Advertisement

Lok Sabha Elections; ರಾಜ್ಯ ಬಿಜೆಪಿಯಲ್ಲಿ ಏರಿದ ಚುನಾವಣಾ ಜೋಶ್‌

09:57 PM Mar 16, 2024 | Team Udayavani |

ಬೆಂಗಳೂರು: ಮೊದಲ ಪಟ್ಟಿಯಲ್ಲಿ 20 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಪ್ರಕಟವಾಗುತ್ತಿದ್ದಂತೆ ರಾಜ್ಯ ಬಿಜೆಪಿಯಲ್ಲಿ ಉತ್ಸಾಹ ಹೆಚ್ಚಿದ್ದು ಚುನಾವಣಾ ವಾತಾವರಣ ಸೃಷ್ಟಿ ಮಾಡುವುದಕ್ಕೆ ಅಗತ್ಯವಾದ ತಾಲೀಮುಗಳು ವೇಗ ಪಡೆದುಕೊಂಡಿವೆ.

Advertisement

ಜತೆಗೆ ಬಾಕಿ ಉಳಿದಿರುವ 8 ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳು ಮಿತ್ರಪಕ್ಷ ಜೆಡಿಎಸ್‌ಗೆ ಬಿಟ್ಟುಕೊಟ್ಟಿದೆ. ಉಳಿದ 5 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಹುತೇಕ ಭಾನುವಾರ ಬಿಡುಗಡೆ ಆಗುವ ಸಾಧ್ಯತೆಗಳಿವೆ. ಅಲ್ಲಿಗೆ ಬಿಜೆಪಿ ತನ್ನೆಲ್ಲ 25 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದಂತೆ ಆಗುತ್ತದೆ. ಇನ್ನೇನಿದ್ದರೂ ಚುನಾವಣೆ ಪ್ರಚಾರದ ಸಿದ್ಧತೆಗಳು, ತಂತ್ರಗಾರಿಕೆ, ಕಾರ್ಯಕರ್ತರ ಸಭೆಗಳಿಗೆ ಚಾಲನೆ ಕೊಟ್ಟು ಪ್ರಚಾರ ಆರಂಭಿಸಲಿದೆ.

ಎರಡು ದಿನಗಳ ಹಿಂದಷ್ಟೇ ಚುನಾವಣಾ ನಿರ್ವಹಣಾ ಸಮಿತಿ ರಚನೆ ಮಾಡಲಾಗಿದ್ದು ಇಡೀ ರಾಜ್ಯದಲ್ಲಿ ನಡೆಯುವ ಚುನಾವಣಾ ಚಟುವಟಿಕೆಗಳ ಮೇಲೆ ನಿಗಾ ಇಡುವುದಕ್ಕೆ ರಾಜ್ಯಮಟ್ಟದ “ವಾರ್‌ ರೂಂ’ ಇಂದಿನಿಂದ ಕಾರ್ಯಾಚರಣೆ ಪ್ರಾರಂಭಿಸಿದೆ.

ತುಮಕೂರು, ಶಿವಮೊಗ್ಗ, ದಾವಣಗೆರೆ, ಕೊಪ್ಪಳದಲ್ಲಿ ಎದುರಾಗಿರುವ ಬಂಡಾಯ ಶಮನಕ್ಕೆ ಕಾರ್ಯತಂತ್ರ ಹೆಣೆಯಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ಸಮಾವೇಶ, ರೋಡ್‌ ಶೋ, ಕಾರ್ಯಕರ್ತರ ಜತೆ ಚರ್ಚೆ, ಪ್ರಬುದ್ಧರ ಭೇಟಿ ಇತ್ಯಾದಿ ಪ್ರಕ್ರಿಯೆಗಳಿಗೆ ದಿನಾಂಕ ನಿಗದಿ ಮಾಡಲಾಗುತ್ತಿದೆ.

ಬಿಜೆಪಿಯಲ್ಲಿ ನಡೆಯುತ್ತಿರುವುದೇನು ?
-ಚುನಾವಣಾ ವಾತಾವರಣ ಸೃಷ್ಟಿ
-ರಾಜ್ಯಮಟ್ಟದ ವಾರ್‌ ರೂಂ ಹಾಗೂ ಚುನಾವಣಾ ಕಾರ್ಯಾಲಯ
-ಪ್ರತಿ ದಿನ ನಿರ್ವಹಣಾ ಸಮಿತಿ ಸಭೆ
-ಜಿಲ್ಲಾ ಮಟ್ಟದ ವಾರ್‌ ರೂಂ
-ಫ‌ಲಾನುಭವಿಗಳ ಸಮಾವೇಶ
-ಜಾತಿ ಸಮಾವೇಶ
-ಕಾರ್ಯಕರ್ತರಿಂದ ಮನೆ ಮನೆ ಭೇಟಿ
-ಶಕ್ತಿ ಕೇಂದ್ರ ಹಾಗೂ ಮಹಾ ಶಕ್ತಿ ಕೇಂದ್ರ ವ್ಯಾಪ್ತಿಯಲ್ಲಿ ಸಭೆ
-ಬೂತ್‌ ಶಕ್ತಿ ಕೇಂದ್ರಗಳ ಪುನರುಜ್ಜೀವನ
-ಪೇಜ್‌ ಪ್ರಮುಖರ ನೇಮಕ

Advertisement

 

Advertisement

Udayavani is now on Telegram. Click here to join our channel and stay updated with the latest news.

Next