌ಕಾರನ್ನು ತಯಾರಿಸಿದ್ದಾರೆ.
ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಸೈಮಾಝಲ್ಫಾ, ಎಂ.ಎನ್.ವಿ. ಶ್ವೇತಾ ಹಾಗೂ ಜೆ. ನಂದಿತಾ ತಮ್ಮ ಪದವಿ ಅಂತಿಮ ವರ್ಷದ ಪ್ರಾಜೆಕ್ಟ್ ಗಾಗಿ ಎಲೆಕ್ಟ್ರಿಕ್ ವಿಭಾಗದ ಪ್ರಾಧ್ಯಾಪಕ ಡಾ. ಗೋಪಾಲರೆಡ್ಡಿ, ಎಚ್.ಕೆ.ಪೂಜಾ ಹಾಗೂ ಡಾ. ಶೋಭಾ ಶಂಕರ್‌ಮಾರ್ಗದರ್ಶನಲ್ಲಿ 60 ಸಾವಿರ ರೂ. ವೆಚ್ಚದಲ್ಲಿ ಪರಿಸರ ಸ್ನೇಹಿಯಾದ ಎಲೆಕ್ಟ್ರಿಕ್‌ಕಾರನ್ನು ತಯಾರಿಸಿದ್ದಾರೆ.
ತೈಲಕ್ಕೆ ಪರ್ಯಾಯ ವಾಹನವಾದ ಎಲೆಕ್ಟ್ರಿಕ್ ಕಾರು ಬಳಕೆಯತ್ತ ಜನರು ಮುಂದಾಗುತ್ತಿದ್ದಾರೆ. ಈ ಹೊತ್ತಿನಲ್ಲಿ ವಿದ್ಯಾರ್ಥಿಗಳು ಆವಿಷ್ಕರಿ ಸಿರುವ ಈ ಕಾರು ಹೆಚ್ಚು ಮಹತ್ವ ಪಡೆದುಕೊಂಡಿದೆ. ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ. ಸದಾಶಿವೇಗೌಡ ಹಾಗೂ ಡೀನ್ ಡಾ.ಜಿ.ಬಿ. ಕೃಷ್ಣಪ್ಪ ಮೆಚ್ಚುಗೆ ವ್ಯಕ್ತಪಡಿಸಿ, ಪೇಟೆಂಟ್‌ಗೆ ಅರ್ಜಿ ಸಲ್ಲಿಸುವಂತೆ ಸೂಚಿಸಿದ್ದಾರೆ.
ಕಾರಿನ ವಿಶೇಷ: 130 ಕೆ.ಜಿ. ತೂಕ ಇರುವ ಈ ಎಲೆಕ್ಟ್ರಿಕ್ ಕಾರಿನ ಬ್ಯಾಟರಿಗಳನ್ನು ಚಾರ್ಜರ್ ಸಾಕೆಟ್ ಮೂಲಕ 4 ಗಂಟೆಗಳ ಅವಧಿಯಲ್ಲಿ ಚಾರ್ಜ್ ಮಾಡಬಹುದಾಗಿದ್ದು, ಒಮ್ಮೆ ಚಾರ್ಜ್ ಆದ ಕಾರು 40 ಕಿ.ಮೀ. ವೇಗದಲ್ಲಿ ಚಲಿಸಲಿಸುವುದಲ್ಲದೇ 40 ಕಿ.ಮೀ. ಮೈಲೇಜ್ ನೀಡಲಿದೆ. ಈ ಕಾರನ್ನು ಡಿಸಿ ಮೋಟರ್,ಡ್ರೈವರ್ ಕಂಟ್ರೋಲರ್, ಲೆಡ್ ಆಸಿಡ್ ಬ್ಯಾಟರಿ, ಚಕ್ರಗಳುಸೇರಿದಂತೆ ಇತರೆ ಫ್ಯಾಬ್ರಿಕೇಶನ್ ಸಾಮಗ್ರಿ ಬಳಸಿಕೊಂಡು ತಯಾರಿಸಲಾಗಿದೆ.
ಲಾಕ್‌ಡೌನ್ ಸಮಯದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಕ್ಕಳಿಗೆ ಭೌತಿಕ ತರಗತಿ ನೀಡಲಾಗದಿದ್ದರೂ, ಪ್ರ್ಯಾಕ್ಟಿಕಲ್ ತರಗತಿಯನ್ನುಶ್ರಮವಹಿಸಿ ನೀಡಲಾಗಿತ್ತು. ಇಂತಹ ಬಿಕ್ಕಟ್ಟಿನಸಮಯದಲ್ಲಿ ನಮ್ಮಕಾಲೇಜಿನ ಮೂವರು ವಿದ್ಯಾರ್ಥಿನಿಯರು ಸವಾಲಾಗಿ ತೆಗೆದುಕೊಂಡು ತೈಲಕ್ಕೆ ಪರ್ಯಾಯವಾದ ಎಲೆಕ್ಟ್ರಿಕ್ ವಾಹನವನ್ನು ಅತಿ ಕಡಿಮೆಖರ್ಚಿನಲ್ಲಿ ತಯಾರಿಸಿರುವುದುಹೆಮ್ಮೆಯ ವಿಚಾರ. ಈ ಸಾಧನೆ ಸಮಾಜಕ್ಕೆ ಕೊಡುಗೆಯಾಗಲಿ ಎಂಬುದು ನಮ್ಮ ಆಶಯ.
– ಪ್ರೊ.ಸದಾಶಿವೇಗೌಡ, ಪ್ರಾಂಶುಪಾಲರು